ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಬ್ರೇಕ್ ಹಾಕಿದ ಹೈಕಮಾಂಡ್: ನಳಿನ್ ಕುಮಾರ್ ಕಟೀಲ್ ಸೇಫ್?
ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇಫ್ ಆಗಿದ್ದಾರೆ. ಎರಡು ತಿಂಗಳಲ್ಲಿ ಚುನಾವಣೆ ಇಟ್ಟುಕೊಂಡು ಅಧ್ಯಕ್ಷರ ಬದಲಾವಣೆ ಮಾಡ್ತಾರಾ ಎಂಬ ಪ್ರಶ್ನೆಗೆ ಹೈಕಮಾಂಡ್ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು (ಜ.18): ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇಫ್ ಆಗಿದ್ದಾರೆ. ಎರಡು ತಿಂಗಳಲ್ಲಿ ಚುನಾವಣೆ ಇಟ್ಟುಕೊಂಡು ಅಧ್ಯಕ್ಷರ ಬದಲಾವಣೆ ಮಾಡ್ತಾರಾ ಎಂಬ ಪ್ರಶ್ನೆಗೆ ಹೈಕಮಾಂಡ್ ನಾಯಕರು ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕದಲ್ಲಿ ಇನ್ನೇನಿದ್ದರೂ ಪಕ್ಷದ ಸಂಘಟನೆ, ಬಿಜೆಪಿ ಮತ್ತೆ ಅಧಿಕಾರ ಹಿಡಿಯುವುದಷ್ಟೇ ಹೈಕಮಾಂಡ್ ಮುಂದಿರೋದು ಎಂದು ರಾಷ್ಟ್ರೀಯ ಕಾರ್ಯಕಾರಣಿಯ ಮುಕ್ತಾಯ ಹಂತದಲ್ಲಿ ಹೈಕಮಾಂಡ್ ಹಿರಿಯ ನಾಯಕರು ತಿಳಿಸಿದ್ದಾರೆ. ಹೀಗಾಗಿ ಕಟೀಲರ ಅವಧಿ ಮುಗಿದಿದ್ದು, ಬದಲಾವಣೆ ಮಾಡ್ತಾರೆ ಅಂಥ ಕಾದುಕುಳಿತಿದ್ದ ಟೀಮ್‌ಗೆ ಹೈಕಮಾಂಡ್ ನಾಯಕರ ಈ ಪ್ರತಿಕ್ರಿಯೆ ಭಾರೀ ನಿರಾಸೆ ಮೂಡಿಸಿದೆ.
ಬೂತ್ ಹಂತದಿಂದ ಪಕ್ಷವನ್ನು ಬಲಗೊಳಿಸುವ ಕೆಲಸ ಆಗಬೇಕು: 2024ರ ಲೋಕಸಭಾ ಚುನಾವಣೆಗೆ ಸನ್ನದ್ದಾರಾಗಿ, ಕಾರ್ಯಕಾರಣಿ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಪ್ರಧಾನಿ ಖಡಕ್ ಸಂದೇಶ ನೀಡಿದ್ದು, ದೆಹಲಿಯಲ್ಲಿ 2 ದಿನಗಳ ಕಾಲ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿಯಿಂದ ರಾಜ್ಯ ನಾಯಕರಿಗೆ ಸಂದೇಶ ರವಾನಿಸಲಾಗಿದೆ. ಲೋಕಸಭಾ ಚುನಾವಣೆಗೆ ಕೇವಲ 1 ವರ್ಷ 2 ತಿಂಗಳು ಬಾಕಿ ಇದೆ. ಈಗಿನಿಂದಲೇ ಲೋಕಸಭಾ ಚುನಾವಣೆಗೆ ಸಿದ್ಧತೆ ನಮ್ಮಿಂದಾಗಬೇಕು. ಮುಂಬರುವ ದಿನಗಳಲ್ಲಿ ಮತದಾರರ ಹಿತಾಸಕ್ತಿ ಕಾಪಾಡುವತ್ತ ಕೆಲಸ ಮಾಡಬೇಕು. ಬಿಜೆಪಿ ಕೇವಲ ರಾಜಕೀಯ ಪಕ್ಷ ಎಂಬುದರ ಬದಲಾಗಿ, ಇದೊಂದು ಜನಪರ ಪಕ್ಷ ಎಂಬ ಭಾವನೆ ಜನರಲ್ಲಿ ಮೂಡಬೇಕು. ವಿರೋಧ ಪಕ್ಷಗಳು ಏನೇ ಹೇಳಿದ್ರೂ ಸಹ ನಮ್ಮ ಪಕ್ಷದ ಮೇಲೆ ಜನರ ಒಲವು ಕ್ರಿಯೇಟ್ ಆಗಬೇಕು.
ಸಚಿವ ಆನಂದ ಸಿಂಗ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಸಿದ್ದರಾಮಯ್ಯ
18 ರಿಂದ 25 ವರ್ಷದ ಯುವ ಜನತೆಯನ್ನ ಸೆಳೆಯುವಲ್ಲಿ ಗಮನ ಹರಿಸಬೇಕಿದೆ. ಈ ಯುವಜನತೆ ಹಿಂದಿನ ಸರ್ಕಾರಗಳ ದುರಾಡಳಿತದ ಬಗ್ಗೆ ಮಾಹಿತಿ ಇರುವುದಿಲ್ಲ, ಹೀಗಾಗಿ ನಮ್ಮ ಆಡಳಿತಾದಿಂದ ಹಿಂದಿನ ದುರಾಡಳಿತ ತೊಡೆದು ಹಾಕಿರುವ ಬಗ್ಗೆ ಮಾಹಿತಿ ವಿನಿಮಯ ಮಾಡಬೇಕು. ವಿಪಕ್ಷಗಳು ದುರ್ಬಲಗೊಂಡಿವೆ ಎಂದು ತಿಳಿಯುವ ಅಗತ್ಯವಿಲ್ಲ. ಎದುರಾಳಿ ಎಷ್ಟೇ ಬಲಿಷ್ಠವಾಗಿದ್ದರು ಸಹ ನಾವು ವಿಜಯ ಪಾತಾಕೆ ಹಾರಿಸುತ್ತೇವೆ ಎಂಬ ಆತ್ಮ ವಿಶ್ವಾಸ ಬೇಕು. ಬೂತ್ ಹಂತದಿಂದ ಪಕ್ಷವನ್ನು ಬಲಗೊಳಿಸುವ ಕೆಲಸ ಆಗಬೇಕು . 2024ರ ಲೋಕಸಭೆ ಚುನಾವಣೆಗೆ ಕಾರ್ಯಕರ್ತರೆಲ್ಲರೂ ಸಿದ್ಧಗೊಳ್ಳಬೇಕು ಎಂದು ಪ್ರಧಾನಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಸಂದೇಶ ನೀಡಿದ್ದಾರೆ.
ದೇಶದ ಎಲ್ಲಾ ಚುನಾವಣೆಗೂ ಮೋದಿಯೇ ಸರ್ವಸ್ವ ಅಲ್ಲ: ಮೋದಿಯಿಂದಲೇ ಎಲ್ಲಾ ಚುನಾವಣೆ ಗೆಲ್ತೆವೇ ಅಂದ್ರೆ ಅದು ಸಾಧ್ಯ ಇಲ್ಲ. ಎಲ್ಲಾ ರಾಜ್ಯದ, ಎಲ್ಲಾ ಪ್ರದೇಶಕ್ಕೂ ಆಗಮಿಸಿ ರ್ಯಾಲಿ, ರೋಡ್ ಶೋ ಮಾಡೋಕೆ ಮೋಧೀಯಿಂದ ಆಗೋಲ್ಲ. ರಾಜ್ಯಗಳಲ್ಲಿ ಸ್ಥಳೀಯ ನಾಯಕರ ವರ್ಚಸ್ಸು ಹೆಚ್ಚಾಗಬೇಕಿದೆ. ಗುಜರಾತ್‌ನಂತೆಯೇ ದೇಶದ ಎಲ್ಲಾ ಭಾಗದಲ್ಲೂ ಮೋದಿಯಿಂದಲೇ ಬಿಜೆಪಿ ಗೆಲ್ಲೋಲ್ಲ.ಗುಜರಾತ್ ಮಾಡೆಲ್ ಒಂದೇ ಹೇಳಿಕೊಂಡು ನೀವು ಗೆಲ್ಲೋಕೆ ಸಾಧ್ಯ ಇಲ್ಲ. ಗುಜರಾತ್ ಫಲಿತಾಂಶದಂತೆ ಎಲ್ಲಾ ರಾಜ್ಯದಲ್ಲೂ ಬಿಜೆಪಿ ಗೆಲುವು ಸಾಧಿಸಬೇಕು.ರಾಷ್ಟ್ರ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಹೈ ಕಮಾಂಡ್‌ನಿಂದ ರಾಜ್ಯ ನಾಯಕರಿಗೆ ಸೂಚನೆ ನೀಡಲಾಗಿದೆ. ಗುಜರಾತ್ ಫಲಿತಾಂಶವನ್ನ ಉದಾಹರಣೆಯಾಗಿ ಇಟ್ಟುಕೊಂಡು, ಅಲ್ಲಿಂನಂತೆಯೇ ಎಲ್ಲಾ ರಾಜ್ಯದಲ್ಲೂ ಪಕ್ಷ ಆಡಳಿತಕ್ಕೆ ಬರಬೇಕು. ಗುಜರಾತ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದಂತೆ ಎಲ್ಲಾ ರಾಜ್ಯದಲ್ಲೂ ಸಹ ಕಮಲ ಅರಳಬೇಕು. ಆಲಸ್ಯ ಬಿಟ್ಟು, ಜವಾಬ್ದಾರಿಯುತವಾಗಿ ಕೆಲಸ ಮಾಡುವಂತೆ ಹೈಕಮಾಂಡ್ ಆದೇಶ ನೀಡಿದೆ.
ಮಾಚನಾಳ ತಾಂಡಾ ಅಭಿವೃದ್ಧಿಗೆ 1 ಕೋಟಿ ವಿಶೇಷ ಅನುದಾನ: ಸಚಿವ ಅಶೋಕ ಘೋಷಣೆ
ಎಲ್ಲಾ ಚುನಾವಣೆಗಳ ಪ್ರಚಾರಕ್ಕೆ ಮೋದಿ ಬರಲ್ಲ: ಮೋದಿ ಬರ್ತಾರೆ, ನಾವು ಚುನಾವಣೆ ಗೆಲ್ತೆವೇ ಅನ್ನೋ ಭ್ರಮೆ ಬಿಟ್ಟಾಕಿ. ನಿಮ್ಮ ರಾಜ್ಯದಲ್ಲಿ ಅಧಿಕಾರ ಹಿಡಿಯೋಕೆ ನೀವು ಕೂಡ ಶ್ರಮ ವಹಿಸಿ. ಈ ವರ್ಷ ಚುನಾವಣೆ ಎದುರಿಸ್ತಿರೋ ರಾಜ್ಯಗಳಿಗೆ ಮೋದಿ ಹಾಗೂ ಹೈಕಮಾಂಡ್‌ನಿಂದ ಸೂಚನೆ ನೀಡಲಾಗಿದ್ದು, ಲೋಕಸಭೆ ಚುನಾವಣೆಗೆ ಜೊತೆಗೆ ನಿಮ್ಮ ರಾಜ್ಯದ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು. ಚುನಾವಣೆ ವಿಚಾರವನ್ನ ಯಾರು ಕೂಡ ಹಗುರವಾಗಿ ಪರಿಗಣಿಸುವಂತಿಲ್ಲ. ಜನರ ವಿಶ್ವಾಸ ಗಳಿಸಿ ಅಧಿಕಾರ ಹಿಡಿಯುವುದು ನಿಮ್ಮ ಜವಾಬ್ದಾರಿ ಅಂತಾ ಮೋದಿ ಕರೆ ನೀಡಿದ್ದು, ಕರ್ನಾಟಕ ಸೇರಿ 9 ರಾಜ್ಯಗಳ ನಾಯಕರಿಗೆ ಮೋದಿ ಸಲಹೆ ನೀಡಿದ್ದಾರೆ.