ಸಚಿವ ಆನಂದ ಸಿಂಗ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಸಿದ್ದರಾಮಯ್ಯ
ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗಿ 200 ಜನ ಆಸ್ಪತ್ರೆ ಸೇರಿದ್ದಾರೆ. ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಮಂತ್ರಿ ಆಗಿರುವ ಆನಂದ ಸಿಂಗ್ ರಾಜಿನಾಮೆ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಹೊಸಪೇಟೆ (ಜ.18): ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗಿ 200 ಜನ ಆಸ್ಪತ್ರೆ ಸೇರಿದ್ದಾರೆ. ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಮಂತ್ರಿ ಆಗಿರುವ ಆನಂದ ಸಿಂಗ್ ರಾಜಿನಾಮೆ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು. ಡಾ. ಪುನೀತ್ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಜಾಧ್ವನಿ ಬಸ್‌ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೊಸಪೇಟೆಯ 25 ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಚರಂಡಿ ನೀರು ಮಿಶ್ರಣವಾಗುತ್ತಿದೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ 15 ಲಕ್ಷ ಮನೆ ನಿರ್ಮಿಸಿದ್ದೇವು. ಆದರೆ, ಈ ಸರ್ಕಾರ ಬಡವರಿಗೆ ಮನೆ ನಿರ್ಮಿಸಿ ಕೊಟ್ಟಿಲ್ಲ. ಇದೇ ಕ್ಷೇತ್ರದ ಶಾಸಕ ಆನಂದ ಸಿಂಗ್ ಒಂದೇ ಒಂದು ಮನೆ ನಿರ್ಮಿಸಿ ಕೊಟ್ಟಿಲ್ಲ. 28 ಸಾವಿರ ಬಡವರಿಗೆ ನಿವೇಶನದ ಹಕ್ಕುಪತ್ರ ಕೊಡುತ್ತೇವೆ ಎಂದಿದ್ದ ಆನಂದ ಸಿಂಗ್ ಎಲ್ಲಿ ಕೊಟ್ಟಿದ್ದಾರೆ. ಇಂತಹವರು ಮತ್ತೆ ಗೆಲ್ಲಬೇಕಾ? ಎಂದು ಪ್ರಶ್ನಿಸಿದರು.
ಸೈಕಲ್, ಶೂ ಅನುದಾನ ಮಕ್ಕಳ ಖಾತೆಗೇ ವರ್ಗ?: ಸರ್ಕಾರ ಚಿಂತನೆ
ಸಕ್ಕರೆ ಕಾರ್ಖಾನೆ ಆರಂಭಿಸಲಿ: ಈ ಭಾಗದಲ್ಲಿ 7ರಿಂದ 8 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತದೆ. ಚಿತ್ತವಾಡ್ಗಿ ಐಎಸ್‌ಆರ್ ಸಕ್ಕರೆ ಕಾರ್ಖಾನೆ, ಕಂಪ್ಲಿ ಶುಗರ್ ಫ್ಯಾಕ್ಟರಿ ಬಂದ್ ಆಗಿದೆ. ವೀರಾವೇಶದ ಭಾಷಣ ಮಾಡಿರುವ ಆನಂದ ಸಿಂಗ್, ಸಕ್ಕರೆ ಕಾರ್ಖಾನೆ ಆರಂಭಿಸಿ, 10 ಸಾವಿರ ಎತ್ತಿನ ಬಂಡಿಗಳಿಗೆ, 40 ಸಾವಿರ ರೈತ ಕುಟುಂಬಗಳಿಗೆ ಉದ್ಯೋಗ ಕೊಡಿಸಲಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಈ ಫ್ಯಾಕ್ಟರಿಗಳನ್ನು ಆರಂಭಿಸುತ್ತೇವೆ ಎಂದರು.
ಬೆಲ್ಲದ ಗಾಣ ಮುಚ್ಚಿಸಬೇಡಿ: ಸಕ್ಕರೆ ಕಾರ್ಖಾನೆ ಮುಚ್ಚಿರುವುದರಿಂದ ಬೆಲ್ಲದ ಗಾಣಗಳೇ ರೈತರಿಗೆ ಆಸರೆಯಾಗಿವೆ. ಈಗ ಬೆಲ್ಲದ ಗಾಣಗಳಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ. ಈ ಬೆಲ್ಲದ ಗಾಣಗಳನ್ನು ಮುಚ್ಚಿಸಿದರೆ ಮುಂದಿನ ದಿನಗಳಲ್ಲಿ ನಾವು ಜಿಲ್ಲಾಧಿಕಾರಿ ವಿರುದ್ಧವೇ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಎಚ್.ಕೆ. ಪಾಟೀಲ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ವಿ.ಎಸ್. ಉಗ್ರಪ್ಪ, ಶ್ರೀಧರ್ ಬಾಬು, ನಲಪಾಡ್,ಬಸವರಾಜ ರಾಯರೆಡ್ಡಿ, ಐ.ಜಿ. ಸನದಿ, ಅಲ್ಲಂ ವೀರಭದ್ರಪ್ಪ.
ವೆಂಕಟರಾವ್ ಘೋರ್ಪಡೆ, ಅಬ್ದುಲ್ ವಹಾಬ್, ಪುಷ್ಪಾ ಅಮರನಾಥ, ಸಚಿನ್ ಮೇಘಾ, ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಭೀಮಾ ನಾಯ್ಕ, ಜೆ.ಎನ್. ಗಣೇಶ, ಮಾಜಿ ಶಾಸಕರಾದ ಎಚ್.ಆರ್. ಗವಿಯಪ್ಪ, ಸಿರಾಜ್ ಶೇಖ್, ಚಂದ್ರಶೇಖರಯ್ಯ, ಅನಿಲ್ ಲಾಡ್, ಮುಖಂಡರಾದ ರಾಜಶೇಖರ ಹಿಟ್ನಾಳ್, ದೀಪಕ್ ಸಿಂಗ್, ಕೆಎಸ್‌ಎಲ್ ಸ್ವಾಮಿ, ಕುರಿ ಶಿವಮೂರ್ತಿ, ಎಚ್‌ಎನ್‌ಎಫ್ ಇಮಾಮ್, ಸಯ್ಯದ್ ಮಹಮ್ಮದ್, ಎಲ್. ಸಿದ್ದನಗೌಡ, ಕೆ.ಎಂ. ಹಾಲಪ್ಪ, ಗುಜ್ಜಲ ನಾಗರಾಜ, ಗುಜ್ಜಲ ರಘು, ಭರತ್ ರೆಡ್ಡಿ, ಪಿ.ಟಿ. ಭರತ್, ಬಿ.ವಿ. ಶಿವಯೋಗಿ, ರಫೀಕ್, ವಿನಾಯಕ ಶೆಟ್ಟರ್, ಸಿ. ಖಾಜಾಹುಸೇನ್ ಮತ್ತಿತರರಿದ್ದರು.
ಬಿ. ನಾಗೇಂದ್ರ, ಸಂತೋಷ್ ಲಾಡ್ ಗೈರು!: ಕಾಂಗ್ರೆಸ್‌ನ ಪ್ರಜಾಧ್ವನಿ ಕಾರ್ಯಕ್ರಮದಿಂದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಹಾಗೂ ಮಾಜಿ ಸಚಿವ ಸಂತೋಷ್ ಲಾಡ್ ಗೈರು ಹಾಜರಾಗಿದ್ದರು. ಇವರಿಬ್ಬರ ಗೈರು ಹಾಜರಿ ಭಾರಿ ಚರ್ಚೆಗೆ ಗ್ರಾಸವನ್ನೊದಗಿಸಿತ್ತು.