ಪಕ್ಷ ಸೇರುವಾಗಿನ ಉತ್ಸಾಹ ಸಂಘಟನೆಯಲ್ಲೂ ಇರಲಿ: ನಿಖಿಲ್ ಕುಮಾರಸ್ವಾಮಿ ಸಲಹೆ
ಪಕ್ಷಕ್ಕೆ ಸೇರುವಾಗ ಇರುವ ಉತ್ಸಾಹ, ಹುಮ್ಮಸ್ಸು ಮುಂದೆ ಪಕ್ಷ ಸಂಘಟನೆಯಲ್ಲೂ ಸದಾ ಮುಂದುವರಿಯಲಿ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಕಿಲ್ ಕುಮಾರಸ್ವಾಮಿ ಕರೆ ನೀಡಿದರು.
ಟಿ. ನರಸೀಪುರ (ಫೆ.5) : ಪಕ್ಷಕ್ಕೆ ಸೇರುವಾಗ ಇರುವ ಉತ್ಸಾಹ, ಹುಮ್ಮಸ್ಸು ಮುಂದೆ ಪಕ್ಷ ಸಂಘಟನೆಯಲ್ಲೂ ಸದಾ ಮುಂದುವರಿಯಲಿ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಕಿಲ್ ಕುಮಾರಸ್ವಾಮಿ ಕರೆ ನೀಡಿದರು. ಪಟ್ಟಣದ ಶ್ರೀಗುಂಜಾ ನರಸಿಂಹಸ್ವಾಮಿ ದೇವಾಲಯದ ಆವರಣದ ವೇದಿಕೆಯಲ್ಲಿ ಯುವ ಮುಖಂಡ ಯರಗನಹಳ್ಳಿ ಸಂಪತ್ ಕುಮಾರ್ ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಜವಬ್ದಾರಿ ಯುವಕರ ಮೇಲೆದ್ದು ಯುವಕರು ಪಕ್ಷದ ಗೆಲುವಿಗಾಗಿ ದುಡಿಯಬೇಕು ಎಂದರು.
ರಾಜ್ಯದಲ್ಲಿ ಕುಮಾರಣ್ಣ(HD Kumaraswamy) ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬಡವರು, ರೈತರು ಸೇರಿದಂತೆ ನೊಂದವರ, ಮಹಿಳೆಯರ ಪರ ಆಡಳಿತ ನಡೆಯಲಿದ್ದು ತಾವು ಕುಮಾರಣ್ಣನ ಕೈ ಬಲ ಪಡಿಸಲಿಕ್ಕೆ ನರಸೀಪುರ ಕ್ಷೇತ್ರದಲ್ಲಿ ಮನೆ ಮಗನಾಗಿ ಜನ ಸಾಮಾನ್ಯರ ಮದ್ಯ ಇದ್ದು ಕೆಲಸ ಮಾಡುತಿರುವ ಶಾಸಕ ಎಂ. ಅಶ್ವಿನ್‌ಕುಮಾರ್ ಅವರನ್ನು ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದೊಂದಿಗೆ ಗೆಲ್ಲಿಸಬೇಕು ಎಂದರು.
ಚುನಾವಣೆ ಗೆಲ್ಲಲು ಬಿಜೆಪಿಯಿಂದ ರಥಯಾತ್ರೆ, ಕಾಂಗ್ರೆಸ್‌ನಲ್ಲಿ ಹೆಚ್ಚಾಯ್ತಾ ಅಸಾಮಾಧಾನ ಕಿಡಿ?
ಶಾಸಕ ಎಂ. ಅಶ್ವಿನ್ ಕುಮಾರ್ ಮಾತನಾಡಿ, ಇಂದು ಸಂಪತ್ ಕುಮಾರ್ ಜೆಡಿಎಸ್ ಪಕ್ಷದ ಸಿದ್ದಾಂತ ಮತ್ತು ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಅವರ ಜನಪರ ಆಡಳಿತ ಮೆಚ್ಚಿ ತಮ್ಮ ಸಹಸ್ರಾರು ಸಂಖ್ಯೆಯ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಮುಂದೆ ಸಹೋದರ ಸಂಪತ್ ಕುಮಾರ್ ಮತ್ತು ಅವರ ಬೆಂಬಲಿಗರನ್ನು ಗೌರವಯುತವಾಗಿ ನಡೆಸಿಕೊಳ್ಳುವುದರ ಜೊತೆಗೆ ರಾಜಕೀಯವಾಗಿ ಅವರನ್ನು ಬೆಳೆಸುವ ಜವಬ್ದಾರಿ ನನ್ನದು ಎಂದರು. ಪಕ್ಷ ಸೇರ್ಪಡೆಗೂ ಮುನ್ನ ಸಂಪತ್ ಕುಮಾರ್ ಸಾವಿರಾರು ಯುವಕರ ಜೊತೆಯಲ್ಲಿ ಪಟ್ಟಣದ ಕಾಲೇಜು ರಸ್ತೆ, ಲಿಂಕ್ ರಸ್ತೆ, ಭಗವಾನ್ ಚಿತ್ರ ಮಂದಿರ ವೃತ್ತ ಸೇರಿದಂತೆ ಮಾರ್ಕೆಟ್ ರಸ್ತೆಯಲ್ಲಿ ಬೈಕ್ ರಾರಯಲಿ ನಡೆಸಿದರು. ರಾರಯಲಿ ವೇಳೆ ಎಚ್.ಡಿ. ಕುಮಾರಸ್ವಾಮಿ ಮತ್ತು ಅಶ್ವಿನ್‌ಕುಮಾರ್ ಪರ ಘೋಷಣೆ ಮೊಳಗಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಕ್ಷೇತ್ರಾಧ್ಯಕ್ಷ ಸಿ.ಬಿ. ಹುಂಡಿ ಚಿನ್ನಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಸೋಸಲೆ ಸಿದ್ದಾರ್ಥ, ಸದಸ್ಯ ಜಯಪಾಲ ಭರಣಿ, ಮುಖಂಡರಾದ ಕರೋಹಟ್ಟಿಪ್ರಭುಸ್ವಾಮಿ, ಕುರುಬೂರು ವೀರೇಶ್, ದಿಲಿಪ್, ಶಿವಕುಮಾರ್, ಸೋಮು ದಾದಾ, ಅಶ್ವಿನ್, ಮೇಗಡಹಳ್ಳಿ ದ್ವಾರಕೇಶ್, ಸೋಸಲೆ ರಾಜಣ್ಣ, ಕೆಬ್ಬೆಹುಂಡಿ ಮಹದೇವಸ್ವಾಮಿ ಮೊದಲಾದವರು ಇದ್ದರು.
ಕಾಂಗ್ರೆಸ್ ಕಾಲು ಮುರಿದ ಕುದುರೆ ಕೊಟ್ಟು ನನಗೆ ಅಧಿಕಾರ ನಡೆಸಲು ಬಿಟ್ಟರು; ಎಚ್‌ಡಿಕೆ
ಕ್ಷೇತ್ರದಲ್ಲಿ ಎಲ್ಲರ ಕೈಗೆಟಕುವ ಶಾಸಕರಾಗಿ ರಾಜಕೀಯ ದ್ವೇಷ ಇಲ್ಲದೆ, ಪಕ್ಷ ಬೇದ, ಜಾತಿ ಬೇದ ಮಾಡದೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿರುವ ಇಂತಹ ಶಾಸಕರು ನಮಗೆ ಸಿಕ್ಕಿರುವುದು ಪುಣ್ಯ. ಹಾಗೆಯೇ ಮುಂದೆ ಸಿಗುವುದು ಕಷ್ಟ. ಹಾಗಾಗಿ ನರಸೀಪುರ ಕ್ಷೇತ್ರದ ಜನತೆಯ ಹಿತಕ್ಕಾಗಿ ಶಾಸಕ ಎಂ. ಅಶ್ವಿನ್‌ಕುಮಾರ್ ಅವರನ್ನು ಮತ್ತೊಮ್ಮೆ ಗೆಲ್ಲಿಸಲು ಪಣ ತೊಟ್ಟು ಪಕ್ಷಕ್ಕೆ ನನ್ನ ಸ್ನೇಹಿತರ ಜೊತೆಯಲ್ಲಿ ಸೇರಿದ್ದೇನೆ.
- ಯರಗನಹಳ್ಳಿ ಸಂಪತ್ ಕುಮಾರ್, ಯುವ ಮುಖಂಡ