ಡಬಲ್ ಇಂಜಿನ್ ಸರ್ಕಾರದ ಸಾಧನೆ ಚುನಾವಣೆಯಲ್ಲಿ ನೆರವಾಗಲಿದೆ-ಬಿ.ಎಲ್.ವರ್ಮಾ
ಜಿಲ್ಲೆಯಲ್ಲಿ ಫುಡ್ ಇಂಡಸ್ಟ್ರೀಸ್ ಪ್ರಾರಂಭ, ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮುಂತಾದ ಯೋಜನೆಗಳನ್ನು ಜಾರಿಗೊಳಿಸಲು ಚಿಂತಿಸಲಾಗಿದೆ ಎಂದು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಮತ್ತು ಸಹಕಾರ ಇಲಾಖೆ ರಾಜ್ಯ ಸಚಿವ ಬಿ.ಎಲ್. ವರ್ಮಾ ಹೇಳಿದರು.
ಉಡುಪಿ (ಏ.25) : ಜಿಲ್ಲೆಯಲ್ಲಿ ಫುಡ್ ಇಂಡಸ್ಟ್ರೀಸ್ ಪ್ರಾರಂಭ, ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮುಂತಾದ ಯೋಜನೆಗಳನ್ನು ಜಾರಿಗೊಳಿಸಲು ಚಿಂತಿಸಲಾಗಿದೆ ಎಂದು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಮತ್ತು ಸಹಕಾರ ಇಲಾಖೆ ರಾಜ್ಯ ಸಚಿವ ಬಿ.ಎಲ್. ವರ್ಮಾ ಹೇಳಿದರು.
ಅವರು ಮಂಗಳವಾರ, ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಕಳೆದ 3 ವರ್ಷಗಳಿಂದ ಡಬಲ್ ಇಂಜಿನ್ ಸರ್ಕಾರ(Double engine Govt)ದ ಲಾಭ ಕರ್ನಾಟಕ ಜನರಿಗೆ ಲಭಿಸಿದ್ದು, ಬೆಂಗಳೂರಿನಲ್ಲಿ 2014ಕ್ಕಿಂತ ಮುನ್ನ ಕೇವಲ 7 ಕಿಮೀ ಮೆಟ್ರೋ ಕಾಮಗಾರಿ ನಡೆದಿತ್ತು. ಬಿಜೆಪಿ ಸರ್ಕಾರ(BJP Government) ಬಂದ ಬಳಿಕ 56 ಕಿಮೀ ಕಾಮಗಾರಿ ನಡೆದಿದೆ. ಇದನ್ನು 100 ಕಿಮೀ ವರೆಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಅದೇ ರೀತಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ಯಾಟಲೈಟ್ ರಿಂಗ್ ರೋಡ್‌ಗೆ 15 ಸಾವಿರ ಕೋಟಿ ರೂ. ನೀಡಲಾಗಿದೆ. ಅಮೃತ್ ಯೋಜನೆಯಲ್ಲಿ 6 ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ. ಉಪನಗರಗಳ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.
ಅಮಿತ್ ಶಾ ಮಂಗಳೂರು ರೋಡ್ ಶೋ ಮುಂದೂಡಿಕೆ; 30ರಂದು ಪುತ್ತೂರು, ಬೈಂದೂರಲ್ಲಿ ಯೋಗಿ ಅಬ್ಬರ!
ಅಷ್ಟ ಲಕ್ಷ್ಮೀಯರು ಎಂದು ಕರೆಯಲ್ಪಡುವ 8 ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ರತೀ ಸಚಿವಾಲಯದಲ್ಲಿ ಶೇ. 10ರಷ್ಟು ಅನುದಾನವನ್ನು ಮೀಸಲಿಟ್ಟಿದೆ. 2014ಕ್ಕಿಂತ ಪೂರ್ವದಲ್ಲಿ ಎಲ್ಲಾ ಸರ್ಕಾರಗಳು ಈಶಾನ್ಯರಾಜ್ಯಗಳನ್ನು ಕಡೆಗಣಿಸಿದ್ದವು. ಮೋದಿ ಸರ್ಕಾರ ದೇಶದ ಜನಸಂಖ್ಯೆಯಲ್ಲಿ ಶೇ.3.7ರಷ್ಟಿರುವ ಈಶಾನ್ಯ ರಾಜ್ಯಗಳಿಗೆ ಶೇ.10 ಅನುದಾನ ಮೀಸಲಿಟ್ಟಿದೆ. ಇದರಿಂದ ಈ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆದಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿ(PM Narendra Modi) ಜನಧನ ಖಾತೆ(Janadhan scheme) ಪ್ರಾರಂಭಿಸಿದ ಕಾರಣದಿಂದ ಶೇ.100ರಷ್ಟು ಸಹಾಯಧನ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ದೆಹಲಿಯಲ್ಲಿ 1 ರೂ. ಬಿಡುಗಡೆಯಾದರೆ ಅಂತಿಮ ವ್ಯಕ್ತಿಯನ್ನು ತಲುಪುವಾಗ 15 ಪೈಸೆ ಸಿಗುತ್ತಿತ್ತು ಎಂಬುದನ್ನು ಸ್ವತಃ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಉಲ್ಲೇಖಿಸಿದ್ದರು.
ಉಡುಪಿಯಲ್ಲಿ ಈ ದಿನ ನಮ್ಮ ನೆರಳು ನಮಗೆ ಕಾಣದ ಝೀರೋ ಶ್ಯಾಡೋ ಡೇ!
ಪತ್ರಿಕಾಗೋಷ್ಟಿಯಲ್ಲಿ ನಗರಾಧ್ಯಕ್ಷ ಮಹೇಶ್ ಠಾಕೂರ್, ವಕ್ತಾರ ರಾಘವೇಂದ್ರ ಕಿಣಿ, ಪ್ರಮುಖರಾದ ರೋಶನ್ ಶೆಟ್ಟಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ ಉಪಸ್ಥಿತರಿದ್ದರು.