ಉಡುಪಿಯಲ್ಲಿ ಈ ದಿನ ನಮ್ಮ ನೆರಳು ನಮಗೆ ಕಾಣದ ಝೀರೋ ಶ್ಯಾಡೋ ಡೇ!
ಉಡುಪಿಯಲ್ಲಿ ಇಂದು ಝೀರೋ ಶ್ಯಾಡೋ ಡೇ. ಅಂದ್ರೆ ನಡು ಮಧ್ಯಾಹ್ನ 12.29ಕ್ಕೆ ಎಲ್ಲಾ ವಸ್ತುಗಳು ಅತಿ ಕಡಿಮೆ ನೆರಳನ್ನ ದಾಖಲು ಮಾಡಿದೆ. ಈ ವಿದ್ಯಾಮಾನವನ್ನು ಶೂನ್ಯ ನೆರಳು ಎನ್ನಲಾಗುತ್ತದೆ.
ಉಡುಪಿ (ಏ.25): ಕರಾವಳಿ ಜಿಲ್ಲೆ ಉಡುಪಿಯಲ್ಲಿ ಇಂದು ಝೀರೋ ಶ್ಯಾಡೋ ಡೇ. ಅಂದ್ರೆ ನಡು ಮಧ್ಯಾಹ್ನ 12.29ಕ್ಕೆ ಎಲ್ಲಾ ವಸ್ತುಗಳು ಅತಿ ಕಡಿಮೆ ನೆರಳನ್ನ ದಾಖಲು ಮಾಡಿದೆ. ಈ ವಿದ್ಯಾಮಾನವನ್ನು ಶೂನ್ಯ ನೆರಳು ಎನ್ನಲಾಗುತ್ತದೆ. ಸೂರ್ಯ ಆಕಾಶದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವಾಗ ನಮ್ಮ ನೆತ್ತಿಯ ನೇರದಲ್ಲಿ ಹಾದು ಹೋಗುತ್ತಾನೆ. ಸೂರ್ಯನು ನಮ್ಮ ತಲೆಯ ಮೇಲೆ ನಿಖರವಾಗಿ ಇರುವಾಗ ನಮ್ಮ ನೆರಳು ನೇರವಾಗಿ ಕಾಲ ಕೆಳಗಿರುತ್ತದೆ. ನಾವು ನಮ್ಮ ನೆರಳಿನ ಮೇಲೆಯೇ ನಿಂತಿರುವುದರಿಂದ ಈ ನೆರಳು ಗೋಚರಿಸುವುದಿಲ್ಲ. ಇದನ್ನು ಖಗೋಳ ವಿಜ್ಞಾನದಲ್ಲಿ'ಶೂನ್ಯ ನೆರಳು' ಎನ್ನಲಾಗುತ್ತದೆ.
ಭೂಮಿಯು 23.5 ಡಿಗ್ರಿ ಕೋನದಲ್ಲಿ ಬಾಗಿರುವುದರಿಂದ, ಭೂಮಿಯು ಸೂರ್ಯನ ಸುತ್ತ ಚಲಿಸುವಾಗ ಸೂರ್ಯ ಉತ್ತರದಿಂದ ದಕ್ಷಿಣಕ್ಕೆ ಚಲಿಸುವಂತೆ ಕಾಣುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ವಾಸಿಸುವ ಎಲ್ಲ ಜನರಿಗೆ ವರ್ಷದ ಎರಡು ದಿನಗಳಲ್ಲಿ ಸೂರ್ಯ ಉತ್ತುಂಗದಲ್ಲಿ ಕಾಣಿಸಿಕೊಳ್ಳುತ್ತಾನೆ.
ಈ ಎರಡು ದಿನಗಳು ಪ್ರತಿವರ್ಷ ಏಪ್ರಿಲ್- ಮೇ ಮತ್ತು ಆಗಸ್ಟ್‌ನಲ್ಲಿ ಸಂಭವಿಸುತ್ತದೆ. ಆಗಸ್ಟ್ ತಿಂಗಳು ಮಳೆಗಾಲವಾಗಿರುವುದರಿಂದ ಬೇಸಿಗೆ ಕಾಲವಾದ ಏಪ್ರಿಲ್ ತಿಂಗಳಿನಲ್ಲಿಈ ಶೂನ್ಯ ನೆರಳಿನ ದಿನ ನೋಡುವ ಅವಕಾಶ ಹೆಚ್ಚಿರುತ್ತದೆ. ಯಾವುದೇ ಉಪಕರಣ ಬಳಸದೆ ಗಮನಿಸಬಹುದಾದ ಸುಲಭವಾದ ಖಗೋಳ ವಿದ್ಯಮಾನಗಳಲ್ಲಿ ಇದೂ ಒಂದು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ಜೀರೋ ಶಾಡೋ ಡೇ ಕಾರ್ಯಕ್ರಮದಲ್ಲಿ ಭಾಗಿಯಾದರು. ಹತ್ತಾರು ವಸ್ತುಗಳನ್ನು ತೆರೆದ ಜಾಗದಲ್ಲಿರಿಸಿ ನೆರಳಿಲ್ಲದ ವಿದ್ಯಾಮಾನವನ್ನು ಕಣ್ತುಂಬಿಕೊಳ್ಳಲಾಯ್ತು.
ಪ್ರತಿವರ್ಷ ಎಪ್ರಿಲ್, ಮೇ ಆಗಸ್ಟ್ ನಲ್ಲಿ ಈ ಖಗೋಳ ವಿಸ್ಮಯದ ಚಮತ್ಕಾರ ನಡೆಯುತ್ತಿದ್ದು, ನಮ್ಮ ನೆರಳು ನಮಗೆ ಕಾಣದಂತೆ ಆಗುವುದನ್ನು ಶೂನ್ಯ ನೆರಳಿನ ದಿನ ಅಂತ ಕರೆಯಲಾಗುತ್ತದೆ. ಮಂಗಳೂರಿನ ಜನ ಏಪ್ರಿಲ್ 24 ರಂದು ಮಧ್ಯಾಹ್ನ 12.28 ಕ್ಕೆ ಮತ್ತು ಏ.25ರಂದು ಉಡುಪಿಯಲ್ಲಿ ಮಧ್ಯಾಹ್ನ 12.29 ಕ್ಕೆ ಶೂನ್ಯ ನೆರಳಿನ ವಿದ್ಯಮಾನ ವೀಕ್ಷಿಸಿದ್ದಾರೆ.
ಏ.26ರಂದು ಕುಂದಾಪುರ, ತೀರ್ಥಹಳ್ಳಿ, ಗೌರಿಬಿದನೂರು
ಏ.27ರಂದು ಭಟ್ಕಳ, ಶಿವಮೊಗ್ಗ, ಚನ್ನಗಿರಿ
ಏ.28ರಂದು ಹೊನ್ನಾವರ, ಕುಮಟಾ, ಶಿಕಾರಿಪುರ, ಚಿತ್ರದುರ್ಗ
ಏ.29ರಂದು ಗೋಕರ್ಣ, ಶಿರಸಿ, ರಾಣೆಬೆನ್ನೂರು, ದಾವಣಗೆರೆ
ಏ.30ರಂದು ಕಾರವಾರ, ಹಾವೇರಿ,
ಮೇ 1ರಂದು ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ
ಮೇ 2ರಂದು ಧಾರವಾಡ, ಗದಗ
ಮೇ 3ರಂದು ಬೆಳಗಾವಿ, ಸಿಂಧನೂರು
ಮೇ 4ರಂದು ಗೋಕಾಕ್, ಬಾಗಲಕೋಟೆ, ರಾಯಚೂರು
ಮೇ 6ರಂದು ಯಾದಗಿರಿ
ಮೇ 7ರಂದು ವಿಜಯಪುರ
ಮೇ 9ರಂದು ಕಲಬುಧಿರಗಿ
ಮೇ 10ರಂದು ಹುಮ್ನಾಬಾದ್
ಮೇ 11 ರಂದು ಬೀದರ್.
Zero Shadow Day: ಇಂದು ಮಧ್ಯಾಹ್ನ 12.17 ಕ್ಕೆ ನಿಮ್ಮ ನೆರಳು ನಿಮಗೇ ಕಾಣಿಸಲ್ಲ!
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಅತುಲ್ ಭಟ್, ಆಡಳಿತಾಧಿಕಾರಿ ಎಪಿ ಭಟ್ ವಿದ್ಯಾರ್ಥಿಗಳಿಗೆ ಈ ಮಾಹಿತಿ ನೀಡಿದರು.
ದೇವೇಗೌಡರಿಗೆ ನನ್ನ ದೇಹದ ಮೇಲಾದ ಪರಿಣಾಮದ ಬಗ್ಗೆ ಆತಂಕ ಇದೆ: ಹೆಚ್‌ಡಿಕೆ
ಸೂರ್ಯ ನಮ್ಮ ನೆತ್ತಿಯ ಮೇಲೆ ಹಾದು ಹೋಗುವಾಗ ಈ ವಿದ್ಯಮಾನ ಘಟಿಸಲಿದೆ. ವರ್ಷದಲ್ಲಿ 2 ದಿನ ಮಾತ್ರ ಇಂತಹ ಕೌತುಕ ನಡೆಯಲಿದ್ದು ನಮ್ಮ ನೆರಳಿನ ಮೇಲೆ ನಾವು ನಿಂತಿರುವುದರಿಂದ ನಮ್ಮ ನೆರಳು ನೇರವಾಗಿ ನಮ್ಮ ಕಾಲ ಕೆಳಗಿರುತ್ತದೆ. ಯಾವುದೇ ಲಂಬ ವಸ್ತುವಿನ ನೆರಳು ಕಾಣಿಸುವುದಿಲ್ಲ. ವಿಶೇಷ ಉಪಕರಣಗಳಿಲ್ಲದೇ ಇದನ್ನು ವೀಕ್ಷಿಸಬಹುದಾಗಿದೆ. ಒಂದೊಂದು ಜಿಲ್ಲೆಯಲ್ಲಿ ಒಂದೆರಡು ದಿವಸ ಹಿಂದೆ - ಮುಂದೆ ಈ ವಿದ್ಯಮಾನ ಸಂಭವಿಸಲಿದೆ.