ಕಾಂಗ್ರೆಸ್‌ ನಾಯಕ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೊಗಳುವಿಕೆ ಮುಂದುವರಿಸಿದ್ದಾರೆ. ಸೋಮವಾರ ಮೋದಿ ನೀಡಿದ ರಾಮನಾಥ ಗೋಯೆಂಕಾ ಸ್ಮಾರಕ ಉಪನ್ಯಾಸವನ್ನು ಹಾಡಿ ಹೊಗಳಿದ್ದಾರೆ. ಇದು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಕಾರಣವಾಗುವ ಸಾಧ್ಯತೆ ಇದೆ.

ನವದೆಹಲಿ: ಕಾಂಗ್ರೆಸ್‌ ನಾಯಕ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೊಗಳುವಿಕೆ ಮುಂದುವರಿಸಿದ್ದಾರೆ. ಸೋಮವಾರ ಮೋದಿ ನೀಡಿದ ರಾಮನಾಥ ಗೋಯೆಂಕಾ ಸ್ಮಾರಕ ಉಪನ್ಯಾಸವನ್ನು ಹಾಡಿ ಹೊಗಳಿದ್ದಾರೆ. ಇದು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಕಾರಣವಾಗುವ ಸಾಧ್ಯತೆ ಇದೆ.

ಟ್ವೀಟ್‌ ಮಾಡಿದ ತರೂರ್

ಟ್ವೀಟ್‌ ಮಾಡಿದ ತರೂರ್, ‘ವಸಾಹತುಶಾಹಿ ಮನಃಸ್ಥಿತಿ ತೊಡೆದು ಹಾಕಬೇಕು ಎಂಬ ಮೋದಿ ಅವರ ಭಾಷಣ ಉತ್ತಮವಾಗಿತ್ತು. ನಾನು ಕೆಮ್ಮು ಹಾಗೂ ನೆಗಡಿಯಿಂದ ಬಳಲುತ್ತಿದ್ದರೂ ಸಭಿಕರ ಸಾಲಿನಲ್ಲಿ ಕುಳಿತು ಅವರ ಭಾಷಣ ಕೇಳಿದ್ದು ಆನಂದ ತಂದಿತು’ ಎಂದಿದ್ದಾರೆ.

ಹಿಂದೆ ಕೂಡ ಅನೇಕ ಕ್ರಮಗಳ ಹೊಗಳಿದ್ದಾರೆ

ಈ ಹಿಂದೆ ಕೂಡ ಆಪರೇಷನ್‌ ಸಿಂದೂರ ಸೇರಿ ಮೋದಿ ಅವರ ಅನೇಕ ಕ್ರಮಗಳನ್ನು ಶ್ಲಾಘಿಸಿ ತರೂರ್ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.