Asianet Suvarna News Asianet Suvarna News

ಟಿಕೆಟ್ ಕೊಡದ್ದಕ್ಕೆ ವಿಷ ಸೇವಿಸಿದ್ದ ತಮಿಳುನಾಡು ಸಂಸದ ಗಣೇಶಮೂರ್ತಿ ಚಿಕಿತ್ಸೆ ಫಲಿಸದೆ ಸಾವು!

ತಮಿಳುನಾಡಿನ ಎಂಡಿಎಂಕೆ ಸಂಸದ ಗಣೇಶಮೂರ್ತಿ ಅವರು ಕ್ರಿಮಿನಾಶಕ ಸೇವಿಸಿ ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇದೀಗ  ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Tamil Nadu Erode MP ganeshamurthi who attempted suicide days ago dies of cardiac arrest gow
Author
First Published Mar 28, 2024, 10:02 AM IST

ತಮಿಳುನಾಡು (ಮಾ.28): ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಈರೋಡ್‌ ಲೋಕಸಭಾ ಕ್ಷೇತ್ರದ ಸಂಸದ ಎಂಡಿಎಂಕೆ (ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ) ನಾಯಕ ಗಣೇಶಮೂರ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ 76 ವರ್ಷದ ಗಣೇಶಮೂರ್ತಿ ಹೃದಯ ಸ್ತಂಭನವಾಗಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಕಳೆದ ಭಾನುವಾರ ಮಾರ್ಚ್ 24ರಂದು ಕೀಟನಾಶಕ 'ಸಲ್ಫಸ್' ಸೇವಿಸಿರುವುದು ಪ್ರಾಥಮಿಕ ವರದಿಯಿಂದ ಬೆಳಕಿಗೆ ಬಂದಿತ್ತು. ಅವರನ್ನು ಚಿಕಿತ್ಸೆಗಾಗಿ ಕೊಯಮತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಡ್ರೈವರ್ ಗಳಿಗೆ ಗುಡ್ ನ್ಯೂಸ್ ಕೊಟ್ಟ ಕೆಎಸ್ಆರ್‌ಟಿಸಿ, ಕಡ್ಡಾಯ ನಿಯಮ ಜ ...

ಮಾ.24ರ ಬೆಳಿಗ್ಗೆ 9.30ರ ಸುಮಾರಿಗೆ ಗಣೇಶಮೂರ್ತಿ ಅವರು ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥರಾದರು. ಆಗ ನೀರು ಬೆರೆಸಿದ ಕೀಟನಾಶಕ ಸೇವನೆ ಮಾಡಿರುವ ಬಗ್ಗೆ ನಮಗೆ ತಿಳಿಸಿದ್ದರು ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದ್ದರು.

ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಚಿಕಿತ್ಸೆಗಾಗಿ ಈರೋಡ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರನ್ನು ತಪಾಸಣೆ  ಮಾಡಿ  ಐಸಿಯುಗೆ ದಾಖಲಿಸಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮಧ್ಯಾಹ್ನ 2.30ಕ್ಕೆ ಅವರನ್ನು  ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು. ಇದೀಗ ಒಂದು ಬೆಳಗ್ಗೆ ಚಿಕಿತ್ಸೆ ಮೃತಪಟ್ಟಿದ್ದಾರೆ.

ಲೋಕ ಕದನ 2024: ಬಿಜೆಪಿಯ ಎಲ್ಲಾ 25 ಅಭ್ಯರ್ಥಿಗಳ ಹೆಸರು ಪ್ರಕಟ

ಲೋಕಸಭೆ ಚುನಾವಣೆಯಲ್ಲಿ ಈರೋಡ್ ಲೋಕಸಭೆ ಕ್ಷೇತ್ರದಿಂದ ಗಣೇಶಮೂರ್ತಿ ಅವರಿಗೆ ಟಿಕೆಟ್ ನೀಡಲು ಎಂಡಿಎಂಕೆ ಪಕ್ಷ ನಿರಾಕರಿಸಿತ್ತು, ಈ ಹಿನ್ನೆಲೆಯಲ್ಲಿ ತೀವ್ರ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬುದು ಪಕ್ಷದ ಕೆಲ ಕಾರ್ಯಕರ್ತರು ಅಭಿಪ್ರಾಯ ಹೊರಹಾಕಿದ್ದಾರೆ. 

77 ವರ್ಷದ ಕಾನೂನು ಪದವೀಧರ ಗಣೇಶಮೂರ್ತಿ  ಅವರು 2019 ಲೋಕಸಭೆ ಚುನಾವಣೆಯಲ್ಲಿ ಡಿಎಂಕೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಡಿಎಂಕೆಯ ‘ರೈಸಿಂಗ್ ಸನ್’ ಚಿಹ್ನೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಅವರ ಪತ್ನಿ ಬಾಲಾಮಣಿ ನಿಧನರಾಗಿದ್ದು, ಅವರು ತಮ್ಮ ಮಗ ಕಪಿಲನ್‌ನೊಂದಿಗೆ ವಾಸಿಸುತ್ತಿದ್ದರು.
 

Follow Us:
Download App:
  • android
  • ios