ಮೀಸಲಾತಿ ಹಂಚಿಕೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ

ಸುಪ್ರೀಂ ಕೋರ್ಟ್‌ ಆದೇಶವನ್ನು ಯಾವ ರೀತಿ ತಿರುಚಬಹುದು ಎನ್ನುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರಗತ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. 

Supreme Court has not given an injunction to allotment of reservations Says CM Basavaraj Bommai gvd

ಹಾವೇರಿ (ಮೇ.11): ಸುಪ್ರೀಂ ಕೋರ್ಟ್‌ ಆದೇಶವನ್ನು ಯಾವ ರೀತಿ ತಿರುಚಬಹುದು ಎನ್ನುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರಗತ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ಮೀಸಲಾತಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಶಿಗ್ಗಾಂವಿಯಲ್ಲಿ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಸುಪ್ರೀಂ ಯಾವುದೇ ತಡೆಯಾಜ್ಞೆ ನೀಡಿಲ್ಲ. ನಾವು ಹೊರಡಿಸಿರುವ ಆಜ್ಞೆ ಇನ್ನೂ ಊರ್ಜಿತವಾಗಿದೆ ಎಂದರು. ಕೋರ್ಟ್‌ ಪ್ರಕ್ರಿಯೆ ನಡೆಯುವಾಗ ವಿಚಾರಣೆ ಆಗುವರೆಗೂ ಅನುಷ್ಠಾನ ಮಾಡುವುದಿಲ್ಲ. ಇದೊಂದು ಪ್ರತೀತಿ. 

ಮಹದಾಯಿ ವಿಚಾರದಲ್ಲಿ ಕೂಡ ಹೀಗೆ ಆಗಿತ್ತು. ಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ನಡೆಯುವರೆಗೆ ಅದನ್ನು ಅನುಷ್ಠಾನ ಮಾಡುವುದಿಲ್ಲ ಎಂಬುದು ಸರ್ಕಾರದ ಸ್ವಯಂ ಹೇಳಿಕೆ ಆಗಿರುತ್ತದೆ. ಇದನ್ನು ಕೋರ್ಟ್‌ ತಡೆ ನೀಡಿದೆ ಎಂದು ಬಿಂಬಿಸುವಂತಹ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ. ಸತ್ಯದ ಮೇಲೆ ಹೊಡೆಯುವ ರೀತಿಯಲ್ಲಿ ಸುಳ್ಳು ಹೇಳಲಾಗುತ್ತಿದೆ ಎಂದು ಹೇಳಿದರು. ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ನಿಮಗೆ ಮಾಡಲು ಆಗಲಿಲ್ಲ. ಆಂತರಿಕ ಮೀಸಲಾತಿ ಕೊಡಲು ಮನಸ್ಸು ಇರಲಿಲ್ಲ. ನಿಮ್ಮ ಪಕ್ಷ, ನಿಮ್ಮ ಸ್ನೇಹಿತರು ಸುಪ್ರೀಂಕೋರ್ಟ್‌ಗೆ ಹೋಗಿ ಬಂಜಾರ, ಭೋವಿ ಸಮಾಜವನ್ನು ಎಸ್ಸಿ, ಎಸ್ಟಿಯಿಂದ ತೆಗೆಯಲು ಹಿಂಬಾಗಿಲಿನಿಂದ ಹುನ್ನಾರ ಮಾಡಿದ್ದು ಕರ್ನಾಟಕದ ಜನತೆಗೆ ಗೊತ್ತಿದೆ ಎಂದರು.

ಈ ಬಾರಿ ಮತ್ತೆ ಬಿಜೆಪಿ ಸರ್ಕಾರ ರಚನೆ: ಸಚಿವ ಸುಧಾಕರ್‌

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ, ಆಂತರಿಕ ಮೀಸಲಾತಿ ವಿಚಾರ ಕೋರ್ಟ್‌ಗೆ ಬಂದಿಲ್ಲ. ಹಿಂದುಳಿದ ಸಮಾಜದೊಂದಿಗೆ ಸೇರಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುವುದು ಶೋಭೆ ತರುವುದಿಲ್ಲ. ನಾವು ಏನು ಮಾತನಾಡಿದ್ದೇವೆ, ಆ ರೀತಿ ನಡೆದುಕೊಂಡಿದ್ದೇವೆ. ಸಹಜವಾಗಿ ಇಂತಹ ವಿಚಾರದಲ್ಲಿ ಕೋರ್ಟ್‌ನಲ್ಲಿ ವಿಚಾರಣೆ ಆಗುತ್ತದೆ. ಅದಕ್ಕೆ ಸಂವಿಧಾನ್ಮಕವಾಗಿ, ಕಾನೂನಾತ್ಮಕವಾಗಿ ಹೋರಾಟ ಮಾಡಲು ನಮ್ಮ ವಕೀಲರು ಸನ್ನದ್ಧರಾಗಿದ್ದೇವೆ. ಯಾವುದೇ ತಡೆ ಇಲ್ಲ. ನಾವು ಮೀಸಲಾತಿ ಹಂಚಿಕೆಗೆ ಬದ್ಧರಾಗಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್‌, ಬಿಜೆಪಿ ರಾತ್ರೋರಾತ್ರಿ ಹಣ ಹಂಚಿವೆ: ವಾಟಾಳ್‌ ನಾಗರಾಜ್‌

ಯಾವುದನ್ನು ಕಾಂಗ್ರೆಸ್‌ 70 ವರ್ಷದಿಂದ ಮಾಡಲು ಆಗಿರಲಿಲ್ಲ, ಅದನ್ನು ನಾನು ನಮ್ಮ ಸರ್ಕಾರ ಮಾಡಿದೆ. ಅದನ್ನು ಕಾಂಗ್ರೆಸ್‌ಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್‌ನ ತಿರುಚುವ ಹೇಳಿಕೆ ನಂಬಬೇಡಿ. ಅನುಷ್ಠಾನ ಮುಂದೆ ಹಾಕಿದ್ದು, ಕೋರ್ಟ್‌ನಲ್ಲಿ ನಾವು ವಿಜಯಶಾಲಿಯಾಗುವ ವಿಶ್ವಾಸ ನಮಗೆ ಇದೆ. ಕಾನೂನು, ಸಂವಿಧಾನ ನಮ್ಮ ಪರವಾಗಿದೆ ಎಂದರು. ಕರ್ನಾಟಕದ ಎಲ್ಲ ವರ್ಗದ ಮತದಾರರು ಕಾಂಗ್ರೆಸ್‌ನ ಇಷ್ಟುವರ್ಷದ ಮೋಸದ, ಸುಳ್ಳಿನ ಆಟವನ್ನು ದಿಕ್ಕರಿಸಬೇಕು. ನಮ್ಮ ಬದ್ಧತೆಯಂತೆ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಬೇಕು. ಅದಕ್ಕೆ ನಾವು ಎಸ್ಸಿ, ಎಸ್ಟಿಜನಾಂಗಕ್ಕೆ ನ್ಯಾಯ ಕೊಡಲು ನಾವು ಬದ್ಧರಿದ್ದೇವೆ ಎಂದರು.

Latest Videos
Follow Us:
Download App:
  • android
  • ios