ತವರು ಮತಕ್ಷೇತ್ರಕ್ಕೆ ವಾಪಸಾದ ಶ್ರೀರಾಮುಲು: ಬಳ್ಳಾರಿ ಗ್ರಾಮಾಂತರದಿಂದ ಸ್ಪರ್ಧೆ ಖಚಿತ
ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ವಂತ ಕ್ಷೇತ್ರ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಸ್ಪಷ್ಟ ಪಡಿಸಿದ್ದಾರೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಮಾ.15): ಕಳೆದ ಬಾರಿ ಮೊಳಕಾಲ್ಮೂರು ಮತ್ತು ಬಾದಾಮಿಯಿಂದ ಸ್ಪರ್ಧಿಸಿದ್ದ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ವಂತ ಕ್ಷೇತ್ರ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಸ್ಪಷ್ಟ ಪಡಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಕ್ಷೇತ್ರದಲ್ಲಿ ಸೇವೆ ಮಾಡಿರುವೆ. ಬಳ್ಳಾರಿ ಗ್ರಾಮೀಣ ಭಾಗದಿಂದ ಸ್ಪರ್ಧೆ ಮಾಡಿರೋ ನಾಲ್ಕು ಬಾರಿಯಲ್ಲಿ ( ಒಮ್ಮೆ ಬಳ್ಳಾರಿ ಎಂಪಿ ಕ್ಷೇತ್ರ ) ಒಮ್ಮೆಯೂ ಅಲ್ಲಿ ಸೋತಿಲ್ಲ. ಕಾರಣಾಂತದಿಂದ ಮತ್ತು ಹೈಕಮೆಂಡ್ ನಿರ್ಧಾರದ ಹಿನ್ನಲೆ ಕಳೆದ ಚುನಾವಣೆಯಲ್ಲಿ ಮೊಳಕಾಲ್ಮೂರು ಮತ್ತು ಬಾದಾಮಿಯಿಂದ ಸ್ಪರ್ಧೆ ಮಾಡಿದ್ದೇ ಆದ್ರೇ, ಈ ಬಾರಿ ಮತ್ತೊಮ್ಮೆ ನನ್ನ ಸ್ವಕ್ಷೇತ್ರಕ್ಕೆ ಮರಳುತ್ತಿರುವೆ. ಈ ಬಗ್ಗೆ ಹೈ ಕಮಾಂಡ್ ಗೂ ತಿಳಿಸಿದ್ದು, ಬಹುತೇಕ ಎಲ್ಲರ ಅಪೇಕ್ಷೆ ಮೇರೆಗೆ ಬಳ್ಳಾರಿ ಗ್ರಾಮೀಣ ದಿಂದಲೇ ಸ್ಪರ್ಧೆ ಮಾಡುವೆ ಎಂದು ಸುವರ್ಣ ನ್ಯೂಸ್ ಗೆ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
Karnataka assembly election: ಜನಾಭಿಪ್ರಾಯ ಇರುವವರಿಗೆ ಮಾನ್ವಿ ಕ್ಷೇತ್ರದ ಬಿಜೆಪಿ ಟಿಕೆಟ್: ಶ್ರೀರಾಮುಲು
ಸಂಡೂರು ಆಯ್ಕೆಯೂ ಪ್ರಬಲವಾಗಿತ್ತು: ಸಂಡೂರು ಅಥವಾ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆನ್ನುವ ಎರಡು ಆಯ್ಕೆ ಇತ್ತು. ಆದ್ರೇ ಗ್ರಾಮೀಣ ಭಾಗದಿಂದ ಗೆಲ್ಲುವ ಅವಕಾಶ ಹೆಚ್ಚಾಗಿದೆ. ಹೀಗಾಗಿ ಇಲ್ಲಿಂದಲೇ ಸ್ಪರ್ಧೆ ಮಾಡುವೆ ಎಂದ ಶ್ರೀರಾಮುಲು ಈ ಬಾರಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಕಳೆದ ಬಾರಿಯಂತೆ ಈ ಬಾರಿಯೂ ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಸ್ಪರ್ಧೆ ಮಾಡೋ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಅಲೋಚನೆ ಇಲ್ಲ. ಇದೆಲ್ಲವನ್ನೂ ಹೈ ಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ ಶ್ರೀರಾಮುಲು ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಕಚ್ಚಾಟದ ಮಧ್ಯೆ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದು ನಿಶ್ಚಿತವಾಗಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಳ್ಳೆಯ ಅವಕಾಶ ಸಿಕ್ಕೆ ಸಿಗುತ್ತದೆ ಎಂದು ಹೇಳುವ ಮೂಲಕ ತಾವು ಮತ್ತೊಮ್ಮೆ ಉಪ ಮುಖ್ಯಮಂತ್ರಿ ಅಗೋ ಕನಸನ್ನು ಶ್ರೀರಾಮುಲು ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು.
ಹಣಕಾಸಿನ ಇತಿಮಿತಿಯಲ್ಲಿ ವೇತನ ಪರಿಷ್ಕರಣೆ: ಸಾರಿಗೆ ನೌಕರರ ಜೊತೆಗೆ ಮಾತನಾಡ್ತೇನೆ: ಈಗಾಗಲೇ ರಾಜ್ಯದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಹಮ್ಮಿಕೊಳ್ಳುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಿಬ್ಬಂದಿ ಜೊತೆಗೆ ಮಾತನಾಡಲಾಗುವುದು. ಶ್ರೀರಾಮುಲು ಯಾವುದೇ ಕಾರಣಕ್ಕೂ ಮುಷ್ಕರ ಮಾಡೋದಿಲ್ಲ ಎಂದಿದ್ದಾರೆ. ವೇತನ ಪರಿಷ್ಕರಣೆ ವಿಚಾರದಲ್ಲಿ ಕರೆದು ಮಾತನಾಡಿದ್ದೇನೆ. ಹಣಕಾಸಿನ ಇತಿಮಿತಿಯಲ್ಲಿ ಒಂದಷ್ಟು ಮಾಡ್ತೇನೆ ಎಂದಿದ್ದೇ ಅದಕ್ಕೆ ಅವರು ಒಪ್ಪಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಇಂದು ಮಾತನಾಡಿ ಇವತ್ತೇ ಅಂತಿಮವಾದ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
Assembly Election: ಕೈ ಬಿಟ್ಟು ಕಮಲ ಮುಡಿದ ಮಾಜಿ ಶಾಸಕ: ಶ್ರೀರಾಮುಲು ನಾನು ಸಹೋದರರಿದ್ದಂತೆ ಎಂದ ತಿಪ್ಪಾರೆಡ್ಡಿ
ನೌಕರರಿಗೆ ತೃಪ್ತಿಯಾಗೋ ಕೆಲಸ ಮಾಡ್ತೀವಿ: ಸಾರಿಗೆ ಸಿಬ್ಬಂದಿ ಮತ್ತು ಸಂಘಟನೆ ಮುಖಂಡರ ಜೊತೆಗೆ ಮಾತನಾಡಲು ಸಾರಿಗೆ ಇಲಾಖೆಯ ಎಂ.ಡಿ. ಅನ್ಬು ಕುಮಾರ ಸೂಚನೆ ನೀಡಿದ್ದೇನೆ. ಮನವೊಲಿಸೋ ಮೂಲಕ ಹಣಕಾಸಿನ ಸ್ಥಿತಿಗತಿ ನೋಡಿ ಕೊಂಡು ಸ್ಪಲ್ಪ ಹೆಚ್ಚಳ ಮಾಡ್ತೇವೆ ಎಂದು ಹೇಳಲು ತಿಳಿಸಿದ್ದೇನೆ.. ಶ್ರೀರಾಮುಲು ಮಾತುಕೊಟ್ಟರೇ ಉಳಿಸಿಕೊಳ್ತಾರೆ ಎಂದರು. ಇನ್ನೂ ಮುಷ್ಕರಕ್ಕೆ ಹೋಗೋ ಪರಿಸ್ಥಿತಿ ಬರಲ್ಲ. ಸಾರಿಗೆ ನೌಕರರ ಮುಷ್ಕರದ ಹಿಂದೆ ಯಾರ ಕೈವಾಡ ಇಲ್ಲ. ಸಾರಿಗೆ ನೌಕರರಿಗೆ ತೃಪ್ತಿಯಾಗೋ ರೀತಿ ಕೆಲಸ ಮಾಡ್ತೇವೆ ಎಂದರು.