Karnataka assembly election: ಜನಾಭಿಪ್ರಾಯ ಇರುವವರಿಗೆ ಮಾನ್ವಿ ಕ್ಷೇತ್ರದ ಬಿಜೆಪಿ ಟಿಕೆಟ್: ಶ್ರೀರಾಮುಲು

2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಮಾನ್ವಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಯಾರಿಗೆ ನೀಡಬೇಕೆಂದು ಜನಾಭಿಪ್ರಾಯ ಹೊಂದಿರುವ ವ್ಯಕ್ತಿಗೆ ಹೈಕಮಾಂಡ್‌ ಟಿಕೆಟ್‌ ನೀಡಲಿದೆ. ಈ ಬಾರಿ ಮಾನ್ವಿ ಕ್ಷೇತ್ರದಲ್ಲಿ ಪಕ್ಷ​ದ ಅಭ್ಯರ್ಥಿ ಗೆಲ್ಲಿಸಲು ಮತದಾರರು ಸಂಕಲ್ಪ ಮಾಡಬೇಕು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿ​ದ​ರು.

Karnataka election news Manvi Constituency BJP Ticket for Referendum says Sriramulu jkl rav

ಮಾನ್ವಿ (ಮಾ.12) : 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಮಾನ್ವಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಯಾರಿಗೆ ನೀಡಬೇಕೆಂದು ಜನಾಭಿಪ್ರಾಯ ಹೊಂದಿರುವ ವ್ಯಕ್ತಿಗೆ ಹೈಕಮಾಂಡ್‌ ಟಿಕೆಟ್‌ ನೀಡಲಿದೆ. ಈ ಬಾರಿ ಮಾನ್ವಿ ಕ್ಷೇತ್ರದಲ್ಲಿ ಪಕ್ಷ​ದ ಅಭ್ಯರ್ಥಿ ಗೆಲ್ಲಿಸಲು ಮತದಾರರು ಸಂಕಲ್ಪ ಮಾಡಬೇಕು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿ​ದ​ರು.

ಪಟ್ಟಣದ ಟಿಎಪಿಸಿಎಂಎಸ್‌ ಮೈದಾನದಲ್ಲಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಮಾನ್ವಿ ವಿಧಾನಸಭೆ ಕ್ಷೇತ್ರ(Manvi Assembly constituency) ದಿಂದ ಇದುವರೆಗೂ ಬಿಜೆಪಿ ಗೆಲುವು ಸಾಧಿಸಿಲ್ಲ. ಎರಡು ಬಾರಿ ಕಡಿಮೆ ಅಂತರದಲ್ಲಿ ಅಭ್ಯರ್ಥಿ ಸೋತಿದ್ದಾರೆ. ರಾಯಚೂರು ಲೋಕಸಭೆ ಚುನಾವಣೆಯಲ್ಲಿ 2014ರಲ್ಲಿ 12 ಸಾವಿರ ಮತಗಳ ಲೀಡ್‌ ಹಾಗೂ 2019ರಲ್ಲಿ 22 ಸಾವಿರದಷ್ಟುಹೆಚ್ಚಿನ ಮತಗಳನ್ನು ಪಡೆದಿದ್ದು, ಈ ಬಾರಿ ಜನ ತೀರ್ಮಾನದಂತೆ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನಿಜಾಮರ ನಾಡಿನಲ್ಲಿ ಕಮಲ ಅರಳಿಸಲು ಸಜ್ಜಾಗಿ ಎಂದರು.

KARNATAKA ELECTION 2023: ದೇವ​ದುರ್ಗ ಶಾಸಕ ಶಿವನಗೌಡ ನಾಯಕಗೆ ಬುದ್ಧಿ ಭ್ರಮಣೆ ಆಗಿದೆ : ಕರೆಮ್ಮ

ಮಾಜಿ ಸಿಎಂ ಜಗ​ದೀಶ್‌ ಶೆಟ್ಟರ್‌(Jagadish shettar) ಮಾತ​ನಾಡಿ, ಕೇಂದ್ರ ಹಾಗೂ ದೇಶದ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ನ್ನು ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಐಸಿಯುನಲ್ಲಿರುವ ಕಾಂಗ್ರೆಸ್‌, ಚುನಾವಣೆ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದರು.

ಈ ಸಂದ​ರ್ಭ​ದ​ಲ್ಲಿ ಪಕ್ಷ​ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್‌ ಗೌತಮ್‌, ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸ​ಕ​ರು,​ ಸಂಸ​ದರು, ಪಕ್ಷದ ವಿವಿಧ ಮೋರ್ಚಾ​ಗಳ ಪ್ರಮು​ಖ​ರು,​ ಕಾ​ರ್ಯ​ಕ​ರ್ತರು ಸೇರಿ ಅನೇ​ಕರು ಇದ್ದರು.

ತಾಕತ್ತಿದ್ರೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಘೋಷಿಸಲಿ:

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಲು ಅನೇಕರು ಟವೆಲ್‌ ಹಾಕಿದ್ದಾರೆ. ಕಾಂಗ್ರೆಸ್‌ಗೆ ತಾಕತ್ತು, ದಮ್ಮು ಇದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ಸವಾಲು ಹಾಕಿದ್ದಾರೆ. ಪಟ್ಟಣದ ಬೈಪಾಸ್‌ ರಸ್ತೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ(Vijayasankalpa yatre)ಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಕೆಲವು ನಾಯಕರ ನಡುವೆ ಅಧಿಕಾರಕ್ಕಾಗಿ ಕಿತ್ತಾಟವಿದೆ. ಮುಖ್ಯಮಂತ್ರಿಯಾಗಲು ಹಲವರು ಹವಣಿಸುತ್ತಿದ್ದಾರೆ. ಸಿಎಂ ಅಭ್ಯರ್ಥಿ ಘೋಷಣೆ ಮಾಡಿದರೆ ಪಕ್ಷದಲ್ಲಿನ ನಾಯಕರ ವೈಮನಸ್ಸು ಹೊರಗೆ ಬರಲಿದೆ ಎಂದು ತಿಳಿಸಿದರು.

Karnataka election 2023: ದೇಶದಲ್ಲಿ ಕಾಂಗ್ರೆಸ್‌ ದಿವಾಳಿ ಹಂತಕ್ಕೆ ತಲುಪಿದೆ: ಬಿಎಸ್‌ವೈ

ಭಾರತ್‌ ಜೋಡೊ ಯಾತ್ರೆ(Bharat Jodo jatre) ನಡೆಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul gandhi) ಹೋದಲ್ಲಿ ಬಂದಲ್ಲಿ ಕಾಂಗ್ರೆಸ್‌ ಮಟಾಶ್‌ ಆಗಿದೆ. ಅವರ ಗ್ಯಾರಂಟಿ, ವಾರಂಟಿಗಳನ್ನು ನಂಬಬೇಡಿ ಎಂದ ಅವರು, ಕಾಶ್ಮೀರದಲ್ಲಿ ರಾಹುಲ್‌ ಗಾಂಧಿ ಪಾದಯಾತ್ರೆ ಮಾಡುವಾಗ ಉಗ್ರಗಾಮಿಗಳು ಭೇಟಿಯಾದರಂತೆ, ಅವರಿಗೆ ಏನು ಮಾಡಲಿಲ್ಲ ಎಂದು ದೇಶದ ಆಚೆ ಹೇಳುತ್ತಾರೆ. ಭಯೋತ್ಪಾದಕರು ಭೇಟಿ ಆದಾಗ ಏಕೆ ದೂರು ನೀಡಲಿಲ್ಲ. ಕಾಂಗ್ರೆಸ್‌ ಪ್ರಜಾಪ್ರಭುತ್ವದ ವ್ಯವಸ್ಥೆ ಮಾರಕ ಎಂಬುದು 1975-79, 1984ರಲ್ಲಿ ಸಿಖ್‌ ಸಮುದಾಯದ ನರಮೇಧ ನಡೆಸಿ ಸಾಬೀತು ಮಾಡಿದೆ ಎಂದು ದೂರಿದರು.

Latest Videos
Follow Us:
Download App:
  • android
  • ios