ಚಿಕ್ಕಮಗಳೂರು(ಜು.12): ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ಅವರು ಮಂಗಳೂರಿನ ಬಜ್ಪೆಯಿಂದ ಬೆಂಗಳೂರಿಗೆ ಹೊರಟಿದ್ದಾರೆ.10 ದಿನ ಪ್ರಕೃತಿ ಚಿಕಿತ್ಸೆ ಉಜಿರೆಯಲ್ಲಿ ದಾಖಲಾಗಿದ್ದು ಅವರು ಕಾಂಗ್ರೆಸ್ ಶಾಸಕಾಂಗ ಸಭೆಗೂ ಗೈರಾಗಿದ್ದರು.

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಟ ಶಾಸಕ ರಾಜೇಗೌಡ ಅವರು ಚಿಕಿತ್ಸೆ ಮುಗಿಯುವ ಮುನ್ನವೇ ಬೆಂಗಳೂರಿಗೆ ಹೊರಟಿದ್ದಾರೆ. ಅವರು 13 ರಂದು ಡಿಸ್ಚಾರ್ಜ್ ಅಗಬೇಕಿತ್ತು.

ಆಪರೇಷನ್ ಕಮಲ: ಸ್ಫೋಟಕ ಸುದ್ದಿ ಬಹಿರಂಗಪಡಿಸಿದ ಕಾಂಗ್ರೆಸ್ ಶಾಸಕ

ರಾಜ್ಯರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜೇಗೌಡ ಅವರು ಚಿಕಿತ್ಸೆ ಪೂರ್ತಿಗೊಳಿಸದೇ ಬೆಂಗಳೂರಿಗೆ ಹೊರಟಿದ್ದಾರಾ ಅನ್ನೋ ಸಂದೇಹವೂ ವ್ಯಕ್ತವಾಗಿದೆ. ಅಪರೇಷನ್ ಕಮಲದಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಹೆಸರೂ ಕೇಳಿ ಬಂದಿತ್ತು. ಮೈತ್ರಿ ಸರ್ಕಾರ ಮುಂದುವರೆದರೆ ಟಿ.ಡಿ.ರಾಜೇಗೌಡ ಅವರಿಗೆ ಬಂಪರ್ ಅಫರ್ ನೀಡುವ ಭರವಸೆ ಸಿಕ್ಕಿರುವ ಕುರಿತೂ ಮಾತು ಕೇಳಿ ಬಂದಿತ್ತು.