ಮಾತಾಡುವಾಗ ಜೇಬಲ್ಲಿ ಕೈಯಿರಿಸಿದ್ದ ಕೇಂದ್ರ ಸಚಿವನಿಗೆ ಸ್ಪೀಕರ್ ಓಂ ಬಿರ್ಲಾ ಛೀಮಾರಿ

ಕೇಂದ್ರ ಸಚಿವರೊಬ್ಬರು ಲೋಕಸಭೆಯಲ್ಲಿ ಮಾತನಾಡುವಾಗ ಜೇಬಲ್ಲಿ ಕೈ ಇಟ್ಟುಕೊಂಡಿದ್ದು, ಸಭಾಧ್ಯಕ್ಷ ಓಂ ಬಿರ್ಲಾರ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವರಿಗೆ ಸ್ಪೀಕರ್‌ ಛೀಮಾರಿ ಹಾಕಿದ್ದಾರೆ.

Speaker Om Birla reprimands minister for keeping hand in pocket while speaking rav

ನವದೆಹಲಿ (ಜು.27): ಕೇಂದ್ರ ಸಚಿವರೊಬ್ಬರು ಲೋಕಸಭೆಯಲ್ಲಿ ಮಾತನಾಡುವಾಗ ಜೇಬಲ್ಲಿ ಕೈ ಇಟ್ಟುಕೊಂಡಿದ್ದು, ಸಭಾಧ್ಯಕ್ಷ ಓಂ ಬಿರ್ಲಾರ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವರಿಗೆ ಸ್ಪೀಕರ್‌ ಛೀಮಾರಿ ಹಾಕಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಈ ವರ್ತನೆ ತೋರಿದ ಸಚಿವರನ್ನು ಉದ್ದೇಶಿಸಿ ಕಿಸೆಯಿಂದ ಕೈ ಹೊರತೆಗೆಯುವಂತೆ ಬಿರ್ಲಾ ಗುಡುಗಿದ್ದಾರೆ. ಜೊತೆಗೆ ಜೇಬಿನಲ್ಲಿ ಕೈ ಇರಿಸಿಕೊಂಡು ಸದನದ ಒಳಗೆ ಪ್ರವೇಶಿಸಬಾರದು ಹಾಗೂ ಓಡಾಡಬಾರದು ಎಂದು ಸೂಚಿಸಿದ್ದಾರೆ.

ರಾಜ್ಯಪಾಲರನ್ನ ಟೀಕಿಸಲು ಮಮತಾ ಬ್ಯಾನರ್ಜಿಗೆ ಕೋರ್ಟ್ ಅನುಮತಿ!

‘ಸದನದಲ್ಲಿ ಓರ್ವ ಗೌರವಾನ್ವಿತ ಸದಸ್ಯ ಮಾತನಾಡುತ್ತಿರುವಾಗ ಯಾರೂ ಎದುರಿನಿಂದ ಹಾದು ಹೋಗಿ ಅವರ ಮುಂದಿನ ಆಸನದಲ್ಲಿ ಕೂರಬಾರದು. ಬೇಕಿದ್ದಲ್ಲಿ ಅವರ ಹಿಂದಿನ ಆಸನ ಸ್ವೀಕರಿಸಬಹುದು’ ಎಂದೂ ಬಿರ್ಲಾ ಸಂಸದರಿಗೆ ಸಭ್ಯತೆಯ ಪಾಠ ಮಾಡಿದ್ದಾರೆ.

ಸಂಸತ್ತಿನ ನಿಯಮಗಳ ಪ್ರಕಾರ ಇಂತಹ ನಡತೆಯನ್ನು ಶಿಷ್ಟಾಚಾರದ ಉಲ್ಲಂಘನೆಯೆಂದು ಪರಿಗಣಿಸಲಾಗುತ್ತದೆ.

Latest Videos
Follow Us:
Download App:
  • android
  • ios