Karnataka Politics : ಶೀಘ್ರ ಜೆಡಿಎಸ್ ತೊರೆದ ಮಾಜಿ ಎಂಎಲ್‌ಸಿ ಕಾಂಗ್ರೆಸ್‌ಗೆ
- ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ಸಿ.ಆರ್.ಮನೋಹರ್ ಡಿ.2 ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆ
- ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಖಚಿತಪಡಿಸಿದರು
ಚಿಕ್ಕಬಳ್ಳಾಪುರ (ಡಿ.01): ಕಳೆದ ಬಾರಿ ಕೋಲಾರ (kolar) ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತುಗೆ ಸ್ಪರ್ಧಿಸಿ ಜೆಡಿಎಸ್‌ನಿಂದ (JDS) ಗೆಲುವು ಸಾಧಿಸಿದ್ದ ಸಿ.ಆರ್.ಮನೋಹರ್ (CR Manohar) ಡಿ.2 ರಂದು ಕಾಂಗ್ರೆಸ್ (congress) ಪಕ್ಷ ಸೇರ್ಪಡೆ ಗೊಳ್ಳಲಿದ್ದಾರೆಂದು ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ(Veerappa Moily) ಖಚಿತಪಡಿಸಿದರು. ಚಿಕ್ಕಬಳ್ಳಾಪುರ (Chikkaballapura) ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್.ಅನಿಲ್ ಕುಮಾರ್ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ(Election Campaign) ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಎಂ.ವೀರಪ್ಪ ಮೊಯ್ಲಿ ಈ ವಿಚಾರ ಪ್ರಸ್ತಾಪಿಸಿದರು. ಸಿ.ಆರ್.ಮನೋಹರ್ ತಮ್ಮ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿದ್ದು ಡಿ.2 ರಂದು ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೆಡಿಎಸ್ (JDS) ತೊರೆದು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ (congress) ಅಧ್ಯಕ್ಷರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆಂದು ಮೊಯ್ಲಿ ತಿಳಿಸಿದರು. ಅಲ್ಲದೇ ಪಕ್ಷ ಬಿಟ್ಟು ಹೋಗಿರುವ ಎಲ್ಲಾ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬಂದು ಸೇರಿಕೊಳ್ಳಬಹುದೆಂದರು.
ಜೆಡಿಎಸ್ ತೊರೆದು ಶಾಕ್: ಜೆಡಿಎಸ್‌ನ (JDS) ಮತ್ತೊಂದು ವಿಕೆಟ್ ಪತನವಾಗಿದೆ. ಅವಧಿ ಮುಗಿಯುವ ಮೊದಲೇ ಜೆಡಿಎಸ್ ನಾಯಕ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಅಲ್ಲದೇ ವಿಧಾನ ಪರಿಷತ್ ಚುನಾವಣೆ (MLC Election) ಮಧ್ಯೆಯೇ ಸಿ.ಆರ್. ಮನೋಹರ್ (CR Manohar) ಜೆಡಿಎಸ್ (JDS) ಪ್ರಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ(resign) ನೀಡಿದ್ದು, ದಳಪತಿಗಳಿಗೆ ಆಘಾತವಾಗಿದೆ.
ವಿಧಾನ ಪರಿಷತ್ ಸದಸ್ಯತ್ವಕ್ಕೆ ಸಿ.ಆರ್. ಮನೋಹರ್ ರಾಜೀನಾಮೆ ನೀಡಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಇಂದು (ನ.29 ರಾಜೀನಾಮೆ ಪತ್ರ ನೀಡಿದ್ದಾರೆ. ಸಿ.ಆರ್. ಮನೋಹರ್ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆಂದು ಸುದ್ದಿಯಾಗಿತ್ತು. ಆದರೆ, ಇದೀಗ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಅವರು ಕಾಂಗ್ರೆಸ್ ಸೇರಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು.
ಕಾಂಗ್ರೆಸ್ ಸೇರಲು ಚಿಂತನೆ ನಡೆಸಿರುವ ಸಿ.ಆರ್. ಮನೋಹರ್, ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ರಿಜಿಸ್ಟರ್ ಪೋಸ್ಟ್ ಮೂಲಕ ಮನೋಹರ್ ರಾಜೀನಾಮೆ ಸಲ್ಲಿಸಿದ್ದಾರೆ.ಕೋಲಾರ ಮತ್ತು ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿರುವ ಸಿ.ಆರ್ ಮನೋಹರ್ ಅವರ ಸದಸ್ಯತ್ವದ ಅವಧಿ 2022ರ ಜ.5ಕ್ಕೆ ಕೊನೆಗೊಳ್ಳಲಿದೆ. ಅವಧಿ ಪೂರ್ಣಕ್ಕೆ ಮೂರು ತಿಂಗಳಷ್ಟೇ ಬಾಕಿ ಇದೆ. ಈ ನಡುವೆ ಜೆಡಿಎಸ್‌ನಿಂದ ಹೆಜ್ಜೆ ಹೊರಗೆ ಇಟ್ಟಿದ್ದಾರೆ.
ಇದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ವಲಯದಲ್ಲಿ ಆಂತರಿಕ ಚರ್ಚೆಗೆ ಕಾರಣವಾಗಿದೆ. ಎರಡೂ ಜಿಲ್ಲೆಗಳಲ್ಲಿ ಗಣನೀಯವಾಗಿರುವ ಬಲಿಜ ಸಮುದಾಯದ ಮೇಲೆ ಮನೋಹರ್ ಅವರಿಗೆ ಉತ್ತಮವಾದ ಹಿಡಿತವಿದೆ. ಆ ಸಮುದಾಯದ ಪ್ರಮುಖ ನಾಯಕರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.
2009ರಿಂದಲೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣದಲ್ಲಿ ಮನೋಹರ್ ಅವರ ಹೆಜ್ಜೆ ಗುರುತು ಪ್ರಬಲವಾಗಿದೆ. 2009ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ಆರ್ ಮನೋಹರ್ 1.86 ಲಕ್ಷ ಮತಗಳನ್ನು ಪಡೆದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 38 ಸಾವಿರ ಮತಗಳನ್ನು ಪಡೆದಿದ್ದರು.
ಅಮಾವಾಸ್ಯೆ ಕಂಡ ಕಾಂಗ್ರೆಸ್‌ಗೆ ಮುಂದೆ ಹುಣ್ಣಿಮೆ
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ Congress) ಪಕ್ಷ ಎಲ್ಲಾ ರೀತಿ ಕಷ್ಟಗಳನ್ನು ಅನುಭವಿಸಿದೆ. ಅಮಾವಾಸ್ಯೆ ಬಳಿಕ ಹುಣ್ಣಿಮೆ ಬರಲೇಬಕು. ಆದೇ ರೀತಿಯಲ್ಲಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಹುಣ್ಣಿಮೆಯ ಬೆಳಕು ಕಾಣಲಿದೆ. ಕಳೆದ ಬಾರಿ ಸೋತಿದ್ದ ಎಂ.ಎಲ್.ಅನಿಲ್ ಕುಮಾರ್ ಗೆಲುವು ಈ ಬಾರಿ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸ್ಪೀಕರ್ ಹಾಗೂ ಶಾಸಕ ರಮೇಶ್ ಕುಮಾರ್ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್.ಅನಿಲ್ ಕುಮಾರ್ ಪರವಾಗಿ ವಿಧಾನ ಪರಿಷತ್ತು ಚುನಾವಣಾ (MLC Election) ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣ ಜೂಜಾಟವಲ್ಲ, ದೇಶದ ಜನರ ನಂಬಿಕೆಯ ಉಗ್ರಾಣ ಆಗಬೇಕು, ದರ್ಪ, ದೌರ್ಜನ್ಯಕ್ಕೆ ಇಲ್ಲಿ ಯಾರು ಬಗ್ಗುವುದಿಲ್ಲ. ಜನರ ಸ್ವಾಭಿಮಾನ ಗೆಲ್ಲುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.