Asianet Suvarna News Asianet Suvarna News

Karnataka Politics: ಬಿಲ್‌ಪಾಸ್‌ ಮಾಡಲು ಜೆಡಿಎಸ್‌ ಕೈ-ಕಾಲು ಹಿಡಿಯುವ ಪರಿಸ್ಥಿತಿ: ಶೆಟ್ಟರ್‌

*   ಸ್ವತಂತ್ರವಾಗಿ ಬಿಲ್‌ ಪಾಸ್‌ ಮಾಡಲು ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ 
*   ವಿಧಾನಸಭೆಯಲ್ಲಿ ಮಂಡಿಸುವ ಬಿಲ್‌ಗಳಿಗೆ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಅಡ್ಡಿ
*  ಬಿಜೆಪಿ ಅಧಿಕಾರಕ್ಕೆ ಆದ್ಯತೆ ನೀಡದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ
 

Inevitable Ask for JDS Support to Pass the Bill in Vidhan Parishat Says Pradeep Shettar grg
Author
Bengaluru, First Published Dec 1, 2021, 11:53 AM IST

ಗಜೇಂದ್ರಗಡ(ಡಿ.01):  ದೇಶದ ಭದ್ರತೆ ಹಾಗೂ ರೈತರ ಪರವಾದ ಬಿಲ್‌ ಪಾಸ್‌ ಮಾಡಲು ಜೆಡಿಎಸ್‌(JDS) ಕೈ, ಕಾಲು ಹಿಡಿಯಬೇಕಾಗಿದೆ. ಹೀಗಾಗಿ ಸ್ವತಂತ್ರವಾಗಿ ಬಿಲ್‌ ಪಾಸ್‌ ಮಾಡಲು ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಎಂದು ವಿಧಾನ ಪರಿಷತ್‌ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್‌(Pradeep Shettar) ಹೇಳಿದ್ದಾರೆ. 

ಪಟ್ಟಣದ ಬಿಜೆಪಿ(BJP) ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರ(Election Campaign) ಕಾರ್ಯಕ್ರಮದಲ್ಲಿ ಮತಯಾಚಿಸಿ ಮಾತನಾಡಿದರು. ವಿಧಾನ ಪರಿಷತ್‌ನಲ್ಲಿ(Vidhan Parishat Election) ನಮಗೆ ಬಹುಮತ ಇಲ್ಲದ್ದರಿಂದ ವಿಧಾನಸಭೆಯಲ್ಲಿ ಮಂಡಿಸುವ ಬಿಲ್‌ಗಳಿಗೆ(BIll) ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಅಡ್ಡಿಪಡಿಸುತ್ತದೆ. ಪರಿಣಾಮ ಉತ್ತಮ ಬಿಲ್‌ಗಳಿಗೆ ಅನುಮೋದನೆ ಪಡೆಯಲು ಜೆಡಿಎಸ್‌ನವರ ಕೈ, ಕಾಲು ಬಿದ್ದು ಅವರ ಸಹಾಯ ಪಡೆದು ಬಿಲ್‌ಪಾಸ್‌ ಮಾಡಿಸಿಕೊಳ್ಳುವ ಸ್ಥಿತಿಯಿದೆ ಎಂದ ಅವರು, ಕಳೆದ 6 ವರ್ಷದಲ್ಲಿ ಗ್ರಾಪಂ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರಿಂದ ಪಕ್ಷವು 3ನೇ ಬಾರಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರಾಪಂ ಸದಸ್ಯರ ವೇತನ ಹೆಚ್ಚಳ ಜತೆಗೆ ಜಲಜೀವನ, ಆರ್ದಶ ಗ್ರಾಮ, ಗ್ರಾಮ ಸಡಕ್‌ ಯೋಜನೆಗಳ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ(Government of Karnataka) ಶ್ರಮಿಸಲಿದೆ ಎಂದು ತಿಳಿಸಿದರು.

Karnataka Council Polls: ಬಿಜೆಪಿ ಬಣ ರಾಜಕೀಯ ಬಹಿರಂಗ, ಸಚಿವರೆದುರೇ ಕಾರ್ಯಕರ್ತರ ಹೊಡೆದಾಟ!

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ(CC Patil) ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಆದ್ಯತೆ ನೀಡದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಪಕ್ಷದ ಸಿದ್ಧಾಂತವು ಅಚಲ ಹಾಗೂ ದೃಢವಾಗಿರುವದರಿಂದ ಬಿಜೆಪಿ ವಿಶ್ವದ ದೊಡ್ಡ ಪಕ್ಷವಾಗಿದ್ದು ದೇಶ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಬೇಕಿದೆ ಎಂದರು.

ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಗ್ರಾಪಂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಪ್ರದೀಪ ಶೆಟ್ಟರ ಅವರನ್ನು ಗೆಲ್ಲಿಸಲಿದ್ದೇವೆ ಎಂದು ಭರವಸೆ ನೀಡಿದರು.
ವಿಪ ಸದಸ್ಯ ಎಸ್‌.ವಿ. ಸಂಕನೂರ, ಪುರಸಭೆ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಉಪಾಧ್ಯಕ್ಷೆ ಲೀಲಾವತಿ ವನ್ನಾಲ, ಸ್ಥಾಯಿ ಸಮಿತಿ ಚೇರಮನ್‌ ಯು.ಆರ್‌. ಚನ್ನಮ್ಮನವರ, ಮುಖಂಡರಾದ ರವಿ ದಂಡಿನ, ಮೋಹನ ಮಾಳಶೆಟ್ಟಿ, ಮುತ್ತಣ್ಣ ಕಡಗದ, ಅಶೋಕ ವನ್ನಾಲ, ಶಿವರಾಜಗೌಡ ಗೌಡ್ರ, ಪುರಸಭೆ ಸದಸ್ಯರಾದ ಸುಭಾಸ ಮ್ಯಾಗೇರಿ, ರೂಪೇಶ ರಾಠೋಡ, ಶರಣಪ್ಪ ಉಪ್ಪಿನಬೆಟಗೇರಿ, ಲೀಲಾ ಸವಣೂರ, ದೀಪಾ ಗೌಡರ, ದ್ರಾಕ್ಷಾಯಿಣಿ ಚೋಳಿನ ಹಾಗೂ ಶರಣಪ್ಪ ದೊಣ್ಣೆಗುಡ್ಡ, ಮೋಹನಸಾ ರಾಯಬಾಗಿ ಇದ್ದರು.

ಬಿಜೆಪಿ ಆಡಳಿತದಿಂದ ಅಭಿವೃದ್ಧಿ ಶೂನ್ಯ: ಸಲೀಂ ಅಹ್ಮದ್‌

ಶಿಗ್ಗಾಂವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ, ಆಡಳಿತ ವೈಫಲ್ಯ, ರೈತ ಹಾಗೂ ಜನ ವಿರೋಧಿ ನೀತಿಗಳಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿವೆ. ಇವರಿಗೆ ಜನ ಏಕೆ ಆಶೀರ್ವಾದ ಮಾಡಬೇಕು ಎಂದು ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಪ್ರಶ್ನಿಸಿದರು.

Vidhan Parishat Election: ಸುಳ್ಳು, ಮೋಸ, ವಂಚನೆ ಬಿಜೆಪಿಯ ಆಸ್ತಿ: ಡಿ.ಕೆ.ಸುರೇಶ್‌

ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಗ್ಗಾಂವಿ, ಸವಣೂರ ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತಯಾಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಏಳು ವರ್ಷಗಳಿಂದಲೂ ಸುಳ್ಳು ಹೇಳುವುದರಲ್ಲೇ ಕಾಲ ಕಳೆದಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕೊಟ್ಟಿಲ್ಲ. ಜೊತೆಗೆ ಸದಸ್ಯರ ಗೌರವಧನವನ್ನೂ ಹೆಚ್ಚಿಸಿಲ್ಲ ಎಂದು ಆರೋಪಿಸಿದರು.

ಪ್ರಸಕ್ತ ಚುನಾವಣೆಯಲ್ಲಿ ರಾಜ್ಯದಲ್ಲಿ 14ಕ್ಕಿಂತ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್‌(Congress) ಗೆಲ್ಲಲಿದೆ. ರಾಜ್ಯದಲ್ಲಿರುವುದು ನಿರ್ಜೀವ ಸರ್ಕಾರ. ಅಕಾಲಿಕ ಮಳೆಯಿಂದ ರಾಜ್ಯದಲ್ಲಿ ಬೆಳೆ ಹಾಗೂ ಮನೆಗಳು ಹಾನಿಯಾಗಿ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಸಚಿವರು, ಶಾಸಕರು ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಇವೆಲ್ಲವೂ ಚುನಾವಣೆ ಮೇಲೆ ಪರಿಣಾಮ ಬೀರಲಿವೆ ಎಂದರು.
 

Follow Us:
Download App:
  • android
  • ios