Karnataka Politics: ಸೋನಿಯಾ ಕರ್ನಾಟಕ್ಕೆ ಮಹಾದಾಯಿ ನೀರು ಕೊಡಲ್ಲ ಅಂದಿದ್ರು: ಈಶ್ವರಪ್ಪ
* ಪ್ರಧಾನಿ ನರೇಂದ್ರ ಮೋದಿ ಸೇಬು, ಇದನ್ನು ಬಿಟ್ಟು ಹೋಗ್ತಾರಾ?
* ಒಬ್ಬ ಬಿಜೆಪಿಯ ಸಿಂಹದಮರಿ ಎಂಎಲ್‌ಎ ಕಾಂಗ್ರೆಸ್ ಬರುವುದಾದರೆ ಅವರ ಹೆಸರು ಹೇಳಲಿ
* ಕಾಂಗ್ರೆಸ್ ಕೊಳೆತು ನಾರುತ್ತಿದೆ
ಚಿಕ್ಕಮಗಳೂರು(ಜ.27): ಕರ್ನಾಟಕಕ್ಕೆ(Karnataka) ಮಹದಾಯಿ(Mahadayi) ನೀರು ಕೊಡಲ್ಲ ಎಂದು ಸೋನಿಯಾ ಗಾಂಧಿಯೇ(Sonia Gandhi) ಹೇಳಿದ್ದರು. ಆದರೆ ಈಗ ರಾಜ್ಯ ಕಾಂಗ್ರೆಸಿಗರು(Congress) ಮಹಾದಾಯಿ ಪಾದಯಾತ್ರೆ(Mahadayi Padayatra) ಮಾಡಲು ಹೊರಟಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಕರ್ನಾಟಕಕ್ಕೆ ಮಹಾದಾಯಿ ನೀರಿನ ಅನುಕೂಲ ಮಾಡಿಕೊಡಲು ಕೇಳಿಕೊಂಡಿದ್ದರು. ಆಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಭೇಟಿ ಸಂದರ್ಭದಲ್ಲಿ ಸೋನಿಯಾ ಗಾಂಧಿ ಏನೂ ಹೇಳಲಿಲ್ಲ. ಆದರೆ ಭೇಟಿಯಾಗಿದ್ದ ಮುಖಂಡರು ಮಾಧ್ಯಮದ ಎದುರು ಮಾತನಾಡಿ, ಸೋನಿಯಾ ಗಾಂಧಿಯವರು ಕರ್ನಾಟಕದ ಪರವಾಗಿ ಕಳಸಾ ಬಂಡೂರಿ ಯೋಜನೆಗೆ(Kalasa Banduri Project) ಬೆಂಬಲ ನೀಡಲು ಒಪ್ಪಿಗೆ ನೀಡಿದ್ದಾರೆ. ಗೋವಾ(Goa) ಮುಖ್ಯಮಂತ್ರಿಗೆ ಬುದ್ಧಿ ಹೇಳ್ತಿನಿ ಎಂದು ಸೋನಿಯಾ ತಿಳಿಸಿದ್ದಾರೆಂದು ಘೋಷಿಸಿದರು. ಆದರೆ ಮಹಾರಾಷ್ಟ್ರದಲ್ಲಿ(Maharashtra) ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಮಹಾದಾಯಿಯ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಹೇಳಿದ್ದರು. ನಾನು ಹೇಳಿರುವುದು ಸುಳ್ಳಾಗಿದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದರು.
Karnataka Politics ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ, ಈಶ್ವರಪ್ಪ ಹೇಳಿದ್ದಿಷ್ಟು
ಕಾಂಗ್ರೆಸ್ ಗೆದ್ದಲು ತಿಂದ ಮರ: ಈಶ್ವರಪ್ಪ ವ್ಯಂಗ್ಯ
‘ಕಾಂಗ್ರೆಸ್ ಗೆದ್ದಲು ತಿಂದ ಮರ. ಇಲ್ಲಿ ಬಿಟ್ಟಿರೋ ಮಾವಿನ ಹಣ್ಣುಗಳು ಕೊಳೆತು ನಾರುತ್ತಿವೆ. ಇಲ್ಲಿ ಒಳ್ಳೆಯ ಹಣ್ಣು ಬಿಡೋದಿಲ್ಲ. ಹುಳ ಬಿದ್ದಿರುವ ಹಣ್ಣುಗಳು ಉದುರಿಹೋಗುತ್ತಿವೆ. ಕೊಳೆತ ಹಣ್ಣನ್ನು ಯಾರಾದರೂ ಖರೀದಿ ಮಾಡ್ತಾರಾ?’
-ಇದು ಬಿಜೆಪಿಯ(BJP) ಕೆಲವು ಸಚಿವರು, ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿರುವ ಪರಿ.
ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಕೊಳತೆ ನಾರುತ್ತಿದೆ. ಬಿಜೆಪಿ ಮತ್ತು ಮೋದಿ ಸೇಬು. ಇದನ್ನು ಬಿಟ್ಟು ಯಾರಾದರೂ ಕೊಳೆತ ಮಾವಿನ ಹಣ್ಣಿನ ಹತ್ತಿರ ಹೋಗ್ತಾರಾ? ಅವರ ಪಕ್ಷಕ್ಕೆ ಬೇಡಿಕೆ ಕುದುರಿಸಲು ಈ ಆಟ ಆಡುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಿನಿಂದ ಇದನ್ನೇ ಹೇಳಿಕೊಳ್ಳುತ್ತಾ ಬಂದರು. ಜೆಡಿಎಸ್-ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇದನ್ನೇ ಹೇಳುತ್ತಾ ಬಂದ್ರು, ಅವರ ಪಕ್ಷದಲ್ಲಿಯೇ ಇದ್ದ 17 ಜನ ಹೊರಗೆ ಬಂದರು. ಸಿಎಂ ಸ್ಥಾನ ಕಳೆದುಕೊಂಡರು. ಸರ್ಕಾರ ಕಳೆದುಕೊಂಡರು, ಇನ್ನು ಮಾನ ಮರ್ಯಾದೆ ಇಲ್ಲದ ಹಾಗೆ ಮಾತು ಆಡ್ತಾರಲ್ಲ ಎಂದರು.
ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯಗೆ ಸವಾಲ್ ಹಾಕುವೆ. ಒಬ್ಬ ಬಿಜೆಪಿಯ ಸಿಂಹದಮರಿ ಎಂಎಲ್‌ಎ ಕಾಂಗ್ರೆಸ್ ಬರುವುದಾದರೆ ಅವರ ಹೆಸರು ಹೇಳಲಿ, ಬರೀ ಪುಕ್ಸಟ್ಟೆ ಮಾತುಗಳನ್ನು ಆಡುತ್ತಿದ್ದಾರೆ. ನಾನು ಬದುಕಿದ್ದೇನೆ, ಜೀವಂತವಾಗಿದ್ದೇನೆ ಎಂದು ಸೋನಿಯಾ ಗಾಂಧಿ ಅವರಿಗೆ ಅರ್ಥ ಮಾಡಿಸಲು ಈ ರೀತಿಯ ಉಡಾಫೆ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
Congress Padayatra: ಕೋವಿಡ್ ಹೋದ್ಮೇಲೆ ಮೇಕೆದಾಟಿನಲ್ಲಿ ಬಿದ್ದು ಒದ್ದಾಡಿ: ಈಶ್ವರಪ್ಪ
ಯತ್ನಾಳ್ ಹೇಳಿಕೆ ವೈಯಕ್ತಿಕ:
ಶಿವಮೊಗ್ಗ: ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಶಾಸಕರು ಪುನಃ ಆ ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ್ದಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಮತ್ತು ರೇಣುಕಾಚಾರ್ಯ ಅಥವಾ ಬೆಳಗಾವಿ ನಾಯಕರ ಪರಸ್ಪರ ಭೇಟಿ ಮತ್ತು ಚರ್ಚೆಯ ಬಗ್ಗೆ ವಿಶೇಷ ಅರ್ಥ ಬೇಕಾಗಿಲ್ಲ. ಯಾರು ಬೇಕಾದರೂ ಭೇಟಿಯಾಗಬಹುದು, ಚರ್ಚೆ ನಡೆಸಬಹುದು. ಈ ವಿಷಯದಲ್ಲಿ ಋುಣಾತ್ಮಕವಾಗಿ ಯೋಚಿಸುವ ಅಗತ್ಯವಿಲ್ಲ ಎಂದರು.