Asianet Suvarna News Asianet Suvarna News

Karnataka Politics ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ, ಈಶ್ವರಪ್ಪ ಹೇಳಿದ್ದಿಷ್ಟು

* ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಎನ್ನುವ ಸುದ್ದಿ
* ಕಾಂಗ್ರೆಸ್, ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಚಿವ ಈಶ್ವರಪ್ಪ
* ಯತ್ನಾಳ್ ಹೇಳಿಕೆ ಅವರ ವೈಯುಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ್ದಲ್ಲ

KS Eshwarappa Hits out at Siddaramaiah and Congress rbj
Author
Bengaluru, First Published Jan 25, 2022, 6:35 PM IST

 ಶಿವಮೊಗ್ಗ, (ಜ.25): ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಬಂದ ಶಾಸಕರು ಆ ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಶಾಸಕ ಯತ್ನಾಳ್ ಹೇಳಿಕೆ ಅವರ ವೈಯುಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ್ದಲ್ಲ. ಈ ರೀತಿಯ ಹೇಳಿಕೆಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ(KS Eshwarappa) ಹೇಳಿದರು.

ಶಿಮಮೊಗ್ಗದಲ್ಲಿ(Shivamogga) ಇಂದು(ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಾತನ್ನು ಯಾರಾದರೂ ಬಿಜೆಪಿ ಶಾಸಕರು ಹೇಳಿದ್ದಾರಾ? ಇದು ಯತ್ನಾಾಳ್ ಅವರ ವೈಯುಕ್ತಿಕ ಅಭಿಪ್ರಾಯ ಮಾತ್ರ ಎಂದರು.

Karnataka Politics: ವಿಜಯಪುರದ ಹಾಲಿ ಶಾಸಕ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ, ಯತ್ನಾಳ್ ಬಾಂಬ್

ಇದೇ ರೀತಿ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಮತ್ತು ಎಂ.ಪಿ. ರೇಣುಕಾಚಾರ್ಯ ಅಥವಾ ಬೆಳಗಾವಿ ನಾಯಕರುಗಳ ಪರಸ್ಪರ  ಭೇಟಿ ಮತ್ತು ಚರ್ಚೆಯ ಬಗ್ಗೆ ವಿಶೇಷ ಅರ್ಥ ಬೇಕಾಗಿಲ್ಲ. ಮುಂದಿನ ಚುನಾವಣೆಯ ಕುರಿತು ಮಾತನಾಡಿದರಬಹುದು. ಯಾರು ಬೇಕಾದರೂ ಭೇಟಿಯಾಗಬಹುದು, ಚರ್ಚೆ ನಡೆಸಬಹುದು. ಈ ವಿಷಯದಲ್ಲಿ ಋಣಾತ್ಮಕವಾಗಿ ಯೋಚಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ, ಸಾಲದಲ್ಲಿಯೇ ಮುಳುಗಿ ಸಾಲದಲ್ಲಿಯೇ ಏಳುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ಟಾಂಗ್ ನೀಡಿದ ಸಚಿವ ಈಶ್ವರಪ್ಪ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಜ್ರ ವೈಡೂರ್ಯಗಳನ್ನು ರಸ್ತೆ ಮೇಲಿಟ್ಟು ಮಾಡಲಾಗುತ್ತಿತ್ತಾ? ಯಾರ ಮನೆಗೂ ಬೀಗವನ್ನೇ ಹಾಕದೆ ಇರಲಾಗುತ್ತಿತ್ತಾ? ಆಗ ರಾಜ್ಯವು ವಿಜಯನಗರದ ಸಾಮ್ರಾಜ್ಯದ ಒಂದು ಭಾಗವಾಗಿತ್ತಾ? ಎಂದು ಪ್ರಶ್ನಿಸಿದರು.

ತಾನು ಮುಖ್ಯಮಂತ್ರಿಯಾಗಿದ್ದಾಗ ಒಂದು ರುಪಾಯಿ ಕೂಡ ಸಾಲ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಈಶ್ವರಪ್ಪ,  ಸರ್ಕಾರ ಎಂದಾಗ ಸಾಲ ಮಾಡುವುದು, ತೀರಿಸುವುದೂ ಎಲ್ಲವೂ ಇರುತ್ತದೆ. ಅರ್ಥ ಸಚಿವರಾದ ಸಿದ್ದರಾಮಯ್ಯನವರಿಗೆ ಇದೆಲ್ಲ ಗೊತ್ತೇ ಇರುತ್ತದೆ. ಈ ಬಗ್ಗೆ ಸಿದ್ದರಾಮಯ್ಯಗೆ ಪಾಠ ಮಾಡಲು ನಾನು ಎಲ್‌ಕೆಜಿ ಟೀಚರ್ ಅಲ್ಲ ಎಂದು ಹೇಳಿದರು.

ಇಂತಹ ವ್ಯಕ್ತಿ ಯಾಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಬೇಕಿತ್ತು? ಸರ್ಕಾರವನ್ನು ಯಾಕೆ ಕಳೆದುಕೊಳ್ಳಬೇಕಿತ್ತು? ಅವರು ಅಧಿಕಾರಾವಧಿಯಲ್ಲಿ ತಪ್ಪು ಮಾಡಿದ ಕಾರಣಕ್ಕಾಗಿಯೇ ಜನ ಇವರನ್ನು ಸೋಲಿಸಿದರು. ಸೋತ ಬಳಿಕ ಸಿದ್ದರಾಮಯ್ಯ ಎಲ್ಲರಿಗೂ ಪಾಠ ಮಾಡುವ ಕೆಲಸ ಮಾಡುತ್ತಿದ್ದಾಾರೆ ಎಂದು ಕಟುಕಿದರಲ್ಲದೆ, ಇಂತಹ ಪಾಠವನ್ನು ಜನರು ಒಪ್ಪುವುದಿಲ್ಲ. ವಿರೋಧ ಪಕ್ಷವಾಗಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಲಿ. ಆಡಳಿತ ಪಕ್ಷದ ತಪ್ಪುಗಳಿದ್ದರೆ ತಿಳಿಸಿ ಹೇಳಲಿ. ಹೋರಾಟ ಬೇಕಾದರೂ ಮಾಡಿ. ಆದರೆ ಕೋವಿಡ್ ಮುಗಿಯುವವರೆಗೂ ಕಾಯಿರಿ. ಮೇಕೆದಾಟು ಪಾದಯಾತ್ರೆೆಯ ಮೂಲಕ  ತಣ್ಣಗೆ ಮಲಗಿದ್ದ ಮಲ್ಲಿಕಾರ್ಜುನ  ಖರ್ಗೆಯವರಿಗೆ ಕೊರೋನಾ ಬರಿಸಿದ್ದೀರಿ ಎಂದು  ಟಾಂಗ್ ಕೊಟ್ಟರು.

ಸೋನಿಯಾ ಮೇಕೆದಾಟು ವಿರೋಧಿ ಹೇಳಿಕೆ ನೀಡಿದ್ದರು:
ಈಗ ಮೇಕೆದಾಟು ಯೋಜನೆ ಕುರಿತು ಹೋರಾಟ  ಎನ್ನುತ್ತಿದ್ದಾಾರೆ. ವಾಸ್ತವವಾಗಿ ಮೇಕೆದಾಟು ಯೋಜನೆಗೆ ಚಾಲನೆ ನೀಡಿದ್ದು ನಾನು ನೀರಾವರಿ ಸಚಿವನಾಗಿದ್ದಾಗ. ಆಗ ಸಿದ್ದರಾಮಯ್ಯ, ಡಿಕೆಶಿ, ಖರ್ಗೆ, ಧರ್ಮಸಿಂಗ್ ಸೇರಿದಂತೆ ಅನೇಕ ನಾಯಕರು ದೆಹಲಿಯಲ್ಲಿ ಸೋನಿಯಾರನ್ನು ಭೇಟಿ ಮಾಡಿ ಹೊರ ಬಂದು ಮಾಧ್ಯಮಗಳಿಗೆ ಕಾಂಗ್ರೆಸ್ ಕರ್ನಾಟಕದ ಪರವಾಗಿದೆ ಎಂದು ಹೇಳಿದ್ದರು. 

ಬಳಿಕ ಇದೇ ಸೋನಿಯಾ ಗಾಂಧಿ ಗೋವಾ  ಚುನಾವಣೆ ಸಂದರ್ಭದಲ್ಲಿ ಮಹಾದಾಯಿಯ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲ ಅಂದಿದ್ದರು. ಇದನ್ನು ಡಿಕೆಶಿ ಮತ್ತು ಸಿದ್ದರಾಮಯ್ಯ ಇಲ್ಲ ಎಂದು ಹೇಳಲಿ ನೋಡೋಣ ಸವಾಲು ಹಾಕಿದ ಈಶ್ವರಪ್ಪನವರು ಈ ಹೇಳಿಕೆಗಾಗಿ ಸೋನಿಯಾಗಾಂಧಿಯವರು ರಾಜ್ಯದ ಕ್ಷಮೆ ಕೋರಬೇಕು. ತಾವು ಚುನಾವಣೆ ದೃಷ್ಟಿಯಿಂದ ಈ ರೀತಿಯಲ್ಲಿ ಹೇಳಿದ್ದು ಎಂದು ಹೇಳಬೇಕು. ಆ ಬಳಿಕ ಇವರು ಮಹಾದಾಯಿ ಕುರಿತು ಪಾದಯಾತ್ರೆ ಹಮ್ಮಿಕೊಳ್ಳಲಿ ಎಂದು ತಿಳಿಸಿದರು.
 

Follow Us:
Download App:
  • android
  • ios