*    ಮಕ್ಕಳ ಮಧ್ಯ ನಿಂತುಕೊಂಡು ಡಿಕೆಶಿ ಪೋಸ್‌ ಕೊಡ್ತಾರೆ. ಏನು ಇವರು ಇಂಟರ್‌ ನ್ಯಾಷನಲ್‌ ಹೀರೋನಾ?*    ಕೊರೋನಾ ನಿಯಮಾವಳಿ ಉಲ್ಲಂಘಿಸಿ ಬಿಜೆಪಿಯವರು ಕೊನೆ ಪಕ್ಷ ಕ್ಷಮೆನಾದ್ರೂ ಕೇಳಿದ್ದಾರೆ*    ಕಾಂಗ್ರೆಸ್‌ನವರಿಗೆ ಕ್ಷಮೆ ಕೇಳುವ ಸೌಜನ್ಯವು ಇಲ್ಲ 

ಶಿವಮೊಗ್ಗ(ಜ.12): ಮೇಕೆದಾಟು ಯೋಜನೆ(Mekedatu Project) ಜಾರಿಗೆ ಆಗ್ರಹಿಸಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್‌ ಮುಖಂಡರ ವಿರುದ್ಧ ಗ್ರಾಮೀಣಾಭಿವೃದ್ಧಿ ಕೆ.ಎಸ್‌.ಈಶ್ವರಪ್ಪ ವಾಗ್ದಾಳಿ ಮುಂದುವರೆಸಿದ್ದು, ಸದ್ಯಕ್ಕೆ ಪಾದಯಾತ್ರೆ ಬೇಡ ಎಂದು ನಾವು ಅಂದಿನಿಂದಲೂ ಪ್ರಾರ್ಥನೆ ಮಾಡ್ತಿದ್ದೀವಿ. ಕೋವಿಡ್‌ ಹೋದ ಮೇಲೆ ನೀವು ಮೇಕೆದಾಟಿನಲ್ಲಿ ಬಿದ್ದು ಒದ್ದಾಡಿ. ಬೇಡ ಅಂದವರು ಯಾರು ಎಂದು ಕಿಡಿ ಕಾರಿದ್ದಾರೆ. 

ಮಕ್ಕಳ(Children) ಮಧ್ಯ ನಿಂತುಕೊಂಡು ಡಿಕೆಶಿ ಪೋಸ್‌ ಕೊಡ್ತಾರೆ. ಏನು ಇವರು ಇಂಟರ್‌ ನ್ಯಾಷನಲ್‌ ಹೀರೋನಾ? ನಾಚಿಕೆ ಆಗಬೇಕಿತ್ತು. ಇವರಿಗೆ ಮಕ್ಕಳ ರಕ್ಷಣಾ ಆಯೋಗದವರು ನೋಟೀಸ್‌ ಕೊಡ್ತಿದ್ದಾರೆ ಎಂದಿದ್ದಾರೆ. ಕೊರೋನಾ ನಿಯಮಾವಳಿ ಉಲ್ಲಂಘಿಸಿ ಬಿಜೆಪಿಯವರು(BJP) ಕೊನೆ ಪಕ್ಷ ಕ್ಷಮೆನಾದ್ರೂ ಕೇಳಿದ್ದಾರೆ. ಆದರೆ, ಕಾಂಗ್ರೆಸ್‌ನವರಿಗೆ ಕ್ಷಮೆ ಕೇಳುವ ಸೌಜನ್ಯವು ಇಲ್ಲ, ಏನ್‌ ಮಾಡ್ತೀರಾ ಮಾಡ್ಕೊಳ್ಳಿ ಎಂದು ದಾದಾಗಿರಿ, ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Congress Padayatre ಪಾದಯಾತ್ರೆ ವೇಳೆ ಶಾಲಾ ಮಕ್ಕಳ ಜತೆ ಬೆರೆತ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್ ಬುಕ್

ಪಾದಯಾತ್ರೆಯಲ್ಲಿ ಸರ್ಕಾರ ನಡೆಸಿದವರು ಇದ್ದು, ಕೋವಿಡ್‌ ಸಂದರ್ಭದಲ್ಲಿ ಈ ರೀತಿ ಏನು ಬೇಕಾದ್ರೂ ಮಾಡಿಕೊಳ್ಳಿ. ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಅಂದ್ರೆ ಹೇಗೆ. ಮೇಕೆದಾಟು ಯೋಜನೆ ಆದಷ್ಟುಬೇಗ ಜಾರಿಗೆ ತರಲು ಸರ್ಕಾರ ಏನು ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತದೆ. ನ್ಯಾಯಾಲಯದ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.

ಪಾದಯಾತ್ರೆಗೆ ಸಿದ್ದು, ಡಿಕೆಶಿ ಹಠ ಹಿಡಿದರೆ ನಾವೇನು ಮಾಡೋಣ

ಕೊರೋನಾ(Coronavirus) ಸಂದರ್ಭದಲ್ಲಿ ಹೋರಾಟ ನಡೆಸಿ ಆಪತ್ತು ತಂದುಕೊಳ್ಳಬೇಡಿ, ಸಾಯಬೇಡಿ ಅಂತೀವಿ. ಇಲ್ಲ ನಾವು ಸಾಯುವವರೆ, ಹೋರಾಟ ನಡೆಸಿಯೇ ನಡೆಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹಠ ಹಿಡಿದರೆ ನಾವೇನು ಮಾಡಲು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಹೇಳಿದ್ದರು. 

ಇಬ್ಬರೇ ಪಾದಯಾತ್ರೆ(Padayatra) ಹೋಗುತ್ತೇವೆ ಎನ್ನುತ್ತೀರಾ. ನೀವಿಬ್ಬರೇ ಹೋಗುತ್ತೇವೆ ಅಂದರೆ ನಿಮ್ಮ ಕಾರ್ಯಕರ್ತರು ಬಿಡುವುದಿಲ್ಲ. ಹತ್ತಿರದಲ್ಲೇ ತಾಪಂ, ಜಿಪಂ, ವಿಧಾನಸಭೆ ಚುನಾವಣೆ(Assembly Election)ಇದೆ. ಎದುರಿಗೆ ಶೋ ಮಾಡಬೇಕು ಅಂತಾ ತುಂಬಾ ಜನ ಬರುತ್ತಾರೆ. ಸುಮ್ಮ ಸುಮ್ಮನೆ ನೀವು ಏಕೆ ಸಾಯ್ತೀರಾ, ಅವರನ್ನೂ ಏಕೆ ಸಾಯಿಸುತ್ತೀರಾ? ಎಂದು ಪ್ರಶ್ನಿಸಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ(HD Devegowda), ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ(BS Yediyurappa), ಸಿದ್ದರಾಮಯ್ಯ ಇವರೆಲ್ಲರೂ ರಾಜ್ಯದ ಆಸ್ತಿ. ರಾಜ್ಯದ ಆಸ್ತಿ ಕಳೆದುಕೊಳ್ಳುವುದಕ್ಕೆ ಇಚ್ಛೆಪಡುವುದಿಲ್ಲ. ಹಾಗಾಗಿ ಈ ಸಂದರ್ಭದಲ್ಲಿ ಹೋರಾಟ ಬೇಡ ಎಂದರು.

Makedatu Padayatre ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಗೈರಾಗಿದ್ದೇಕೆ? ಕಾರಣ ಬಿಚ್ಚಿಟ್ಟ ಮಧು ಬಂಗಾರಪ್ಪ

ದೇಶದಲ್ಲಿ, ರಾಜ್ಯದಲ್ಲಿ ವಿರೋಧ ಪಕ್ಷ ಇರಬೇಕು. ಇವತ್ತು ವಿರೋಧ ಪಕ್ಷವೇ ಇಲ್ಲದ ಹಾಗೆ ಆಗಿ ಹೋಗಿದೆ. ಅಧಿಕೃತವಾಗಿ ಕೇಂದ್ರದಲ್ಲಿ ವಿಪಕ್ಷ ಇಲ್ಲ. ರಾಜ್ಯದಲ್ಲೂ ನಾಳೆ ಚುನಾವಣೆ ಎದುರಾದರೆ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ವಿಪಕ್ಷದಲ್ಲಿ ಇರುವ ಪರಿಸ್ಥಿತಿ ಇಲ್ಲ ಎಂದು ವ್ಯಂಗ್ಯವಾಡಿದ್ದರು. 

ಮನೆಯಲ್ಲಿ ನಾನು ಸ್ವಿಮ್ಮಿಂಗ್‌ ಮಾಡಿದರೆ ನಿಯಮ ಅಡ್ಡಿಯಾಗುತ್ತಾ?: ಸುಧಾಕರ್‌

ವಿಶ್ವದಲ್ಲೇ ಯಾವ ವಿರೋಧ ಪಕ್ಷ (Opposition Party) ಕೂಡ ಕೊರೋನಾ ವಿಚಾರದಲ್ಲಿ ಸರ್ಕಾರದ ಕ್ರಮಗಳಿಗೆ ವಿರೋಧ ಮಾಡುತ್ತಿಲ್ಲ. ಆದರೆ, ರಾಜ್ಯ ಕಾಂಗ್ರೆಸ್‌ (Congress) ಪಕ್ಷ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ರಾಜಕೀಯ ಮಾಡುತ್ತಿರುವುದು ದುರಾದೃಷ್ಟಕರ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr. K Sudhakar) ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಕುದುರೆ ರೇಸ್‌ ಆದರೂ ಮಾಡಲಿ, ಮ್ಯಾರಥಾನ್‌ ಆದರೂ ಮಾಡಲಿ. ರೈಲು, ಬಸ್‌ನಲ್ಲಿ ಹೋಗಲಿ ಅಥವಾ ಟ್ರಕ್ಕಿಂಗ್‌ ಮಾಡಲಿ. ಇವೆಲ್ಲವೂ ಅವರ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಸಮಯ ನೋಡಿ ಮಾಡಲಿ ಎಂದು ವ್ಯಂಗವಾಡಿದರು.