ಕಾಂಗ್ರೆಸ್‌ಗೆ ಹೊಸ ನಾಯಕತ್ವ ಹೈಡ್ರಾಮಕ್ಕೆ ತೆರೆ: ಅಂತಿಮವಾಗಿ CWC ಸಭೆಯಲ್ಲಿ ಮಹತ್ವದ ತೀರ್ಮಾನ

ನಾಯಕತ್ವ ಸಂಬಂಧ ಕಾಂಗ್ರೆಸ್‌ನಲ್ಲಿ ಸೋಮವರ ಬೆಳಗ್ಗೆಯಿಂದ ನಡೆದ ಆತಂರಿಕೆ ಕಚ್ಚಾಟಕ್ಕೆ ತೆರೆ ಬಿದ್ದಿದೆ. CWC ಸಭೆಯ ಕೊನೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.

Sonia Gandhi likely to continue as Congress president

ನವದೆಹಲಿ, (ಆ.24): ಇಂದು (ಸೋಮವಾರ) ಬೆಳಗ್ಗೆಯಿಂದ ಶುರುವಾಗಿದ್ದ ಕಾಂಗ್ರೆಸ್ ಹೈಡ್ರಾಮ ಸಂಜೆ ಹೊತ್ತಿಗೆ ಶಾಂತವಾಗಿದ್ದು,  ಎಐಸಿಸಿ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರೇ ಮುಂದುವರೆಯಲಿದ್ದಾರೆ. 

ಹೌದು... ಇನ್ನೊಂದು ವರ್ಷದ ವರೆಗೆ ಸೋನಿಯಾ ಅವರನ್ನ ಎಐಸಿಸಿ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿಸಲು ಇಂದು (ಸೋಮವಾರ) ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್ ಕಲಹ: 'ಗಾಂಧಿ' ಕುಟುಂಬದ ಪರ ಯಾರ್ಯಾರಿದ್ಧಾರೆ?

ಪಕ್ಷದ ನಾಯಕತ್ವದ ಬಗ್ಗೆ ಪತ್ರ ಬರೆದ 23 ಮಂದಿ ಹಿರಿಯ ಕಾಂಗ್ರೆಸ್ ನಾಯಕರ ವಿರುದ್ಧವೂ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೆ ದೀರ್ಘಾವಧಿ ಚರ್ಚೆ, ವಾಗ್ವಾದದ ನಂತರ ಸದ್ಯದ ಸ್ಥಿತಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ನಿರ್ಧರಿಸಿ, ಸೋನಿಯಾ ಗಾಂಧಿ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಮುಂದುವರಿಸಲು ಸಭೆ ತೀರ್ಮಾನಿಸಿದೆ.  

ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಅಲ್ಲೋಲ ಕಲ್ಲೋಲ, ರಾಹುಲ್ ಕಿಡಿ!

ಇಂದಿನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಮುಂದಿನ ದಿನಗಳಲ್ಲಿ ಮುನ್ನಡೆಸುವವರು ಯಾರು ಎಂಬ ಬಗ್ಗೆ ರರ್ಚೆಗಳು ನಡೆದವು. ಇಂದು ಬೆಳಗ್ಗೆ ಸಭೆ ಆರಂಭವಾಗುತ್ತಿದ್ದಂತೆಯೇ ಸೋನಿಯಾ ಗಾಂಧಿಯವರು ತಾವು ಮಧ್ಯಂತರ ಅಧ್ಯಕ್ಷೆ ಹುದ್ದೆ ತೊರೆಯಲಿದ್ದು ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಮುಂದುವರಿಸಬೇಕೆಂದು ಕೇಳಿಕೊಂಡಿದ್ದರು.

ಮತ್ತೊಂದೆಡೆ  ಗಾಂಧಿ ಕುಟುಂಬದವರೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂಬುದಾಗಿ ಕೆಲ ಕಾಂಗ್ರೆಸ್ ನಾಯಕರ ಒಂದು ಬಣ ಬೆಂಬಲಿಸಿದ್ರೆ,  ಗಾಂಧಿ ಕುಟುಂಬದವರೇತರರು ಎಐಸಿಸಿ ಅಧ್ಯಕ್ಷರಾಗಿ ನೇಮಕಕ್ಕೆ ಬೆಂಬಲ ಸೂಚಿಸಿದ್ದರು. 

ಮತ್ತೊಂದೆಡೆ ರಾಹುಲ್ ಗಾಂಧಿ ಅವರು ಪಕ್ಷದ ಹಿರಿಯರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಪ್ರತಿಕ್ರಿಯೆ ವ್ಯಕ್ತಪಡಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು.

Latest Videos
Follow Us:
Download App:
  • android
  • ios