ಸೀತೆ ಅಗ್ನಿ ಪರೀಕ್ಷೆ ಗೆದ್ದುಬಂದಂತೆ, ನೀವು ಮುಡಾ ಹಗರಣದಿಂದ ಗೆದ್ದು ಬನ್ನಿ; ಅಲ್ಲಿವೆರೆಗೆ ರಾಜಿನಾಮೆ ಕೊಡಿ ಸಿದ್ದರಾಮಯ್ಯ!
ಸೀತಾಮಾತೆ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದಂತೆ, ಸಿದ್ದರಾಮಯ್ಯ ಅವರೇ ನಿಮ್ಮ ಮೇಲಿರುವ ಮುಡಾ ಹಗರಣದ ಆರೋಪದಿಂದ ಗೆದ್ದು ಬರುವವರೆಗೂ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಮಾಜಿ ಎಂಎಲ್‌ಸಿ ವೈ.ಎ. ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ತುಮಕೂರು (ಜು.16): ರಾಜ್ಯದ ಸಾಂಸ್ಕೃತಿಕ ನಗರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ದೊಡ್ಡ ಹಗರಣ ನಡೆದಿದೆ. ಸೀತೆ ಅಗ್ನಿ ಪರೀಕ್ಷೆ ಗೆದ್ದುಬಂದಂತೆ ನೀವೂ ಮುಡಾ ಹಗರಣದಿಂದ ಗೆದ್ದುಬನ್ನಿ.. ಅಲ್ಲಿವರೆಗೂ ನೀವು ರಾಜೀನಾಮೆ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.
ತುಮಕೂರು ಜಿಲ್ಲೆಯ ಶಿರಾದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೀತೆ ಅಗ್ನಿ ಪರೀಕ್ಷೆ ಗೆದ್ದು ಬಂದಂತೆ ನೀವು ಗೆದ್ದು ಬನ್ನಿ ಅಲ್ಲಿವರೆಗೂ ರಾಜೀನಾಮೆ ಕೊಡಿ. ಮುಡಾ ಹಗರಣ ಬೆಂಗಳೂರಿನ ಬದಲಿ ಸೈಟ್ ಗಿಂತ ದೊಡ್ಡ ಹಗರಣವಾಗಿದೆ. ಸರಿ ಸುಮಾರು 5,000 ಕೋಟಿ ರೂ.ಗಿಂತಲೂ ಅಧಿಕ ಹಗರಣ ನಡೆದಿದೆ. ಮೂಡಾ ಹಾಗೂ ವಾಲ್ಮೀಕಿ ನಿಮಗದ ಹಗರಣಗಳನ್ನು ತನಿಖೆ ಮಾಡಲು ಸಿಬಿಐಗೆ ವಹಿಸಬೇಕು. ಹಾಗಾದಲ್ಲಿ ಮಾತ್ರ ಸತ್ಯಾಂಶ ಹೊರಗೆ ಬರಲಿದೆ ಎಂದು ಹೇಳಿದ್ದಾರೆ.
ಡಿಕೆಶಿ 2 ಬಾರಿ ನನ್ನ ಜೊತೆಗಿದ್ದೇ ಸೋಲಿಸಿದ್ರು, ಈಗ ಒಂದು ಸೋಲಿಗೆ ಹತಾಶರಾದರೆ ಹೇಗೆ: ನಿಖಿಲ್ ಕುಮಾರಸ್ವಾಮಿ
ಮುಡಾ ಹಗರಣದ ಸತ್ಯಾಂಶ ಹೊರ ಬರುವವರೆಗೂ ಸಿಎಂ ಸಿದ್ಧರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸಮಾಜವಾದಿ ಹೋರಾಟದಿಂದ ಬಂದ ನೀವು ಹೋರಾಟದಿಂದ ಬದುಕು ಕೊಟ್ಟಿಕೊಂಡವರು. ಬಿಜೆಪಿ ಮುಖಂಡರ ಹೋರಾಟ ಹತ್ತಿಕ್ಕುವ ನಿಮಗೆ ಉಳಿಗಾಲವಿಲ್ಲ. ಲೋಕಾಯುಕ್ತ ಸಂಸ್ಥೆಯನ್ನು ಸಾಯಿಸಿದ್ದು ಇದೇ ಸಿದ್ಧರಾಮಯ್ಯ, ಲೋಕಾಯುಕ್ತ ಸಾಯಿಸಿ ಎಸಿಬಿ ಮಾಡಿದ್ದಾರೆ. ಆದರೆ, ಎಸಿಬಿ ಕೆಲಸ ಏನೆಂದರೆ ತಮಗೆ ಆಗದವರ ವಿರುದ್ಧ ಕೇಸ್ ಹಾಕೋದು ಆಗಿದೆ. ಲೋಕಾಯುಕ್ತ ಗಟ್ಟಿಯಾಗಿದಿದ್ದರೆ ಸಿಎಂ ಸೇರಿ ಹಲವು ಸಚಿವರು ಜೈಲು ಪಾಲಾಗುತಿದ್ದರು ಎಂದು ಟೀಕೆ ಮಾಡಿದರು.
ತುಮಕೂರು-ಚಿತ್ರದುರ್ಗ ನಡುವೆ ಏರ್ಪೋರ್ಟ್ ಇಲ್ಲ; ತಮಿಳುನಾಡಿಗೆ ಕೌಂಟರ್ ಕೊಡಲು ಬೆಂಗಳೂರಲ್ಲೇ 2ನೇ ಏರ್ಪೋರ್ಟ್ ನಿರ್ಮಾಣ
ತುಮಕೂರು ಬಳಿ ಏರ್ಪೋರ್ಟ್ ನಿರ್ಮಾಣಕ್ಕೆ ಗುಡ್‌ಬೈ ಹೇಳಿದ ಸರ್ಕಾರ: ರಾಜ್ಯದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರೆಯನ್ನು ತಗ್ಗಿಸಲು ತುಮಕೂರು - ಚಿತ್ರದುರ್ಗ ಮದ್ಯದಲ್ಲಿ ಹೊಸ ವಿಮಾನ ನಿಲ್ದಾಣ ಮಾಡುವ ಪ್ರಸ್ತಾವನೆ ಇಲ್ಲ. ಬೆಂಗಳೂರಿನಲ್ಲಿಯೇ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ 7 ಲೊಕೇಶನ್ ಗುರುತಿಸಲಾಗಿದ್ದು, ಅದನ್ನು ಕೇಂದ್ರದ ಅನುಮತಿ ಪಡೆದು ಅಂತಿಮಗೊಳಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.