Asianet Suvarna News Asianet Suvarna News

ಡಿಕೆಶಿ 2 ಬಾರಿ ನನ್ನ ಜೊತೆಗಿದ್ದೇ ಸೋಲಿಸಿದ್ರು, ಈಗ ಒಂದು ಸೋಲಿಗೆ ಹತಾಶರಾದರೆ ಹೇಗೆ: ನಿಖಿಲ್ ಕುಮಾರಸ್ವಾಮಿ

ಡಿ.ಕೆ. ಶಿವಕುಮಾರ್ ಅವರೇ ನಮ್ಮ ಜೊತೆಗಿದ್ದೇ ಎರಡು ಬಾರಿ ನನ್ನನ್ನು ಸೋಲಿಸಿದ್ದೀರಿ. ಒಂದೇ ಒಂದು ಸೋಲಿಗೆ ನೀವು ಇಷ್ಟೊಂದು ಹತಾಶರಾದರೆ ಹೇಗೆ? ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Channapatna constituency by election 2024 Nikhil Kumaraswamy outraged against DK Shivakumar sat
Author
First Published Jul 16, 2024, 2:35 PM IST | Last Updated Jul 16, 2024, 2:35 PM IST

ರಾಮನಗರ (ಜು.16): ಡಿ.ಕೆ. ಶಿವಕುಮಾರ್ ಅವರೇ ನೀವು ನಮ್ಮ ಜೊತೆಗಿದ್ದೇ ಎರಡು ಬಾರಿ ನನ್ನನ್ನು ಸೋಲಿಸಿದ್ದೀರಿ. ನೀವು ಒಂದೇ ಒಂದು ಸೋಲಿಗೆ ಇಷ್ಟೊಂದು ಹತಾಶರಾದರೆ ಹೇಗೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಸವಾಲು ಹಾಕಿದ್ದಾರೆ. ಆದರೆ, ಇಂತಹ ಎಷ್ಟೋ ಸವಾಲುಗಳನ್ನು ಕುಮಾರಸ್ವಾಮಿ ಅವರು ನೋಡಿ ಯಶಸ್ವಿಯಾಗಿ ಎದುರಿಸಿದ್ದಾರೆ. ಇಂತಹ ಸವಾಲುಗಳನ್ನು ಸ್ವೀಕರಿಸಿಯೇ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಲೋಕಸಭಾ ಚುನಾವಣಾ ಫಲಿತಾಂಶದಿಂದ ಡಿಸಿಎಂ ಹತಾಶರಾಗಿದ್ದಾರೆ ಎಂದು ಟೀಕೆ ಮಾಡಿದರು.

ತುಮಕೂರು-ಚಿತ್ರದುರ್ಗ ನಡುವೆ ಏರ್ಪೋರ್ಟ್ ಇಲ್ಲ; ತಮಿಳುನಾಡಿಗೆ ಕೌಂಟರ್ ಕೊಡಲು ಬೆಂಗಳೂರಲ್ಲೇ 2ನೇ ಏರ್ಪೋರ್ಟ್ ನಿರ್ಮಾಣ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಒಂದು ಪ್ರಶ್ನೆ ಕೇಳ್ತೀನಿ. ಕೇವಲ ಒಂದು ಸೋಲಿಗೆ ಇಷ್ಟೊಂದು ಹತಾಶರಾದರೆ ಹೇಗೆ.? ನನ್ನನ್ನ ಎರಡು ಬಾರಿ ಜೊತೆಯಲ್ಲೇ ಇದ್ದು ಸೋಲಿಸಿದ್ರಿ. ಜೊತೆಯಲ್ಲೇ ಇದ್ದು ಕುತ್ತಿಗೆ ಕುಯ್ದಿದ್ದೀರಿ.! ನೀವು ಕುಮಾರಸ್ವಾಮಿ ಅವರನ್ನ ನೆನಪಿಸಿಕೊಳ್ಳಬೇಕು. 2019ರ ಚುನಾವಣೆಯಲ್ಲಿ ನಿಮಗೆ ಸಂಪೂರ್ಣ ಸಹಕಾರ ಕೊಟ್ಟಿದ್ದರು. ನಿಮ್ಮ ಸಹೋದರರನ್ನ ಗೆಲ್ಲಿಸಲು ನಾವು ಹೇಗೆ ನಡೆದುಕೊಂಡೆವು ಅದನ್ನ ನೆನಪಿಸಿಕೊಳ್ಳಿ ಎಂದು ಡಿಸಿಎಂ ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದಿಂದ ನಿಖಿಲ್ ಸ್ಪರ್ಧೆಗೆ ಸ್ಥಳೀಯ ಮುಖಂಡರ ಒತ್ತಾಯ ವಿಚಾರದ ಬಗ್ಗೆ ಮಾತನಾಡಿ, ನಿನ್ನೆ ಸಭೆ ಮಾಡಿ ಈ ಬಗ್ಗೆ ಸ್ಥಳೀಯ ನಾಯಕರು ಚರ್ಚೆ ಮಾಡಿರೋದು ಗಮನಕ್ಕೆ ಬಂತು. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಆಗಬೇಕಿರೋದು ದೆಹಲಿಯಲ್ಲಿ. ಕಾರಣ ನಾವು ಎನ್‌ಡಿಎ ಮೈತ್ರಿಕೂಟದ ಒಂದು ಭಾಗ. ಈಗಾಗಲೇ ಸಿ.ಪಿ. ಯೋಗೇಶ್ವರ್ ಅವರು ಬೆಂಬಲಿಗರ ಪಡೆ ಇಟ್ಟುಕೊಂಡು ಕೆಲಸ‌ ಮಾಡಿದ್ದಾರೆ. ಆದರೆ, ಹೆಚ್.ಡಿ. ಕುಮಾರಸ್ವಾಮಿ ಅವರು ಅಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಹಾಗಾಗಿ ಸಾಮಾನ್ಯವಾಗಿ ಜೆಡಿಎಸ್ ಗೆ ಉಳಿಸಿಕೊಳ್ಳಬೇಕು ಎಂಬುದು ಸ್ಥಳೀಯ ಮುಖಂಡರು ಅಭಿಪ್ರಾಯ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ತೀರ್ಮಾನ ಆಗುತ್ತದೆ ಎಂದು ತಿಳಿಸಿದರು.

Bengaluru: ತುಂತುರು ಮಳೆಯಲ್ಲಿ ರಸ್ತೆ ಮದ್ಯದಲ್ಲಿಯೇ ಕಿಸ್ಸಿಂಗ್, ಹಗ್ಗಿಂಗ್ ಮಾಡಿದ ಬೆಂಗಳೂರಿನ ಲಜ್ಜೆಗೆಟ್ಟ ಜೋಡಿ!

ಇನ್ನು ಪಕ್ಷದಲ್ಲಿ ನನಗೆ ನನ್ನದೇ ಆದ ಜವಾಬ್ದಾರಿ ಇದೆ. ಮುಂದಿನ 4 ವರ್ಷ ಪಕ್ಷವನ್ನ ತಳಮಟ್ಟದಿಂದ ಸಂಘಟನೆ ಮಾಡಬೇಕು. ಮುಂದಿನ ನಾಲ್ಕು ವರ್ಷ ಇಡೀ ರಾಜ್ಯ ಪ್ರವಾಸ ಮಾಡ್ತೇನೆ. ಹಾಗಾಗಿ ಪಕ್ಷಕಟ್ಟುವ ಕೆಲಸ ಮಾಡ್ತೇನೆ. ಒಂದುವೇಳೆ ರಾಷ್ಟ್ರೀಯ ನಾಯಕರು ಸೂಚನೆ ನೀಡಿದ್ರೆ ಕೂತು ಚರ್ಚೆ ಮಾಡ್ತೇವೆ. ಮಂಡ್ಯದಲ್ಲಿ ಕುಮಾರಣ್ಣನ ಜನತಾದರ್ಶನ ಕಾರ್ಯಕ್ರಮಕ್ಕೆ ಸರ್ಕಾರ ಯಾವರೀತಿ ನಡೆದುಕೊಳ್ತು. ಅಧಿಕಾರಿಗಳನ್ನ ಕಳುಹಿಸದೇ ಆದೇಶ ಮಾಡಿದ್ದು ಇದೇ ರಾಜ್ಯ ನಾಯಕರು. ರಾಜ್ಯ ಮತ್ತು ಕೇಂದ್ರ ಪರಸ್ಪರ ಬಾಂದವ್ಯ ಇಟ್ಟುಕೊಂಡು ಕೆಲಸ‌ ಮಾಡಬೇಕು. ಆದರೆ, ರಾಜ್ಯ ಸರ್ಕಾರದ ವರ್ತನೆ ಹೇಗಿದೆ ಅಂತ ಎಲ್ಲಾ ನೋಡ್ತಿದ್ದಾರೆ. ಬೇರೆ ರಾಜ್ಯದ ಮುಖ್ಯಮಂತ್ರಿಗಳು‌ ಕೇಂದ್ರ ಸಚಿವರ ಜೊತೆ ಒಳ್ಳೆ ಬಾಂದವ್ಯ ಹೊಂದಿದ್ದಾರೆ. ನಮ್ಮ ರಾಜ್ಯದ ಸಿಎಂ, ಡಿಸಿಎಂ ಕೇಂದ್ರ ಸಚಿವರ ವಿರುದ್ಧ ಇದ್ದಾರೆ. ಈ ಸರ್ಕಾರ ಸಲಹೆ ಸೂಚನೆ ತೆಗೆದುಕೊಳ್ಳುವ ಮಟ್ಟಕ್ಕೆ ಇಲ್ಲ. ಸಲಹೆ ಪಡೆಯಲು ಇವರು ರೆಡಿ ಇಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios