Karnataka By Election: ಹಾನಗಲ್‌ನಲ್ಲಿ BJP ಸೋಲಿಗೆ ಕಾರಣವಾಗಿದ್ದೇನು ?
- ಸಿಂದಗಿಯಲ್ಲಿ ವಿಜಯ ಪತಾಕೆ ಹಾರಿಸಿದ ಬಿಜೆಪಿ(BJP)ಹಾನಗಲ್‌ನಲ್ಲಿ ಯಾಕೆ ಸೋತಿತು ?
- ಹಾನಗಲ್‌ನಲ್ಲಿ BJP ಸೋಲಿಗೆ ಕಾರಣವಾಗಿದ್ದೇನು ?
ಹಾನಗಲ್(ನ.02): ಸಿಂದಗಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಎಷ್ಟೇ ಪ್ರಯತ್ನಪಟ್ಟರೂ ಹಾನಗಲ್‌ನಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಹಾಗಾದರೆ ಹಾನಗಲ್ ವಿಚಾರದಲ್ಲಿ ಬಿಜೆಪಿ ಎಡವಿದ್ದೆಲ್ಲಿ ? ಸೋಲಿಗೆ ಕಾರಣವಾಗಿದ್ದೇನು ?
ಹಾನಗಲ್ ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಕ್ಷೇತ್ರವಾಗಿದ್ದು, ಇದೇ ಕಾರಣಕ್ಕೆ ಪಕ್ಷದ ಪಾಲಿಗೆ ಪ್ರತಿಷ್ಠೆಯ ಕಣವಾಗಿತ್ತು. ಎಲ್ಲಾ ಸಚಿವರೂ ಹೋಗಿ ಪ್ರಚಾರ ಮಾಡಿದ್ದರು. ಶತಾಯ ಗತಾಯ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಮಾಡಿರುವ ಪ್ರಯತ್ನಗಳೆಲ್ಲವೂ ವಿಫಲವಾಗಿದೆ.
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಲು ಕಾರಣಗಳಿವು:
- ಬೇರೆ ತಾಲೂಕಿನ ಸಜ್ಜನವರ್ ಅವರನ್ನು ಕೊನೆಕ್ಷಣದಲ್ಲಿ ಅಭ್ಯರ್ಥಿಯನ್ನಾಗಿ(Candidate)ಕಣಕ್ಕಿಳಿಸಿದ್ದು.
- ಸಿ.ಎಂ.ಉದಾಸಿ ಕುಟುಂಬ ಸದಸ್ಯರಿಗೆ ಅವಕಾಶ ನೀಡದ ಕಾರಣಕ್ಕೆ ಮುನಿಸಿಕೊಂಡ ಉದಾಸಿ ಬೆಂಬಲಿಗರು.
- ಸಂಸದ ಶಿವಕುಮಾರ್ ಉದಾಸಿ ಪ್ರಚಾರದಲ್ಲಿ ಕಾಣಿಸಿಕೊಂಡರೂ ಅವರ ಬೆಂಬಲಿಗರು ತಟಸ್ಥರಾಗಿ ಉಳಿದಿದ್ದು.
- ಕೊರೊನಾ ಕಾಲದಲ್ಲಿ ಶಾಸಕರಾಗಿದ್ದ ಉದಾಸಿ ಅವರಿಂದ ಯಾವುದೇ ನೆರವು ಸಿಗದಿರುವುದು.
- ಪ್ರಚಾರದ ಕಣದಲ್ಲಿ ಹಿಂದುಳಿದ ನಾಯಕ ಸಿದ್ಧರಾಮಯ್ಯ(Siddaramaiah) ಮೇಲೆ ಬಿಜೆಪಿ(BJP) ನಾಯಕರ ವಾಗ್ದಾಳಿಗೆ ಮುನಿಸು.
- ಪ್ರಮುಖ ಲಿಂಗಾಯತ ಸಮೂದಾಯದ ಮತಗಳು ಸಹ ಬಿಜೆಪಿ ಪರವಾಗಿ ಕ್ರೋಢಿಕರಣ ಆಗದಿರುವುದು.
- ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ಪ್ರಚಾರ ಕಣದಲ್ಲಿ ಅಬ್ಬರಿಸಿದರೂ, ಉಳಿದ ನಾಯಕರಲ್ಲಿ ಕಾರಣ ಉತ್ಸಾಹ.
- ಪಂಚಮಸಾಲಿ ಸಮೂದಾಯಕ್ಕೆ ಮೀಸಲಾತಿ ವಿಚಾರ ಚುನಾವಣಾ ಸಂದರ್ಭದಲ್ಲಿ ಮತ್ತೇ ಸದ್ದು ಮಾಡಿರುವುದು.
- ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಜೆಡಿಎಸ್(JDS) ಅಭ್ಯರ್ಥಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿರುವುದು.
- ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳನ್ನು ಸಮಾಧಾನ ಮಾಡುವಲ್ಲಿ ಬಿಜೆಪಿ ರಾಜ್ಯ ನಾಯಕರು ವಿಫಲವಾಗಿರುವುದು.
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಕಾರಣ:
- ಕಳೆದ ಬಾರಿ ಸೋತಿದ್ದರೂ ಕ್ಷೇತ್ರದಲ್ಲಿದ್ದು ನಿರಂತರ ಸಂಘಟನೆ ಮಾಡಿದ್ದ ಶ್ರೀನಿವಾಸ್ ಮಾನೆ.
- ಕೊರೊನಾ ವೇಳೆಯಲ್ಲಿ ಕ್ಷೇತ್ರದ ಕೆಳವರ್ಗದ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದ ಅಭ್ಯರ್ಥಿ.
- ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಅನುಕಂಪದ ಅಲೆ ಸೃಷ್ಟಿಯಾಗಿರುವುದು.
- ಈ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡು ಕ್ಷೇತ್ರಾದ್ಯಂತ ಪ್ರಚಾರ ಮಾಡಿದ್ದ ಸಿದ್ಧರಾಮಯ್ಯ.
- ಕಾಂಗ್ರೆಸ್ ನ ಬಹುತೇಕ ಎಲ್ಲಾ ಹಂತದ ನಾಯಕರು ವೈಯಕ್ತಿಕವಾಗಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು.
- ಸಾಂಪ್ರದಾಯಿಕ ಅಲ್ಪಸಂಖ್ಯಾತರ ಮತಗಳು ಜೆಡಿಎಸ್ ಗೆ ಹೋಗದಂತೆ ತಡೆಯುವಲ್ಲಿ ಕೈ ಪಾಳಯ ಯಶಸ್ವಿ.
- ಪಂಚಮಸಾಲಿ ಸಮೂದಾಯದ ನಾಯಕರ ಮೂಲಕ ಲಿಂಗಾಯತ ಮತಗಳಿಕೆಗೆ ನಡೆಸಿದ ಯತ್ನ ಸಫಲ.
- ಕ್ಷೇತ್ರದಲ್ಲಿ ಹಿಂದುಳಿದ ಮತಗಳನ್ನು ಕ್ರೋಢಿಕರಣ ಮಾಡುವಲ್ಲಿ ಶ್ರೀನಿವಾಸ ಮಾನೆ ಕೊನೆಯಲ್ಲಿ ಯಶಸ್ವಿ.
- ಮುನಿಸಿಕೊಂಡಿದ್ದ ಮಾಜಿ ಸಚಿವ ಮನೋಹರ್ ತಹಶೀಲ್ದಾರ ಮತ್ತು ಅವರ ಬೆಂಬಲಿಗರ ಮನವೊಲಿಕೆ.
- ಉದಾಸಿ ಕುಟುಂಬದ ಬೆಂಬಲಿಗರು ಟಿಕೆಟ್ ಸಿಗದ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕಡೆ ಒಲವು ವ್ಯಕ್ತಪಡಿಸಿರುವುದು.
ಸಿಂದಗಿ (Sindagi) ಮತ್ತು ಹಾನಗಲ್ ಉಪಚುನಾವಣೆ (Hanagal By Election) ಮತದಾನ ಶನಿವಾರ ನಡೆದಿತ್ತು. ಮತದಾರ ತನ್ನ ನಿರ್ಣಯವನ್ನು ಮತಯಂತ್ರಗಳಲ್ಲಿ ಭದ್ರಪಡಿಸಿದ ನಂತರ ಗೆಲುವಿನ ಕುರಿತ ಕುತೂಹಲ ಹೆಚ್ಚಾಗಿತ್ತು. ಅ.30ರಂದು ನಡೆದ ಉಪಚುನಾವಣೆಯ ಫಲಿತಾಂಶ (By Election Result) ನ.2ರಂದು ಪ್ರಕಟವಾಗಿದೆ.
ಸಿಂದಗಿ (Sindagi) ಉಪ ಚುನಾವಣೆ (By election) ಮತದಾನ ಪ್ರಕ್ರಿಯೆ ಶನಿವಾರ ತಡರಾತ್ರಿ ಪೂರ್ಣಗೊಂಡಿತ್ತು. ಮತಯಂತ್ರಗಳನ್ನು ಬಿಗಿ ಭದ್ರತೆಯೊಂದಿಗೆ ವಿಜಯಪುರ (Vijayapura) ನಗರದಲ್ಲಿರುವ ಸೈನಿಕ ಶಾಲೆಯ ಒಡೆಯರ್ ಹೌಸ್‌ನ ಸ್ಟ್ರಾಂಗ್ ರೂಂನಲ್ಲಿ (Strong Room) ಇಡಲಾಗಿತ್ತು. ಅದೇರೀತಿ ಹಾನಗಲ್ ಕ್ಷೇತ್ರದ ಮತಯಂತ್ರಗಳು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ (Govt Engineering College) ಇರಿಸಲಾಗಿತ್ತು. ಎರಡೂ ಕಡೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿತ್ತು.