Asianet Suvarna News Asianet Suvarna News

ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ಬಿವೈ ರಾಘವೇಂದ್ರ ಭರ್ಜರಿ ಮತ ಪ್ರಚಾರ; ವಿಜಯೇಂದ್ರ ಸಾಥ್

ಇಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜೊತೆಗೂಡಿ ಭರ್ಜರಿ ಮತ ಪ್ರಚಾರ ನಡೆಸಿದರು. ಸಾಲೂರು ಗ್ರಾಮದಲ್ಲಿ  ಹಮ್ಮಿಕೊಂಡಿದ್ದ ಈಸೂರು ಮಹಾ ಶಕ್ತಿಕೇಂದ್ರ ವ್ಯಾಪ್ತಿಯ ಸಾಲೂರು, ಹೊತನಕಟ್ಟೆ, ಮುಡುಬಸಿದ್ಧಾಪುರ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದರು.

Shivamogga Lok sabha election BJP Candidate BY Raghavendra campaining with by vijayendra at shikaripur rav
Author
First Published Apr 9, 2024, 12:02 AM IST

ಶಿಕಾರಿಪುರ (ಏ.9): ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಅಂತಾ ನೋಡದೆ ಮನೆಮನೆಗೂ ಅಕ್ಕಿ ಬೇಳೆ ಹಂಚಿದ್ದೆವು.ಕೊರೊನಾ ವಾರಿಯರ್ಸ್ ಆದ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ  ಕುಂಕುಮ ಕೊಟ್ಟು ಬಾಗಿನ ಜೊತೆಗೆ ಅಕ್ಕಿ ಬೆಳೆಯನ್ನು ಕೊಡಲಾಗಿತ್ತು. ಸಂಕಷ್ಟದ ಕಾಲದಲ್ಲಿ ಇವರೆಲ್ಲರೂ ಬಡವರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬುದು ನಮ್ಮ ಉದ್ದೇಶವಾಗಿತ್ತು ಎಂದು ಬಿಜೆಪಿ ಅಭ್ಯರ್ಥಿ ಸಂಸದ ಬಿ ವೈ ರಾಘವೇಂದ್ರ ನುಡಿದರು.

ಇಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜೊತೆಗೂಡಿ ಭರ್ಜರಿ ಮತ ಪ್ರಚಾರ ನಡೆಸಿದರು. ಸಾಲೂರು ಗ್ರಾಮದಲ್ಲಿ  ಹಮ್ಮಿಕೊಂಡಿದ್ದ ಈಸೂರು ಮಹಾ ಶಕ್ತಿಕೇಂದ್ರ ವ್ಯಾಪ್ತಿಯ ಸಾಲೂರು, ಹೊತನಕಟ್ಟೆ, ಮುಡುಬಸಿದ್ಧಾಪುರ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಸಂಸದರು, ನಾವು ಅಕ್ಕಿ ಬೆಳೆ ಕೊಟ್ಟಿದ್ದನ್ನು ಸಚಿವ ಮಧು ಬಂಗಾರಪ್ಪ ತನಿಖೆ ಮಾಡಿಸುತ್ತೇನೆ ಎಂದಿದ್ದಾರೆ. ನಾವು ತಂದು ಹಂಚಿದ ಅಕ್ಕಿಯನ್ನು ಸೊಸೈಟಿ ಅಕ್ಕಿ ಎಂದು ಅ ಪುಣ್ಯಾತ್ಮ ಭಾಷಣ ಮಾಡುತ್ತಾನಲ್ಲಮ ಅವರಿಗೆ ದೇವರು ಒಳ್ಳೇದು ಮಾಡುತ್ತಾನಾ ತಾವೇ ಯೋಚನೆ ಮಾಡಿ. ಬಾಗಿನಕೊಟ್ಟು ಅಕ್ಕಿ ಬೆಳೆ ಕೊಟ್ಟು ಬಡವರನ್ನು ಪ್ರೀತಿಯಿಂದ ನೋಡಿಕೊಳ್ಳಿ ಎಂದು ಹೇಳಿದ್ದು ತಪ್ಪಾ? ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ಪ್ರಧಾನಿ  ನರೇಂದ್ರ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಶೋಷಿತರ, ಬಡವರ ಅಭ್ಯುದಯಕ್ಕಾಗಿ ಕಾರ್ಯರೂಪಕ್ಕೆ ತಂದಿರುವ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಅಕ್ಕಿ ಕೊಟ್ಟಿದ್ದು ಮೋದಿ, ಸಿದ್ದರಾಮಯ್ಯ ಕೊಟ್ಟಿದ್ದು ತಟ್ಟಿನ ಚೀಲ ಮಾತ್ರ: ಗೋವಿಂದ ಕಾರಜೋಳ ವಾಗ್ದಾಳಿ

ಮುಂದಿನ ಮೂವತ್ತು ದಿನಗಳ ಕಾಲ ಕಾರ್ಯಕರ್ತರು ಕ್ಷೇತ್ರದಾದ್ಯಂತ ಯುದ್ಧೋಪಾದಿಯಲ್ಲಿ ಕೆಲಸ ಮಾಡಿ. ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಂಡಿರುವ ದಿಟ್ಟ ಕ್ರಮಗಳ ಕುರಿತು ಪ್ರತಿ ಮನೆಗೆ ತಲುಪಿಸಿ. ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಈ ಮೂಲಕ ಮೋದಿ ಅವರ ಕೈಯನ್ನು ಬಲಪಡಿಸಲು ಕಾರ್ಯಕರ್ತರಿಗೆ ಕರೆ ನೀಡಿದರು 

Follow Us:
Download App:
  • android
  • ios