ರಾಜ್ಯಾಧ್ಯಕ್ಷ ಆಗೋಕೆ ನಿನಗೇನು ಯೋಗ್ಯತೆ ಇದೆ? ನೀನಿನ್ನು ಬಚ್ಚಾ..; ಕೆ.ಎಸ್. ಈಶ್ವರಪ್ಪ ತಿರುಗೇಟು

ಬಿಜೆಪಿ ರಾಜ್ಯಾಧ್ಯಕ್ಷನಾಗಲು ನಿನಗೇನು ಯೋಗ್ಯತೆಯಿದೆ? ನಿಮ್ಮಪ್ಪನ ಶ್ರಮದಿಂದ ನೀನು ರಾಜ್ಯಾಧ್ಯಕ್ಷ ಆಗಿದ್ದೀಯ. ನನಗೆ ಟೀಕೆ ಮಾಡುವಷ್ಟು ಯೋಗ್ಯತೆ ನಿಮಗಿಲ್ಲ ಎಂದು ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

Shivamogga lok sabha constituency independent Candidate KS Eshwarappa lashes out to Vijayendra sat

ಶಿವಮೊಗ್ಗ (ಏ.16): ಬಿಜೆಪಿ ರಾಜ್ಯಾಧ್ಯಕ್ಷನಾಗಲು ನಿನಗೇನು ಯೋಗ್ಯತೆಯಿದೆ? ನಿಮ್ಮಪ್ಪನ ಶ್ರಮದಿಂದ ನೀನು ರಾಜ್ಯಾಧ್ಯಕ್ಷ ಆಗಿದ್ದೀಯ. ಇದನ್ನು ನೆನಪು ಇಟ್ಟುಕೊಂಡು ಮಾತನಾಡಬೇಕು. 40 ವರ್ಷಗಳ ಕಾಲ ತಪಸ್ಸು ಮಾಡಿದ್ದೇನೆ ಈ ಪಕ್ಷಕ್ಕೋಸ್ಕರ. ನನಗೆ ಟೀಕೆ ಮಾಡುವಷ್ಟು ಯೋಗ್ಯತೆ ನಿಮಗಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಪುಕ್ಸಟ್ಟೆ ಮಾತು ಹಾಗೂ ವಿಜಯೇಂದ್ರನ ಮಾತುಗಳಿಗೆ ನಾನು ಕೂಡ ಬೆಲೆ ಕೊಡುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಆಗುವುದಕ್ಕೆ ನಿನಗೇನು ಯೋಗ್ಯತೆ ಇದೆ ಎಂದು ನಾನು ಕೇಳುತ್ತೇನೆ. ನಾನು 40 ವರ್ಷಗಳ ಕಾಲ ನಾನು ಈ ಪಕ್ಷಕ್ಕಾಗಿ ಶ್ರಮ ಹಾಕಿದ್ದೀನಿ. ನಿಮ್ಮಪ್ಪ ಪಕ್ಷಕ್ಕಾಗಿ ಶ್ರಮ ಹಾಕಿದ್ದಾರೆಂಬ ಹಿನ್ನೆಲೆಯಲ್ಲಿ ನೀನು ರಾಜ್ಯಾಧ್ಯಕ್ಷ ಆಗಿದ್ದೀಯ. ನೀನು ಈ ರೀತಿ ಮಾತನಾಡುವುದಕ್ಕೆ ನಿನಗೆ ಯೋಗ್ಯತೆಯೇ ಇಲ್ಲ. ಶಿವಮೊಗ್ಗ ನಗರಕ್ಕೆ ಮತ್ತು ಜಿಲ್ಲೆಯ ಜನತೆಗೆ ನಾನೇನು ಮಾಡಿದ್ದೇನೆ ಎಂಬುದು ಗೊತ್ತಿದೆ ಎಂದರು.

ನಿನಗೆ ಶಿವಮೊಗ್ಗ ನಗರದ ಜನತೆಯೂ ಕೂಡ ಗೊತ್ತಿಲ್ಲ. ಶಿಕಾರಿಪುರದಲ್ಲಿ 60 ಸಾವಿರ ಇದ್ದ ಲೀಡ್ ಈಗ 10 ಸಾವಿರಕ್ಕೆ ಬಂದು ಇಳಿದಿದೆ. ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ ನಿನ್ನ ಹಣೆಬರಹ. ತಿಣಿಕಿ ತಿಣಿಕಿ 10 ಸಾವಿರ ವೋಟ್ ಲೀಡ್ ಪಡೆದುಕೊಂಡಿದ್ದೀಯ. ಇದಕ್ಕಾಗಿ ನೀನು ಎಷ್ಟು ಕೋಟಿ ಖರ್ಚು ಮಾಡಿದ್ದೀಯ ಎಂದು ಗೊತ್ತಿಲ್ಲ. ಹಂಗಾಗಿ ಹಗುರವಾಗಿ ಮಾತನಾಡಿದರೆ ನಾನು ಬೇರೆ ಭಾಷೆಯಲ್ಲಿ ಮತ್ತೆ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಡ್ತೇನೆ ಎಂದರು.

KS Eshwarappa: ಈಶ್ವರಪ್ಪಗೆ ಖಡಕ್ ಸಂದೇಶ ಕೊಟ್ಟ ಬಿಜೆಪಿ ಹೈಕಮಾಂಡ್! ಮೋದಿ ಹೇಳಿದ್ರೂ ಬಗ್ಗಲ್ಲ ಅಂದಿದ್ಯಾಕೆ ಮಾಜಿ ಸಚಿವ ?

ನೀನಿನ್ನೂ ಬಚ್ಚಾ.. ನಿಮ್ಮಪ್ಪನ ಶ್ರಮದಿಂದ ರಾಜ್ಯಾಧ್ಯಕ್ಷ ಆಗಿದ್ದೀಯ. ಇದನ್ನು ನೆನಪು ಇಟ್ಟುಕೊಂಡು ಮಾತನಾಡಬೇಕು. 40 ವರ್ಷಗಳ ಕಾಲ ತಪಸ್ಸು ಮಾಡಿದ್ದೇನೆ ಈ ಪಕ್ಷಕ್ಕೋಸ್ಕರ. ನನಗೆ ಟೀಕೆ ಮಾಡುವಷ್ಟು ಯೋಗ್ಯತೆ ನಿಮಗಿಲ್ಲ. ರಾಜ್ಯಾಧ್ಯಕ್ಷನಾಗಲು ಅಲ್ಲಿ ಹೋಗಿ 6 ತಿಂಗಳುಗಟ್ಟಲೆ ಕುಳಿತುಕೊಂಡು ಮೇಲಿನವರಿಗೆ ಒತ್ತಡ ಕೊಟ್ಟು ಅಧ್ಯಕ್ಷನಾಗಿಬಿಟ್ಟರೆ ನಿನಗೆ ಬಾಯಿಗೆ ಬಂದಂತೆ ಮಾತನಾಡಲು ಅವಕಾಶ ಕೊಟ್ಟಿದ್ದೇನೆ ಎಂದುಕೊಂಡಿದ್ದೀಯಾ? ಹುಷಾರ್ ಆಗಿರು ಎಂದು ಎಚ್ಚರಿಕೆ ನೀಡಿದರು..

ಶಿಸ್ತು ಕ್ರಮ ಏನು ತೆಗೆದುಕೊಳ್ತೀಯ..? ನಾನು ಬಿಜೆಪಿ ಬಿಟ್ಟು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದೇನೆ ಎಂಬ ಅರ್ಥವೂ ರಾಜ್ಯಾಧ್ಯಕ್ಷನಿಗೆ ಗೊತ್ತಿಲ್ಲ. ನಾನು ಪಕ್ಷದಿಂದಲೇ ಹೊರಗೆ ಬಂದು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಬಿಜಪಿ ಪಕ್ಷದಲ್ಲಿಯೇ ಇಲ್ಲವೆಂದಾಗ ನೀನೇನು ಕ್ರಮ ತಗೋತಿಯೋ ತಗೋ.. ಇಂತಃ ಗೊಡ್ಡು ಬೆದರಿಕೆಗೆ ನಾನು ಹೆದರಲ್ಲ. ನನ್ನ ಉದ್ದೇಶ ಏನಿದೆ ಎಂದರೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗುವುದು ನನ್ನ ಉದ್ದೇಶವಾಗಿದೆ. ಅಲ್ಲಿ ಕೇಂದ್ರದಲ್ಲಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಕುಟುಂಬ ರಾಜಕಾರಣವೇನಿದೆ ಅದನ್ನು ವಿರೋಧಿಸುತ್ತೇನೆ ಎಂದು ನರೇಂದ್ರ ಮೋದಿ ಅವರು ಹೇಳುತ್ತಿದ್ದಾರೆ. ಆದರೆ, ಇಲ್ಲಿ ಅಪ್ಪ-ಮಕ್ಕಳು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆ.ಎಸ್‌.ಈಶ್ವರಪ್ಪ ಟೀಕೆಗೆ ಮತಗಳಿಂದ ಉತ್ತರಿಸಿ: ಜನತೆಗೆ ರಾಘವೇಂದ್ರ ಕರೆ

ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ನಾನು ಬಂದಿದ್ದೇನೆ. ಇಲ್ಲಿ ಎಲ್ಲ ವಕೀಲರ ಬಳಿಯೂ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ನೀವು ಬೆಂಬಲ ಕೊಡಬೇಕು ಎಂದು ಮನವಿ ಮಾಡಿದ್ದೇನೆ. ಎಲ್ಲ ವಕೀಲರು ಕೂಡ ನೀವು ಸ್ಪರ್ಧೆ ಮಾಡದ ಉದ್ದೇಶ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ನಿಮಗೆ ಬೆಂಬಲ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದೇ ರೀತಿ ಡಾಕ್ಟರ್, ಇಂಜಿನಿಯರ್‌ಗಳನ್ನೂ ಮನವಿ ಮಾಡುತ್ತೇನೆ. ಈಗಾಗಲೇ ಜಿಲ್ಲೆಯ ರೈತರು, ರ್ಸಾಜನಿಕರು, ನಾರಿ ಶಕ್ತಿ, ಯುವಶಕ್ತಿ ಎಲ್ಲರೂ ನನ್ನ ಜೊತೆಗೆ ಇದ್ದಾರೆ ಎಂದು ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.

Latest Videos
Follow Us:
Download App:
  • android
  • ios