ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮಗೆ ಅಪಮಾನವಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದ್ರೆ, ದಾಖಲೆಗಳು ಹೇಳುತ್ತಿಲ್ಲ. ಬಿಜೆಪಿಯವರದು ಮಹಿಳೆಯರನ್ನು ಗೌರವಿಸುವ ಸಂಸ್ಕೃತಿ. ಸಿ.ಟಿ. ರವಿ ಅವರು ಹೇಳಿದ್ದಾರೆ ಎನ್ನುವ ಮಾತುಗಳು ನಮ್ಮ ಕಿವಿಗೂ ಬಿದ್ದಿಲ್ಲ, ಎಲ್ಲಿಯೂ ರೆಕಾರ್ಡ್ ಆಗಿಲ್ಲ ಎಂದು ಶಾಸಕ ಚನ್ನಬಸಪ್ಪ
ಶಿವಮೊಗ್ಗ/ಕಲಬುರಗಿ(ಡಿ.20): ಪ್ರಖರ ಹಿಂದುತ್ವವಾದಿ ಸಿ.ಟಿ. ರವಿ ಅವರು ಕರೆ ಕೊಟ್ಟರೆ ಅದನ್ನು ತಡೆಯುವ ತಾಕತ್ತು ನಿಮಗಿಲ್ಲ . ಸದ್ದಾಮ್ ಎಂಬಾತ ಸಿ.ಟಿ.ರವಿ ಅವರಿಗೆ ಹೊಡೆಯುವ ತಾಕತ್ತು ಬೆಳೆಸಿಕೊಂಡಿದ್ದಾನೆ ಎಂದರೆ ಯಾರದು ಕುಮ್ಮಕ್ಕು ಇದೆ. ಸದ್ದಾಮ್ ನಂತಹ ಪಿಎಯನ್ನು ಯಾಕೆ ನೇಮಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಚನ್ನಬಸಪ್ಪ ಕಿಡಿ ಕಾರಿದ್ದಾರೆ.
ಇಂದು(ಶುಕ್ರವಾರ) ನಗರದ ಡಿಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಚನ್ನಬಸಪ್ಪ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮಗೆ ಅಪಮಾನವಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದ್ರೆ, ದಾಖಲೆಗಳು ಹೇಳುತ್ತಿಲ್ಲ. ಬಿಜೆಪಿಯವರದು ಮಹಿಳೆಯರನ್ನು ಗೌರವಿಸುವ ಸಂಸ್ಕೃತಿ. ಸಿ.ಟಿ. ರವಿ ಅವರು ಹೇಳಿದ್ದಾರೆ ಎನ್ನುವ ಮಾತುಗಳು ನಮ್ಮ ಕಿವಿಗೂ ಬಿದ್ದಿಲ್ಲ, ಎಲ್ಲಿಯೂ ರೆಕಾರ್ಡ್ ಆಗಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯಿಂದ ಹೋಗಿದ್ದೆಲ್ಲಿ, ಎಲ್ಲಿದ್ದಾರೆ ಸಿಟಿ ರವಿ: ಬಿಜೆಪಿ ನಾಯಕನಿಗೆ ಜೀವ ಭಯ?
ಸಿಎಂ ಸಿದ್ದರಾಮಯ್ಯ ಹೇಳಿದಂತೆ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಹೇಳಿಕೆ ನೀಡಿದ್ದಾರೆ. ಓತಿಕ್ಯಾತಕ್ಕೆ ಬೇಲಿಗೂಟ ಸಾಕ್ಷಿ ಎಂಬಂತೆ ಎಲ್ಲರೂ ಹೇಳುತ್ತಿದ್ದಾರೆ. ದತ್ತ ಪೀಠದ ಹೋರಾಟ ನಡೆಸುತ್ತಿರುವ ಸಿ.ಟಿ. ರವಿಯವರನ್ನು ಅಂದಿನಿಂದಲೂ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಸುಳ್ಳು ಹೇಳುವ ಮೂಲಕ ಸಿ.ಟಿ.ರವಿ ಅವರನ್ನು ಬಗ್ಗು ಬಡಿವ ಕೆಲಸಕ್ಕೆ ಬಿಜೆಪಿ ಯಾವತ್ತು ಬಗ್ಗಲ್ಲ ಎಂದು ತಿಳಿಸಿದ್ದಾರೆ.
ಸಿ.ಟಿ. ರವಿಯವರನ್ನು ಕಾಪಾಡಲು ದತ್ತಾತ್ರೇಯ ಇದ್ದಾನೆ ಅವರ ಹೋರಾಟದ ಬೆಂಬಲ ಅವರಿಗಿದೆ. ಒಂದೆಡೆ ದೇಶಭಕ್ತ ಅಮಿತ್ ಶಾರನ್ನು ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ದೇಶಭಕ್ತ ಸಿ.ಟಿ. ರವಿ ಅವರನ್ನು ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಬಿಎನ್‌ಎಸ್ ಸೆಕ್ಷನ್ 75 ಮತ್ತು 79 ಹಾಕಿದ್ದಾರೆ. ಸಿ.ಟಿ. ರವಿ ಅವರಿಗೆ ಯಾವುದೇ ನೋಟಿಸ್ ನೀಡದೆ ವಿಚಾರಣೆ ನಡೆಸದೆ ಬಂಧಿಸಿದ್ದಾರೆ ಎಂದು ಸರ್ಕಾರದ ನಡೆಯನ್ನ ಖಂಡಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದಾರೆ ಎಂದು ನಾವೆಲ್ಲ ಹೇಳಿದರೆ ಸಿಎಂ, ಡಿಸಿಎಂ, ಗೃಹ ಮಂತ್ರಿ ಕೂಗಿಲ್ಲ ಎಂದಿದ್ದರು. ಸಿ.ಟಿ. ರವಿ ಹಾಗೆ ನಡೆದುಕೊಂಡಿಲ್ಲ ಎಂದರೆ ಹಾಗೆ ನಡೆದುಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ ಎರಡು ಕೂಡ ವಿಪರ್ಯಾಸದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಒಬ್ಬ ಹೆಣ್ಣುಮಗಳನ್ನು ಕಾಂಗ್ರೆಸ್ ಮುಂದಿಟ್ಟುಕೊಂಡು ಅಪಮಾನ ಮಾಡುತ್ತಿದೆ. ಗೂಂಡಾಗಳು ಸುವರ್ಣಸೌಧ ಒಳಗಡೆ ಪ್ರವೇಶಿಸಿದ್ದಾರೆ. ರಕ್ಷಣಾ ವ್ಯವಸ್ಥೆ ವೈಫಲ್ಯ ಆಗಿದೆ. ನಿಮ್ಮ ಮಾನಸಿಕತೆ ಬದಲಾಗದೆ ಹೋದರೆ ಈ ದೇಶದ ಮತ್ತು ರಾಜ್ಯದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ನಿನ್ನೆ ಪೊಲೀಸರು ನಡೆದುಕೊಂಡ ರೀತಿ ಯಾವುದೇ ಕಾರಣಕ್ಕೂ ಸರಿಯಲ್ಲ. ಸಿ.ಟಿರವಿ ಸಚಿವರಾಗಿದ್ದಾಗ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕರಾಗಿದ್ದರು. ಆಗ ಅವರೇನಾದರೂ ಅಪಮಾನ ಮಾಡಿದ್ದಾರಾ?. ಸಿ.ಟಿ. ರವಿ ಅವರ ಅಕ್ರಮ ಬಂಧನವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಸಿ.ಟಿ. ರವಿ ಬಂಧನ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ
ಸಿ.ಟಿ. ರವಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಂದು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಆಕ್ರೋಶವನ್ನ ಹೊರಹಾಕಿದ್ದಾರೆ.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಲ್‌ನಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಟೇಲ್ ಸರ್ಕಲ್‌ನಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಬ್ಬಾಳ್ಕರ್ ಸುದ್ದಿಗೋಷ್ಠಿ: ಸಿಟಿ ರವಿ ಆ ಪದ ಬಳಕೆಯಿಂದ ನನಗೆ ನೋವಾಗಿದೆ, ಮಾಧ್ಯಮಗಳ ಮುಂದೆ ಸಚಿವೆ ಕಣ್ಣೀರು!
ನಿನ್ನೆ ಬೆಳಗಾವಿ ವಿಧಾನಸಭೆಯೊಳಗೆ ನುಗ್ಗಿ ಸಿ.ಟಿ. ರವಿ ಮೇಲೆ ಹಲ್ಲೆ ಮಾಡಲಾಗಿದೆ. ಅವರ ಮೇಲೆ ಹಲ್ಲೆ ನಡೆಸುವ ಮೂಲಕ ಸ್ವತಃ ಸರಕಾರವೇ ಗುಂಡಾಗಿರಿ ಮಾಡುತ್ತಿದೆ ಎಂದು ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿ.ಟಿ. ರವಿ ಅವರ ಬಂಧನ ಖಂಡಿಸಿದ ಬಿಜೆಪಿ ಕಾರ್ಯಕರ್ತರು ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
