ಲೋಕಸಭೆ ಚುನಾವಣೆ: ಪ್ರಲ್ಹಾದ್ ಜೋಶಿಗೆ ಟಕ್ಕರ್ ಕೊಡಲು ಸಜ್ಜಾಗುತ್ತಿದ್ದಾರಾ ವಿನಯ ಕುಲಕರ್ಣಿ ಪತ್ನಿ
ಮುಂಬರುವ 2024 ರ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರು ತೆರೆಮೆರೆ ಹಿಂದೆ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಆ.26): ಮುಂಬರುವ 2024 ರ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರು ತೆರೆಮೆರೆ ಹಿಂದೆ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ತನ್ನ ಪತಿ ವಿನಯ ಕುಲಕರ್ಣಿ ಕ್ಷೆತ್ರಕ್ಕೆ ಬಾರದ ಹಿನ್ನಲೆ ಕಳೆದ ವಿಧಾನಸಭಾ ಚುಣಾವಣೆಯಲ್ಲಿ ಕ್ಷೆತ್ರದಾದ್ಯಂತ ಪ್ರಚಾರ ಮಾಡಿ ತನ್ನ ಪತಿ ವಿನಯ ಕುಲಕರ್ಣಿ ಅವರನ್ನ 18,000 ಮತಗಳ ಅಂತರದಿಂದ ಗೆಲ್ಲುವಂತೆ ಶ್ರಮ ವಹಿಸಿದ್ದಾಳೆ. ಮಹಿಳೆಯಾಗಿ ಪ್ರತಿ ಗ್ರಾಮಕ್ಕೂ ಹೋಗಿ ಪ್ರಚಾರ ಮಾಡಿ ಶಿವಲೀಲಾ ಕುಲಕರ್ಣಿ ಅವರು ಕ್ಷೇತ್ರದಾದ್ಯಂತ ಸದ್ಯ ಇಡಿ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರವನ್ನು ಮಾಡಿ ಸದ್ಯ ಕ್ಷೆತ್ರದಲ್ಲಿ ತಮ್ಮದೆ ಚಾಪು ಮೂಡಿಸಿದ್ದಾರೆ.
ಈ ಹಿಂದೆ ಶಾಸಕ ವಿನಯ ಕುಲಕರ್ಣಿ ಅವರು ಎರಡು ಭಾರಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ದ ನಿಂತು ಸೋತಿದ್ದಾರೆ. ಸದ್ಯ ವಿನಯ ಕುಲಕರ್ಣಿ ಅವರು ಗ್ರಾಮೀಣ ಶಾಸಕರಾಗಿ ಆಯ್ಕೆಯಾಗದಿದ್ದಾರೆ. ಇನ್ನು ಈ ಭಾರಿ ಪ್ರಹ್ಲಾದ ಜೋಶಿ ವಿರುದ್ದ ಪ್ರಮುಖ ಲಿಂಗಾಯತ ಸಮುದಾಯದ ನಾಯಕರನ್ನಮನೆ ಹಾಕುತ್ತಿದೆ ಕಾಂಗ್ರೆಸ್ ಪಕ್ಷ. ಸದ್ಯ ಜಗದೀಶ್ ಶೆಟ್ಟರ, ಮತ್ತು ಶಿವಲೀಲಾ, ಬಿಟ್ರೆ ಬಿಜೆಪಿ ಶಂಕರ ಪಾಟೀಲ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕ್ಕೊಂಡು ಜೋಶಿ ವಿರುದ್ದ ಕಣಕ್ಕೆ ಇಳಿಸಲು ಕಾಂಗ್ರೆಸ್ ತೆರೆಮೆರೆ ಹಿಂದೆ ಕಸರತ್ತು ನಡೆಸಿದೆ. ಸದ್ಯ 8 ವಿಧಾನಸಭಾ ಕ್ಷೆತ್ರಗಳನ್ನ ಹೊಂದಿರುವ ಧಾರವಾಡ ಲೋಕಸಭಾ ಕ್ಷೆತ್ರ ಸದ್ಯ ಉತ್ತರ ಕರ್ನಾಟಕದಲ್ಲಿ ಜಿದ್ದಾಜಿದ್ದಿನ ಕಣವಾಗಿ ಪರಿಣಮಿಸಿದೆ.
ಮಂಗಳೂರು: ಮುಸ್ಲಿಂ ವಿದ್ಯಾರ್ಥಿ ಮೇಲೆ ನೈತಿಕ ಪೊಲೀಸ್ ಗಿರಿ: ಎಸ್ಡಿಪಿಐ ಮುಖಂಡನ ಪುತ್ರ ಭಾಗಿ?
ಸದ್ಯ 1996 ರಿಂದ ಇಲ್ಲಿಯವರಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಯ್ಕೆ ಆಗುತ್ತಲೆ ಬಂದಿದ್ದಾರೆ. ಸದ್ಯ 8 ವಿಧಾನಸಭಾ ವಿಧಾನಸಭಾ ಕ್ಷೆತ್ರದಲ್ಲಿ ಶಿವಲೀಲಾ ಕುಲಕರ್ಣಿ ಅವರು ಎಲ್ಲ ಕ್ಷೇತ್ರದ ಪ್ರಮುಖ ಮುಖಂಡರ ಜೊತೆ ಒಳ್ಳೆಯ ಭಾಂದವ್ಯವನ್ನ ಹೊಂದಿದ್ದು ಸದ್ಯ ಪ್ರಚಾರವನ್ನ ಮಾಡುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಪೂರ್ವ, ಹುಬ್ಬಳ್ಳಿ ಧಾರವಾಡ ಪಶ್ಚಿಮ, ಹುಬ್ಬಳ್ಳಿ ಧಾರವಾಡ ಕೇಂದ್ರ, ಕಲಘಟಗಿ,ನವಲಗುಂದ ,ಕುಂದಗೋಳ, ಹಾವೇರಿ ಜಿಲ್ಲೆಯ ಸಿಗ್ಗಾಂವಿ, ಜೊತೆಗೆ ಧಾರವಾಡ ಗ್ರಾಮೀಣ ಕ್ಷೆತ್ರದಲ್ಲಿ ಸದ್ಯ ವಿನಯ ಕುಲಕರ್ಣಿ ವರ್ಚಸ್ಸಿದೆ. ಇನ್ನು ಈ ಕುರಿತು ಎಲ್ಲ ಮುಖಂಡರು ಕೂಡಾ ಅಗಷ್ಡು 28,29 ರಂದು ಸಭೆಯನ್ನ ಕರೆದಿದ್ದಾರೆ.
ಆಪರೇಷನ್ ಹಸ್ತ ಯಶಸ್ವಿಯಾಗುವುದಿಲ್ಲ: ಮಾಜಿ ಸಿಎಂ ಬೊಮ್ಮಾಯಿ
ವಿನಯ ಕುಲಕರ್ಣಿ ಗೆಲುವಿನ ಶಕ್ತಿ...ಅಂದರೆ ಶಿವಲೀಲಾ ಕುಲಕರ್ಣಿ ಇನ್ನು ಕಳೆದ 2023 ರ ವಿಧಾನಸಭಾ ಚುಣಾವಣೆಯಲ್ಲಿ ಧಾರವಾಡ ಗ್ರಾಮೀಣ ಕ್ಷೆತ್ರದಲ್ಲಿ ಸದ್ಯ ವಿನಯ ಕುಲಕರ್ಣಿ ಪರವಾಗಿ ಶಿವಲೀಲಾ ಕುಲಕರ್ಣಿ ಅವರು ಪ್ರಚಾರ ಮಾಡಿ ತಮ್ಮಪತಿಯನ್ನ ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ದಾರೆ..ಇನ್ನು ವಿನಯ ಕುಲಕರ್ಣಿ ಯೋಗೀಶ್ ಗೌಡ ಕೊಲೆ ಕೇಸನಲ್ಲಿ ಧಾರವಾಡಕ್ಕೆ ಎಂಟ್ರಿ ಇಲ್ಲದ ಕಾರಣ ಸದ್ಯ ಕ್ಷೆತ್ರದಲ್ಲಿ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಕ್ಷೆತ್ರದಲ್ಲಿ ಹಿಡಿತವನ್ನ ಸಾಧಿಸಿ ಸುಮಾರು 18,000 ಸಾವಿರ ಮತಗಳ ಅಂತರದಿಂದ ಪತಿಯ ಗೆಲುವಿಗಾಗಿ ಶ್ರಮ ವಹಿಸಿದ್ದಾರೆ.