ಬೆಂಗಳೂರು, (ಫೆ.06): ಅಳೆದು ತೂಗಿ, ವಿಮರ್ಶಿಸಿ, ಮರು ವಿಮರ್ಶಿಸಿ, ಯೋಚಿಸಿ, ಚಿಂತಿಸಿ ಕೊನೆಗೂ 10 ನೂತನ ಜನರಿಗೆ ಯಡಿಯೂರಪ್ಪ ತಮ್ಮ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿದ್ದಾಯ್ತು. 10 ಜನರು ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾಯ್ತು. ಇದೀಗ ಅವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಬಿಎಸ್‌ವೈಗೆ ದೊಡ್ಡ ಸವಾಲಾಗಿದೆ.

ಜಲಸಂಪನ್ಮೂಲ, ಸಮಾಜ ಕಲ್ಯಾಣ, ಲೋಕೊಪಯೋಗಿ ಸೇರಿದಂತೆ ದೊಡ್ಡ-ದೊಡ್ಡ ಖಾತೆಗಳಿಗೆ ಪಟ್ಟು ಹಿಡಿದಿದ್ದಾರೆ. ಇದರಿಂದ ಯಡಿಯೂರಪ್ಪ ಅವರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಅದರಲ್ಲೂ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಪಟ್ಟಿಗೆ ಯಡಿಯೂರಪ್ಪ ಕಂಗಾಲಾಗಿದ್ದಾರೆ.

ಕನಕಪುರ ಬಂಡೆ ವಿರುದ್ಧ ಸಿಡಿದೆದ್ದ ಸಾಹುಕಾರ್; ಡಿಕೆಶಿ ಮಾತ್ರ ಸೈಲೆಂಟ್! 

ವೈಯಕ್ತಿಕ ಬೇಳೆಬೆಯಿಸಿಕೊಳ್ಳಲು ಮುಂದಾದ ಸಾಹುಕಾರ
ಹೌದು...ಕಾಂಗ್ರೆಸ್‌ನಲ್ಲಿದ್ದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಗುದ್ದಾಟ ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. 

ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಡಿಕೆಶಿ ಇದ್ದ ಮಂತ್ರಿ (ಜಲಸಂಪನ್ಮೂಲ) ಹುದ್ದೆ, ಬಂಗಲೆ, ಕಚೇರಿಯನ್ನು ತಮಗೆ ನೀಡುವಂತೆ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ ಎನ್ನುವ ಮಾಹಿತಿಗಳು ಬಿಜೆಪಿ ಮೂಲದಿಂದ ತಿಳಿದುಬಂದಿದೆ.

ಮಂತ್ರಿಗಿರಿ ಕೊಟ್ರು ರಮೇಶ್ ಜಾರಕಿಹೊಳಿ ಹೊಸ ಕ್ಯಾತೆ: ಯಡಿಯೂರಪ್ಪ ತಬ್ಬಿಬ್ಬು

ಡಿಕೆಶಿ ಮೇಲಿನ ಹಳೆ ಸೇಡು, ಜಿದ್ದು ಮತ್ತು ಪ್ರತಿಷ್ಠೆಗಾಗಿ ತಮ್ಮ ವೈಯಕ್ತಿಕ ಬೇಳೆಬೆಯಿಸಿಕೊಳ್ಳಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ. ಇದು ಬಿಜೆಪಿ ನಾಯಕರಿಗೆ ನಾಯಕರಿಗೆ ತಲೆನೋವು ತಂದಿದೆ.

ಸಾಹುಕಾರನ ಆಟಕ್ಕೆ ಹೈಕಮಾಂಡ್ ಬ್ರೇಕ್
ರಮೇಶ್ ಜಾರಕಿಹೊಳಿ ಅವರು ಜಲಸಂಪನ್ಮೂಲ ಖಾತೆಗೆ ಪಟ್ಟು ಹಿಡಿದಿದ್ದಾರೆ ಎನ್ನುವ ವಿಷಯವನ್ನು ಬಿಎಸ್‌ವೈ ಹೈಕಮಾಂಡ್ ಗಮನಕ್ಕೆ ತಂದಿದ್ದು, ಇದಕ್ಕೆ ಹೈಕಮಾಂಡ್ ದೆಹಲಿಯಿಂದಲೇ ಭರ್ಚಿ ಎಸೆದಿದ್ದು, ಬೆಳಗಾವಿ ಕನಸಿನ ಖಾತೆ ನುಚ್ಚು ನೂರಾಗಿದೆ.

ಈ ಚೆಂದಕ್ಕೆ ನಿಮ್ಗೆ ಮಿನಿಸ್ಟರ್ ಗಿರಿ ಬೇಕಾ ಜಾರಕಿಹೊಳಿ ಸಾಹೇಬ್ರೇ..?

ಜಲಸಂಪನ್ಮೂಲ ಖಾತೆ ಮಹತ್ವದಾಗಿದ್ದು, ಹಿಂದಿ, ಇಂಗ್ಲೀಷ್ ಭಾಷೆ ಅತ್ಯಗತ್ಯ. ರಾಜ್ಯ-ರಾಜ್ಯಗಳ ನಡುವೆ ವಿವಾದಗಳು ಇವೆ. ಈ ಹಿನ್ನೆಲೆಯಲ್ಲಿ ಇದನ್ನು ನಿಬಾಯಿಸಲು ಕಾನೂನು ಅರಿವು ಬಹಳ ಮುಖ್ಯ.  ಆದ್ದರಿಂದ ಜಲಸಂನ್ಮೂಲ ಖಾತೆಯನ್ನು ಯಾರಿಗೂ ಕೊಡದಂತೆ ಯಡಿಯೂರಪ್ಪಗೆ ಹೈಕಮಾಂಡ್ ಸೂಚಿಸಿದೆ.

ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ, ಸಂಪುಟ ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿಸಿದ್ದವರು.  ಅಷ್ಟೇ ಅಲ್ಲೇ ಅವರಿಗೆ ಕಾನೂನಿನ ಅರಿವು ಕೂಡ ಇಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಜಲಸಂಪನ್ಮೂಲ ಖಾತೆಯನ್ನು ಅವರಿಗೆ ನೀಡದೇ ನೀವೇ ನಿಮ್ಮಲ್ಲಿಯೇ ಇಟ್ಟುಕೊಳ್ಳಿ ಎಂದು ಹೈಕಾಂಡ್ ಬಿಎಸ್‌ವೈಗೆ ಹೇಳಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ