Asianet Suvarna News Asianet Suvarna News

ಗೆಲ್ಲುವ ಮಾನದಂಡ ಆಧರಿಸಿ ಅಭ್ಯರ್ಥಿಗಳ ಆಯ್ಕೆ: ಬಿ.ಎಸ್‌.ಯಡಿಯೂರಪ್ಪ

ಗೆಲ್ಲುವ ಮಾನದಂಡ ಆಧರಿಸಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಪಕ್ಷದ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 

Selection of candidates based on winning criteria Says BS Yediyurappa gvd
Author
First Published Apr 8, 2023, 1:21 PM IST

ಬೆಂಗಳೂರು (ಏ.08): ಗೆಲ್ಲುವ ಮಾನದಂಡ ಆಧರಿಸಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಪಕ್ಷದ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ದೆಹಲಿಗೆ ತೆರಳುವ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಲುವಾಗಿ ಮೂರು ದಿನಗಳು ದೆಹಲಿಯಲ್ಲೇ ಇರುತ್ತೇನೆ ಎಂದರು. ಕೇಂದ್ರ ಚುನಾವಣಾ ಸಮಿತಿಗೆ ಪ್ರತಿ ಕ್ಷೇತ್ರದಿಂದ ಮೂರ್ನಾಲ್ಕು ಹೆಸರುಗಳನ್ನು ಶಿಫಾರಸು ಮಾಡಿದ್ದೇವೆ. 

ದೆಹಲಿಯಲ್ಲಿ ಶನಿವಾರದಿಂದ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಗೆಲ್ಲುವ ಕ್ಷೇತ್ರಗಳಿಗೆ ಮೂರ್ನಾಲ್ಕು ಹೆಸರುಗಳಿವೆ. ಆದರೆ ರಾಜ್ಯದಿಂದ ಮೂರು ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿದ್ದೇವೆ. ಗೆಲ್ಲುವ ಆಧಾರದ ಮೇರೆಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಬಿಜೆಪಿಗೆ ಸುದೀಪ್‌ ಬೆಂಬಲ ಸ್ವಾಗತಾರ್ಹ: ಬಿ.ಎಸ್‌.ಯಡಿಯೂರಪ್ಪ

ಒಳಮೀಸಲಾತಿ ಐತಿಹಾಸಿಕ ತೀರ್ಮಾನ: ಒಳಮೀಸಲಾತಿ ಜತೆ ಮೀಸಲಾತಿ ಪ್ರಮಾಣ ಹೆಚ್ಚಳ ಐತಿಹಾಸಿಕ ತೀರ್ಮಾನ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಸರ್ಕಾರದ ನಡೆಯನ್ನು ಶ್ಲಾಘಿಸಿದರು. ಇಲ್ಲಿನ ನೆಹರು ಮೈದಾನದಲ್ಲಿ ಪರಿಶಿಷ್ಟಸಮುದಾಯಗಳ ಒಕ್ಕೂಟದಿಂದ ಆಯೋಜಿಸಿದ್ದ ಬಿಜೆಪಿ ಸರ್ಕಾರಕ್ಕಾಗಿನ ಅಭಿನಂದನಾ ಸಮಾರಂಭದಲ್ಲಿ ಗುರುವಾರ ಮಾತನಾಡಿ, ಯಾವ ರಾಜ್ಯದಲ್ಲೂ ಇಂಥದ್ದೊಂದು ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಆದರೆ ಕಾಂಗ್ರೆಸ್‌ನವರು ಉದ್ದೇಶಪೂರ್ವಕವಾಗಿಯೇ ದಾರಿ ತಪ್ಪಿಸುತ್ತಿದ್ದಾರೆ. 

ಈ ಬಗ್ಗೆ ದಲಿತ ಸಮುದಾಯದವರು ಎಚ್ಚರಿಕೆಯಿಂದಿರಬೇಕು. ಬಿಜೆಪಿಯನ್ನು ಅಧಿಕಾರಕ್ಕೆ ತರುವುದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಈ ಸಲ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಭರವಸೆ ನೀಡಿದರು. ನಾವು ಯಾವುದೇ ಸಮುದಾಯದ ಮೀಸಲಾತಿ ಹಿಂಪಡೆಯುವುದಿಲ್ಲ. ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಬಂಜಾರ, ಕೊರಮ, ಕೊರಚ, ಬೋವಿ ಸಮಾಜದವರ ಮೀಸಲಾತಿ ಹಿಂಪಡೆಯಲಾಗುತ್ತಿದೆ ಎಂದು ಜನರ ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ. ಅಂಥವುಗಳಿಗೆ ಸಮುದಾಯದವರು ಕಿವಿಗೊಡಬಾರದು ಎಂದರು.

ದಲಿತರನ್ನು ಕಾಂಗ್ರೆಸ್‌ ಬರೀ ವೋಟ್‌ ಬ್ಯಾಂಕನ್ನಾಗಿ ಮಾತ್ರ ಬಳಸಿಕೊಳ್ಳುತ್ತಿದೆ. ಆದರೆ ಬಿಜೆಪಿ ಹಾಗಲ್ಲ. ಹೇಳಿದ್ದನ್ನು ಮಾಡಿತೋರಿಸುತ್ತದೆ. ದಲಿತರಿಗೆ ಅನ್ಯಾಯ, ದ್ರೋಹ ಮಾಡಿದ ಯಾವುದಾದರೂ ಪಕ್ಷ ಇದ್ದರೆ ಅಂದರೆ ಅದು ಕಾಂಗ್ರೆಸ್‌ ಮಾತ್ರ. ಅಂಬೇಡ್ಕರ್‌ಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್‌ ಎಂದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರು ಮಾತನಾಡಿ, ದೇಶದಲ್ಲಿ ದಲಿತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್‌ ಪಕ್ಷ. ಅಂಬೇಡ್ಕರ್‌ ಅವರಿಗೆ ಸಂಸತ್ತಿಗೆ ಬಾರದಂತೆ ತಡೆಹಿಡಿಯಿತು. ಅಂತಹ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು. 

ಮುಸ್ಲಿ​ಮ​ರಿಗೆ ಸೌಲಭ್ಯ ನೀಡಿ​ಲ್ಲ​ವೆಂದರೆ ರಾಜ​ಕೀಯ ನಿವೃ​ತ್ತಿ: ಬಿ.ಎಸ್‌.ಯಡಿಯೂರಪ್ಪ

ಕಾಂಗ್ರೆಸ್‌ ಸುಡುವ ಮನೆ. ಅಲ್ಲಿಗೆ ದಲಿತರು ಹೋಗಬೇಡಿ ಎಂದು ಅಂಬೇಡ್ಕರ್‌ ಹೇಳಿದ್ದರು. ಬಾಬು ಜಗಜೀವನರಾಮ್‌ ಅವರಿಗೆ ಮೋಸ ಮಾಡಿದ್ದು ಕಾಂಗ್ರೆಸ್‌ ಎಂದ ಅವರು, ಕರ್ನಾಟಕದಲ್ಲೂ ಜಿ.ಪರಮೇಶ್ವರ್‌, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಮುಳುಗಿಸಿದ್ದು ಕಾಂಗ್ರೆಸ್‌. ನಾವು ಮೀಸಲಾತಿ ತಂದರೆ, ಅವರು ಮೀಸಲಾತಿ ತೆಗೆಯುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಮೀಸಲಾತಿ ಕೊಡುವವರು ಬೇಕೋ? ಮೀಸಲಾತಿ ತೆಗೆಯುವವರು ಬೇಕೋ ಎಂದು ನೀವೇ ನಿರ್ಧರಿಸಿ ಎಂದು ಇದೇ ವೇಳೆ ಸಭಿಕರನ್ನು ಪ್ರಶ್ನಿಸಿದರು.

Follow Us:
Download App:
  • android
  • ios