ಮಾನ್ವಿ: ಕಾಂಗ್ರೆಸ್ ಟಿಕೆಟ್ ಘೋಷಣೆಗೆ ಮುನ್ನವೇ ಅಸಮಾಧಾನ ಸ್ಫೋಟ: ಬಿವಿ ನಾಯಕ ವಿರುದ್ಧ ತಿರುಗಿಬಿದ್ದ ಸ್ಥಳೀಯರು!
ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಅಕಾಂಕ್ಷಿಯಾಗಿರುವ ಮಾಜಿ ಸಂಸದ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಿ.ವಿ. ನಾಯಕ ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಬಂದರೆ ಸೋಲು ಖಚಿತ ಎಂದು ಕಾರ್ಯಕರ್ತರು ಧಿಕ್ಕಾರ ಕೂಗಿದ ಪ್ರಸಂಗ ಶುಕ್ರವಾರ ಸಂಜೆ ನಡೆಯಿತು.
ಸಿರವಾರ (ಏ.9): ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಪಕ್ಷದ ಗೆಲುವಿಗೆ ಹೈಕಮಾಂಡ್ ಸಹಕರಿಸಬೇಕು ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಜಿ. ಹಂಪಯ್ಯ ನಾಯಕ ಹೇಳಿದರುಸಮೀಪದ ಜಾಲಾಪೂರು ಕ್ಯಾಂಪಿನಲ್ಲಿ ನಡೆದ ಶನಿವಾರ ನಡೆದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದರು. ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ನಾವೂ ಅನೇಕ ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಾ ಬಂದಿದ್ದೇವೆ. ಪಕ್ಷದ ಜಿಲ್ಲಾಧ್ಯಕ್ಷರಾದ ಬಿ.ವಿ. ನಾಯಕ ಅವರು ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿದು ಬಂದಿದ್ದು, ಅವರು ಇಲ್ಲಿ ಸ್ಪರ್ಧಿಸುವುದರಿಂದ ಸ್ಥಳೀಯರಿಗೆ ಆದ್ಯತೆ ಇಲ್ಲದಂತಾಗುತ್ತದೆ. ಜೊತೆಗೆ ಪಕ್ಷದ ಸೋಲಿಗೂ ಕಾರಣವಾಗುತ್ತದೆ. ಇದನ್ನು ಮನವರಿಕೆ ಮಾಡಿಕೊಂಡು ಪಕ್ಷದ ಹೈಕಮಾಂಡ್ ಸ್ಥಳೀಯ ನಾಲ್ವರು ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದರು.
ಟಿಕೆಟ್ ಆಕಾಂಕ್ಷಿಗಳಾದ ಶರಣಯ್ಯ ನಾಯಕ(Hampayya Nayak) ಗುಡದಿನ್ನಿ, ರಾಜಾ ವಸಂತ ನಾಯಕ(Raja vasanta nayak), ಮುಖಂಡ ಚುಕ್ಕಿ ಸೂಗಪ್ಪ ಸಾಹುಕಾರ ಮಾತನಾಡಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
Ticket fight: ಮಾನ್ವಿ ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನವೇ ಆಕ್ರೋಶ ಸ್ಪೋಟ!
ಬಿ.ವಿ. ನಾಯಕ ಗೋ ಬ್ಯಾಕ್ ಕೂಗು
ಮಾನ್ವಿ ಕ್ಷೇತ್ರ(Manvi assembly constituency)ದಲ್ಲಿ ಬಿ.ವಿ. ನಾಯಕ(BV Nayak) ಅವರು ಸ್ಪರ್ಧಿಸುತ್ತಿರುವುದರಿಂದ ಆಕ್ರೋಶ ಗೊಂಡ ಕಾರ್ಯಕರ್ತರು ಬೇರೆ ಕ್ಷೇತ್ರದವರು ನಮ್ಮ ಕ್ಷೇತ್ರದಲ್ಲಿ ಹೇಗೆ ಸ್ಪರ್ಧಿಸುತ್ತಾರೆ. ಅದಕ್ಕಾಗಿ ಗೋಬ್ಯಾಕ್ ಬಿವಿ ನಾಯಕ ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಟಿಕೆಟ್ ಸ್ಥಳೀಯರಿಗೆ ನೀಡಿ: ಅನ್ಯರ ವಿರುದ್ಧ ಘೋಷಣೆ
ಮಾನ್ವಿ: ತಾಲೂಕು ವಿಧಾನಸಭಾ ಕ್ಷೇತ್ರಕ್ಕೆ ಅಕಾಂಕ್ಷಿಯಾಗಿರುವ ಮಾಜಿ ಸಂಸದ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಿ.ವಿ. ನಾಯಕ ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಬಂದರೆ ಸೋಲು ಖಚಿತ ಎಂದು ಕಾರ್ಯಕರ್ತರು ಧಿಕ್ಕಾರ ಕೂಗಿದ ಪ್ರಸಂಗ ಶುಕ್ರವಾರ ಸಂಜೆ ನಡೆಯಿತು.
ಪಟ್ಟಣದ ಹೊರ ವಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಕಾರ್ಯಕರ್ತರು ಬಿ.ವಿ. ನಾಯಕ ವಿರುದ್ಧ ಧಿಕ್ಕಾರ ಸುರಿಮಳೆ ಗೈದರು. ಮಾನ್ವಿ ವಿಧಾನ ಸಭಾ ಎಸ್‌ಟಿ ಮೀಸಲು ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಬೇರೆ ತಾಲೂಕಿನವರಿಗೆ ಟಿಕೆಟ್ ನೀಡಿದರೆ ಸರಿಯಲ್ಲ, ಸ್ಥಳೀಯರಿಗೆ ಮಾತ್ರ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕು ಎಂದು ಆಕಾಂಕ್ಷಿಗಳಾದ ಮಾಜಿ ಶಾಸಕ ಹಂಪಯ್ಯನಾಯಕ, ಮುಖಂಡರಾದ ಶರಣಯ್ಯನಾಯಕ ಗುಡದಿನ್ನಿ, ರಾಜಾವಸಂತನಾಯಕ ಒಕ್ಕೊರಲಿನ ಕರೆ ನೀಡಿದರು.
ಮಾಜಿ ಶಾಸಕ ಹಂಪಯ್ಯನಾಯಕ ಮಾತನಾಡಿ, ರಾಜ್ಯದಲ್ಲಿ 2023 ರ ವಿಧಾನಸಭೆ ಚುನಾವಣೆಗೆ(Karnataka assembly election) ಕಾಂಗ್ರೆಸ್ ಪಕ್ಷವು ಪಕ್ಷದ ಅಭ್ಯರ್ಥಿಗಳನ್ನು ಅಯ್ಕೆ ಮಾಡಿ ಎರಡು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 3ನೇ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಇದರಿಂದ ಪಕ್ಷದ ಕಾರ್ಯಕರ್ತರ ಸಭೆಯನ್ನು ನಡೆಸುವ ಮೂಲಕ ಕಾರ್ಯಕರ್ತರ ಗೊಂದಲವನ್ನು ನಿವಾರಿಸುವ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದರು.
ರಾಯಚೂರು: ಚಿನ್ನದ ನಾಡಿಗೆ ಯಾರಾಗಲಿದ್ದಾರೆ ರಾಜ? ಮತದಾರರ ಸೆಳೆಯಲು ಟಿಕೆಟ್ ಆಕಾಂಕ್ಷಿಗಳ ಕಸರತ್ತು ಜೋರು!
ಪಕ್ಷದ ಅಂತಿಮ ಪಟ್ಟಿಯಲ್ಲಿ ಬಿ.ವಿ. ನಾಯಕ ಹೆಸರನ್ನು ಹೈಕಮಂಡ್‌ಗೆ ಕಳಿಸಿರುವುದರಿಂದ ಸ್ಥಳೀಯ ಪ್ರಬಲ ಅಕಾಂಕ್ಷಿಗಳಿಗೆ ಪಕ್ಷದ ಟಿಕೆಟ್ ಕೈತಪ್ಪುವ ಸಂಭವವಿರುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದ್ದು, ಪಕ್ಷದ ಮುಖಂಡರಲ್ಲಿ ಯಾವುದೇ ಗೊಂದಲವಿಲ್ಲ. ನಾಲ್ಕು ಜನ ಅಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಮ್ಮತದಿಂದ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುತ್ತೆವೆ. ಕಾರ್ಯಕರ್ತರ ಹಾಗೂ ಮುಖಂಡರ ವಿರೋಧವಿದ್ದರೂ ಅದು ಸ್ಥಳೀಯರಲ್ಲದವರಿಗೆ ಮಾತ್ರ. ಹೊರಗಿನವರಿಗೆ ಪಕ್ಷದ ಟಿಕೆಟ್ ನೀಡಿದಲ್ಲಿ ಕಾರ್ಯಕರ್ತರ ಅಭಿಪ್ರಾಯದಂತೆ ಮುಂದಿನ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಷ್ಟ್ರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮಾನ್ವಿ ಕ್ಷೇತ್ರದÜ ಟಿಕೆಟ್ ಅನ್ನು ಸ್ಥಳೀಯರಿಗೆ ನೀಡುವಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮನವಿ ಮಾಡಿಕೊಂಡಿದ್ದು, ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.