Asianet Suvarna News Asianet Suvarna News

Savarkar War; ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಜಟಾಪಟಿ

  • ವೀರ ಸಾವರ್ಕರ್‌ ಚಿತ್ರಕ್ಕೆ ಅವಮಾನಿಸಿದ ಕಾಂಗ್ರೆಸ್ಸಿಗರ ಕೃತ್ಯ ಖಂಡಿಸಿ ಶನಿವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಬಿಜೆಪಿ ಮುತ್ತಿಗೆ
  • ಈ ವೇಳೆ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷದವರು ಎದುರು ಬದುರಾಗಿ ಪ್ರತಿಭಟಿಸಿದರು.
  • 40ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು
  • ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲಗೂ ಪ್ರತಿಭಟನೆ ಬಿಸಿ 
Savarkar Waruproar of BJP-Congress workers hubballi rav
Author
Hubli, First Published Aug 21, 2022, 11:59 AM IST

ಹುಬ್ಬಳ್ಳಿ (ಆ.21) : ವೀರ ಸಾವರ್ಕರ್‌ ಚಿತ್ರಕ್ಕೆ ಅವಮಾನಿಸಿದ ಕಾಂಗ್ರೆಸ್ಸಿಗರ ಕೃತ್ಯ ಖಂಡಿಸಿ ಶನಿವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಪದಾಧಿಕಾರಿಗಳು ಮುಂದಾದ ವೇಳೆ ಎರಡೂ ಪಕ್ಷದವರು ಎದುರು ಬದುರಾಗಿ ಪ್ರತಿಭಟಿಸಿದರು. 40ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಬಿಗುವಿನ ವಾತಾವರಣ ನಿಯಂತ್ರಿಸಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲಗೂ ಪ್ರತಿಭಟನೆ ಬಿಸಿ ತಟ್ಟಿತು.

ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ: ಎಂಬಿಪಿ

ಇಲ್ಲಿನ ಕಾರವಾರ(Karwar) ರಸ್ತೆಯ ಇಎಸ್‌ಐ ಆಸ್ಪತ್ರೆ(ESI Hospital) ಎದುರಿಂದ ಬಿಜೆಪಿ ಕಾರ್ಯಕರ್ತರು(BJP Karyakarta) ಮೆರವಣಿಗೆ ಆರಂಭಿಸಿದರು. ಅನತಿ ದೂರದಲ್ಲೇ ಕಾರ್ಯಕರ್ತರನ್ನು ಪೊಲೀಸರು ತಡೆದರು. ಆದರೆ, ಯುವ ಕಾರ್ಯಕರ್ತರು ಪೊಲೀಸರ ಕಣ್ತಪ್ಪಿಸಿ ಕಾಂಗ್ರೆಸ್‌ ಕಚೇರಿ ಎದುರು ಸಾವರ್ಕರ್‌ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌, ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿಗರು ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್‌ ಕಚೇರಿಯಲ್ಲಿದ್ದ ಕಾರ್ಯಕರ್ತರು ಕೂಡ ರಸ್ತೆಗೆ ಬಂದು ಬಿಜೆಪಿಗರ ವಿರುದ್ಧ ಘೋಷಣೆ ಕೂಗಿದರು. ಸಾವರ್ಕರ್‌, ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕಾಂಗ್ರೆಸ್‌ ಬಂಟಿಂಗ್‌್ಸ ಹರಿದ ಬಿಜೆಪಿಗರು ತೀವ್ರ ಆಕ್ರೋಶ ಹೊರಹಾಕಿದರು. ರಸ್ತೆಯಲ್ಲೆ ಕುಳಿತು ಧರಣಿ ನಡೆಸಿದರು. ಗುಂಪುಗೂಡಿದ ಎರಡೂ ಕಡೆಯ ಕಾರ್ಯಕರ್ತರು ಎದುರು ಬದುರಾಗಿ ಮಾತಿನ ಚಕಮಕಿ ನಡೆಸಿದರು.

ಎರಡೂ ಕಡೆಯವರು ಒಬ್ಬರ ಮೇಲೋಬ್ಬರು ಏರಿ ಹೋಗಲು ಯತ್ನಿಸಿದರು. ಇಬ್ಬರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸುಮಾರು ಅರ್ಧಗಂಟೆ ಕಾಲ ಈ ಪ್ರಹಸನ ಮುಂದುವರಿಯಿತು. ಕಾಂಗ್ರೆಸ್‌ ಕಚೇರಿಗೆ ನುಗ್ಗಲು ಯತ್ನಿಸಿದ ಬಿಜೆಪಿಗರನ್ನು ಪೊಲೀಸರು ಹಿಮ್ಮೆಟ್ಟಿಸಿದರು. ಈ ಹಂತದಲ್ಲಿ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ಉಂಟಾಗಿತ್ತು.

ಮಹಾತ್ಮ ಗಾಂಧಿಯವರನ್ನು ಕೊಂದವರು ನನ್ನನ್ನ ಬಿಡ್ತಾರಾ? ಸಿದ್ದರಾಮಯ್ಯ ಆತಂಕ!

ಈ ನಡುವೆ ಪಕ್ಷದ ಕಚೇರಿಗೆ ಆಗಮಿಸಿದ ಕೆಪಿಸಿಸಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಅವರಿಗೂ ಪ್ರತಿಭಟನೆ ಬಿಸಿ ತಟ್ಟಿತು. ಕಾರವಾರ ರಸ್ತೆ ಬಂದಾಗಿದ್ದ ಹಿನ್ನೆಲೆಯಲ್ಲಿ ಅವರು ಹೆಗ್ಗೇರಿ ಒಳರಸ್ತೆ ಮೂಲಕ ಕಚೇರಿಗೆ ಬಂದರು. ಬ್ಯಾರಿಕೇಡ್‌ ಹಾಕಿ ತಡೆಯಲು ಯತ್ನಿಸಿದರೂ ಬಿಜೆಪಿ ಹಾಗೂ ಕಾಂಗ್ರೆಸ್ಸಿನವರನ್ನು ತಹಬದಿಗೆ ತರಲಾಗದ ಕಾರಣ ಪೊಲೀಸರು ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್‌ ಬಸ್‌ನಲ್ಲಿ ಕರೆದೊಯ್ದರು. ಸುಮಾರು 40ಕ್ಕೂ ಹೆಚ್ಚಿನ ಪದಾಧಿಕಾರಿಗಳನ್ನು ಹಳೆ ಪೊಲೀಸ್‌ ಸಿಎಆರ್‌ ಮೈದಾನಕ್ಕೆ ಕರೆದೊಯ್ದರು.

ನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ದತ್ತಮೂರ್ತಿ ಕುಲಕರ್ಣಿ, ರಾಜ್ಯ ಯುವ ಮೋರ್ಚಾ ಮುಖಂಡ ಮಲ್ಲಿಕಾರ್ಜುನ ಬಾಳಿಕಾಯಿ, ಜಿಲ್ಲಾ ವಕ್ತಾರ ರವಿ ನಾಯಕ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಶಿವಯ್ಯ ಹಿರೇಮಠ, ಸೀಮಾ ಲದ್ವಾ, ಸತೀಶ ಶೇಜವಾಡಕರ್‌, ಪ್ರಭು ನವಲಗುಂದಮಠ, ಬಸವರಾಜ ಅಮ್ಮಿನಭಾವಿ, ಶಿವಾನಂದ ಮುತ್ತಣ್ಣವರ, ಪ್ರೀತಮ್‌ ಅರಕೇರಿ, ಅಕ್ಷಯ ಬದ್ದಿ ಇತರರಿದ್ದರು.

ಕಾನೂನು ಕ್ರಮ; ಕಮಿಷನರ್‌: ಹು-ಧಾ ಪೊಲೀಸ್‌ ಆಯುಕ್ತ ಲಾಬೂರಾಮ್‌ ಮಾತನಾಡಿ, ಪೊಲೀಸರ ಪರವಾನಗಿ ಮೀರಿ ಕಾಂಗ್ರೆಸ್‌ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಅವರನ್ನು ಮಾರ್ಗ ಮಧ್ಯೆ ತಡೆದು ವಶಕ್ಕೆ ಪಡೆಯಲಾಗಿದೆ. ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಧಾರವಾಡದಲ್ಲಿ ಸಾವರ್ಕರ್‌ ಭಾವಚಿತ್ರಕ್ಕೆ ಬೆಂಕಿ ವಿಚಾರ ಸಂಬಂಧ ಧಾರವಾಡ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿವುದು ಎಂದರು.

Follow Us:
Download App:
  • android
  • ios