Asianet Suvarna News Asianet Suvarna News

ಪಾಕ್ ಜೊತೆ ಮಾತುಕತೆ ಬಗ್ಗೆ ಮೆಹಬೂಬಾ ಮುಫ್ತಿ ಹೇಳಿಕೆ ಖಂಡಿಸಿದ ಸಂಜಯ್ ರಾವತ್!

ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಪಾಕ್ ಜೊತೆ ಮಾತುಕತೆ ಮಾಡಿ

ಪಿಡಿಪಿ ಅಧ್ಯಕ್ಷ ಮೆಹಬೂಬಾ ಮುಫ್ತಿ ಹೇಳಿಕೆ

ಮುಫ್ತಿ ಹೇಳಿಕೆಯನ್ನು ಖಂಡಿಸಿದ ಶಿವಸೇನಾ ಮುಖಂಡ ಸಂಜಯ್ ರಾವತ್
 

Sanjay Raut Slams Mehbooba Muftis Remark said the PDP was a friend of the BJP at some point san
Author
Bengaluru, First Published Mar 27, 2022, 4:11 PM IST

ಮುಂಬೈ (ಮಾ. 27): ಪಾಕಿಸ್ತಾನ (Pakistan ) ಮತ್ತು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಜನರೊಂದಿಗೆ ಕೇಂದ್ರವು ಮಾತುಕತೆ ನಡೆಸುವವರೆಗೂ ಕಾಶ್ಮೀರದಲ್ಲಿ ಶಾಂತಿಯು ದುಸ್ತರವಾಗಿರುತ್ತದೆ ಎಂದು ಮೆಹಬೂಬಾ ಮುಫ್ತಿ (Mehbooba Mufti) ಹೇಳಿದ ಬೆನ್ನಲ್ಲಿಯೇ ಅವರ ವಿರುದ್ಧ ಟೀಕಾಪ್ರಹಾರ ಆರಂಭವಾಗಿದೆ. ಇದನ್ನು ಕಟುಶಬ್ದಗಳಲ್ಲಿ ಟೀಕೆ ಮಾಡಿರುವ ಶಿವಸೇನೆ ಸಂಸದ ( Shiv Sena MP) ಸಂಜಯ್ ರಾವತ್ (Sanjay Raut), ಮೆಹಬೂಬಾ ಮುಫ್ತಿಯಂಥ ವ್ಯಕ್ತಿಗಳ ಜೊತೆ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದ ಕಾರಣದಿಂದಾಗಿಯೇ ಈ ವ್ಯಕ್ತಿಗಳಿಗೆ ಇಂಥ ಹೇಳಿಕೆ ನೀಡಲು ಶಕ್ತಿ ಸಿಕ್ಕಂತಾಗಿದೆ  ಎಂದು ಆರೋಪಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕೆಲವು ಸಮಯದಲ್ಲಿ ಬಿಜೆಪಿಯ "ಸ್ನೇಹಿತ"ರಾಗಿ ಆಡಳಿತ ಮಾಡಿದ್ದರು ಎಂದಿದ್ದಾರೆ. ಪಿಡಿಪಿ (PDP) ಮೊದಲಿನಿಂದಲೂ "ಪಾಕಿಸ್ತಾನದ ಪರವಾಗಿದೆ ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದೆ" ಎಂದು ಅವರು ಆರೋಪಿಸಿದ್ದಾರೆ. 2015 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಪಿಡಿಪಿ ಮತ್ತು ಬಿಜೆಪಿ ಒಟ್ಟಾಗಿದ್ದವು.  ಜೂನ್ 2018 ರಲ್ಲಿ ಮೈತ್ರಿ ಮುರಿದುಹೋಯಿತು. ಕಾಶ್ಮೀರದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಜಮ್ಮು ಕಾಶ್ಮೀರದ ಜನರೊಂದಿಗೆ ಪಾಕಿಸ್ತಾನದ ಜೊತೆಯಲ್ಲೂ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮಾತನಾಡಬೇಕು ಎಂದು ಮೆಹಬೂಬಾ ಮುಫ್ತಿ ಶನಿವಾರ ಹೇಳಿದ್ದರು.

ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವನ್ನುಮುಫ್ತಿ ಬೆಂಬಲಿಸಿದ್ದರು ಇಂಥ ಪಕ್ಷದೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ  ಮೈತ್ರಿ ಮಾಡಿಕೊಳ್ಳುವ ಮೂಲಕ ಸರ್ಕಾರವನ್ನು ರಚಿಸಿತ್ತು. ಇದರಿಂದಾಗಿ ಮೆಹಬೂಬಾ ಮುಫ್ತಿ ಇಂಥ ಮಾತುಗಳನ್ನು ಆಡಲು ಶಕ್ತಿ ಸಿಕ್ಕಂತಾಗಿದೆ ಎಂದು ರಾವತ್ ಹೇಳಿದ್ದಾರೆ. "ಈಗ ಅದೇ ಮೆಹಬೂಬಾ ಮುಫ್ತಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಪಾಕಿಸ್ತಾನದೊಂದಿಗೆ ಮಾತುಕತೆ ಬಯಸಿದ್ದಾರೆ. ಇದು ಬಿಜೆಪಿ ಮಾಡಿರುವ ಪಾಪ" ಎಂದು ಅವರು ಆರೋಪಿಸಿದ್ದಾರೆ. ಅಂತಹವರಿಗೆ ಅಧಿಕಾರ ಹಂಚುವ ಮೂಲಕ ಬಿಜೆಪಿ ಶಕ್ತಿ ನೀಡಿತು...ಹೀಗಾಗಿ ಮೆಹಬೂಬಾ ಮುಫ್ತಿ ಹೇಳುತ್ತಿರುವುದಕ್ಕೆ ಬಿಜೆಪಿಯೇ ಹೊಣೆ ಎಂದರು. ಈ ವಿಷಯದ ಬಗ್ಗೆ ಬಿಜೆಪಿಯ ದೃಷ್ಟಿಕೋನ ಈಗ ಏನೇ ಇರಲಿ, ಪಿಡಿಪಿಯ ಸಿದ್ಧಾಂತವನ್ನು ಯಾವಾಗಲೂ ಶಿವಸೇನೆ ವಿರೋಧಿಸುತ್ತದೆ ಎಂದು ಹೇಳಿದರು.

ಕನ್ನಡಿಗರನ್ನು ಕೆಣಕಿದ ಸಂಜಯ್ ರಾವತ್ ಗೆ ಸಿಎಂ ಬೊಮ್ಮಾಯಿ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಎರಡು ಗಂಟೆ ನಿದ್ದೆ ಮಾಡುತ್ತಾರೆ ಮತ್ತು ಪ್ರತಿದಿನ 22 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿದ ರಾವತ್, ಇದು "ಉತ್ಕೃಷ್ಟತೆಯ ಪರಮಾವಧಿ" ಎಂದು ಹೇಳಿದರು "ಪಾಟೀಲ್ ಅವರ ಮಾತುಗಳನ್ನು ಕೇಳಿ ಪ್ರಧಾನಿ ಮೋದಿ ಎರಡು ಗಂಟೆಗಳ ನಿದ್ರೆಯನ್ನೂ ಕಳೆದುಕೊಂಡಿರಬಹುದು' ಎಂದು ವ್ಯಂಗ್ಯವಾಡಿದ್ದಾರೆ.

Maha Vikas Aghadi ಅಸಾದುದ್ದೀನ್ ಓವೈಸಿ ಪಾರ್ಟಿ, ಬಿಜೆಪಿಯ ಬಿ ಟೀಮ್ ಎಂದ ಸಂಜಯ್ ರಾವತ್!

ಪಾಟೀಲ್ ಅವರಂತಹ ಬಿಜೆಪಿ ನಾಯಕರ ಪ್ರಕಾರ, ಪ್ರಧಾನಿ ಮೋದಿ ಮಾತ್ರ ಕಷ್ಟಪಟ್ಟು ಮಾಡುತ್ತಾರೆ. ಯುಎಸ್ ಅಧ್ಯಕ್ಷ ಜೋ ಬಿಡನ್,  ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್‌ನ ವೊಲೊಡಿಮಿರ್ ಝೆಲೆನ್ಸ್ಕಿ ಸೇರಿದಂತೆ ವಿಶ್ವದ ಯಾವುದೇ ನಾಯಕರಲ್ಲ ಇಷ್ಟೆಲ್ಲಾ ಕಷ್ಟಪಟ್ಟು ಕೆಲಸ ಮಾಡುವುದಿಲ್ಲ ಎಂದು ರಾವತ್ ವ್ಯಂಗ್ಯವಾಡಿದರು. "ಈ ಹಿಂದೆಯೂ ಸೈಕೋಫಂಟ್‌ಗಳು ಇದ್ದರು. ಮಹಾತ್ಮಾ ಗಾಂಧಿಯವರೂ ಸಹ ಸೈಕೋಫಂಟ್‌ಗಳನ್ನು ಹೊಂದಿದ್ದರು. ಸರ್ದಾರ್ ಪಟೇಲ್‌ಗೂ ಸೈಕೋಫಂಟ್‌ಗಳಿದ್ದರು. ಆದರೆ ನಾವು ಈ ಹಿಂದೆ ಅಂತಹ ಸಿಕೋಫಂಟ್‌ಗಳನ್ನು ನೋಡಿರಲಿಲ್ಲ ... ಇದು ಸಿಕೋಫಂಟ್‌ನ ಪರಮಾವಧಿ" ಎಂದು ಶಿವಸೇನೆ ನಾಯಕ ಹೇಳಿದರು. ರಾವುತ್ ಅವರು ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ 'ರೋಖ್‌ಥೋಕ್' ನಲ್ಲಿ ಇದೇ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Follow Us:
Download App:
  • android
  • ios