Belgaum Files: ಕನ್ನಡಿಗರನ್ನು ಕೆಣಕಿದ ಸಂಜಯ್ ರಾವತ್ ಗೆ ಸಿಎಂ ಬೊಮ್ಮಾಯಿ ತಿರುಗೇಟು

ಕಾಶ್ಮೀರಿ ಫೈಲ್ಸ್ ನಂತೆ ಬೆಳಗಾವಿ ಫೈಲ್ಸ್ ಬರಬೇಕು ಎಂದು ಶಿವಸೇನಾ ನಾಯಕ ಸಂಜಯ್ ರಾವತ್  ಮಾಡಿದ್ದ ವಿವಾದಾತ್ಮಕ ಟ್ವೀಟ್ ಗೆ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

cm basavaraj bommai react on Sanjay Raut belgaum files tweet  gow

ಬೆಂಗಳೂರು(ಮಾ.22): ಕಾಶ್ಮೀರಿ ಫೈಲ್ಸ್ ನಂತೆ  'ಬೆಳಗಾವ ಫೈಲ್ಸ್' (Belgaum Files) ಬರಬೇಕು ಎಂದು ಶಿವಸೇನಾ (Shiv Sena) ನಾಯಕ ಸಂಜಯ್ ರಾವತ್ (Sanjay Raut) ಮಾಡಿದ್ದ ವಿವಾದಾತ್ಮಕ ಟ್ವೀಟ್ ವಿಚಾರಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ (cm basavaraj bommai) ತಿರುಗೇಟು ನೀಡಿದ್ದಾರೆ. ಅದೊಂದು ಸ್ಟಂಟ್ ಅವರದ್ದು. ಬೆಳಗಾವಿ ವಿಚಾರ 1956 ನಲ್ಲೇ ತೀರ್ಮಾನ ಆಗಿದೆ. 1956 ನಲ್ಲಿ ರಾಜ್ಯ ಪುನರ್ ವಿಂಗಡಣೆ ಆಯೋಗದ ಅನುಗುಣವಾಗಿ ಆಗಿದೆ.  ಸತ್ಯ ಹೇಳಬೇಕು ಅಂದ್ರೆ ಕನ್ನಡ ಮಾತನಾಡುವ ಸೊಲ್ಲಾಪುರ, ಅಕ್ಕಲ್ ಕೋಟೆ ಭಾಗಗಳು ಮಹಾರಾಷ್ಟ್ರದಲ್ಲಿ ಉಳಿದಿವೆ.  ಈ ರೀತಿ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅಗಾಗ ಬೆಳಗಾವಿ ಹೆಸರಲ್ಲಿ ಅಲ್ಲಿ ಇರುವ ಸಮಸ್ಯೆಗಳನ್ನು ಡೈವರ್ಟ್ ಮಾಡಲು ಈ ಕೆಲಸ ಮಾಡುತ್ತಾರೆ ಎಂದು ಸಂಜಯ್ ರಾವತ್ ವಿರುದ್ಧ ಕಿಡಿ ಕಾರಿದರು.

ಸಂಜಯ್ ರಾವತ್ ವಿವಾದಾತ್ಮಕ ಟ್ವೀಟ್:  ದೇಶಾದ್ಯಂತ ಕಾಶ್ಮೀರ ಫೈಲ್ಸ್ ಸದ್ದು ಮಾಡ್ತಿದೆ ಎಲ್ಲಡೆ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಬಗ್ಗೆ ಚರ್ಚೆಯಾಗ್ತಿದೆ ಇದ್ರ ನಡುವೆ ಶಿವಸೇನಾ ನಾಯಕ ಸಂಜಯ್ ರಾವತ್ ವಿವಾದಾತ್ಮಕ ಟ್ವೀಟ್ ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೆಳಗಾವಿ ಫೈಲ್ಸ್ ಎಂದು ವ್ಯಂಗ್ಯ ಚಿತ್ರದ ಮೂಲಕ ಟ್ವಿಟರ್ ನಲ್ಲಿ ಪೊಸ್ಟ್ ಮಾಡಿದ್ದಾರೆ. ಆ ಪೋಸ್ಟ್ ನಲ್ಲಿ ಬೆಳಗಾವಿ ಫೈಲ್ಸ್ ಏನು ಕಡಿಮೆ ಇದ್ಯಾ ? ಪ್ರಜಾಪ್ರಭುತ್ವ ಹತ್ಯೆ ಎಂದು ಮರಾಠಿಯಲ್ಲಿ ವ್ಯಂಗ್ಯ ಚಿತ್ರದ ಮೂಲಕ ಪೊಸ್ಟ್ ಮಾಡಲಾಗಿದೆ.

Belgaum Files ಟ್ವೀಟ್ ಮಾಡಿ ಸ್ವಾಭಿಮಾನಿ ಕನ್ನಡಿಗರನ್ನು ಕೆಣಕಿದ ಶಿವಸೇನೆಯ ಸಂಜಯ್ ರಾವತ್

 ಸಂಜಯ್ ರಾವತ್ ಟ್ವೀಟ್ ಗೆ ಕನ್ನಡಿಗರ ಕಿಡಿ:  ಬೆಳಗಾವಿ ಫೈಲ್ಸ್ ಎಂದು ಟ್ವೀಟ್ ಮಾಡಿದ್ದ ಸಂಜಯ್ ರಾವತ್  ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಕನ್ನಡ ಸಂಘಟನೆ ಇದನ್ನ ತೀವ್ರವಾಗಿ ಖಂಡಿಸಿದೆ. ಅಲ್ಲದೆ ಸಾಮಾಜಿಕ ಚಾಲತಾಣದಲ್ಲಿ ರಾವತ್ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಿ ಎನ್ನುವವರನ್ನು ಉಗ್ರರು ಎನ್ನುತ್ತೇವೆ , ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ‌ ಸೇವಿಸಬೇಕು ಎನ್ನುವವರನ್ನು ಏನನ್ನಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡ್ತಿದ್ದಾರೆ.

ಮರಾಠಿಗರನ್ನು ಮುಂಬೈಗಿಂತ ಚೆನ್ನಾಗಿ ಕನ್ನಡಿಗರು ನೋಡಿಕೊಂಡಿದ್ದಾರೆ : ಸಿಟಿ ರವಿ
 ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸಂಜಯ್ ರಾವತ್ ವಿವಾದಾತ್ಮಕ ಟ್ವಿಟ್ ಗೆ ಪ್ರತಿಕ್ರಿಯೆ  ನೀಡಿದ್ದು. ಶಿವಸೇನೆ ಪಕ್ಷ ಯಾವ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಬಂದಿದೆ ಅನೋದನ್ನ ಮೊದಲು ತಿಳಿದಿಕೊಳ್ಳಲಿ. 1993 ರ ಬಾಂಬ್ ಸ್ಪೋಟವನ್ನೇ ಮರೆತು ದಾವೂದ್ ಇಬ್ರಾಹಿಂ ಜೊತೆ ಸಂಬಂಧ ಇಟ್ಟುಕೊಂಡ ನಾವಬ್ ಮಲ್ಲಿಕ್ ಜೊತೆ  ಅಧಿಕಾರವನ್ನ ಶಿವಸೇನೆ  ಹಂಚಿಕೊಂಡಿದೆ. ಶಿವಸೇನೆ ಇವತ್ತು ವಿಷಯಾಂತರ ಮಾಡುತ್ತಿದ್ದೆ. ಕಾಶ್ಮೀರ ಫೈಲ್ಸ್ ಬಗ್ಗೆ ಅವರ ಅಭಿಪ್ರಾಯ ಏನು? ಅದನ್ನು ಮೊದಲು ಸ್ಪಷ್ಟ ಪಡಿಸಲಿ. ಬಾಳ್ ಠಾಕ್ರೆಗೆ ಇದ್ದ ಅಭಿಪ್ರಾಯ ಈಗಲೂ ಇದ್ಯಾ ಇಲ್ವೋ ಅನ್ನೊದನ್ನ ಸ್ಪಷ್ಟಪಡಿಸಲಿ. ಮುಂಬೈಗಿಂತ ಚನ್ನಾಗಿ ಮರಾಠಿಗಳನ್ನ ಕನ್ನಡಿಗರು ನೋಡಿಕೊಂಡಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯ ತಾರತಮ್ಯ ಇಲ್ಲ. ವಿವಾದ ಅಲ್ಲದೇ ಇರುವುದನ್ನ ವಿವಾದ ಮಾಡಿದ್ರೆ ಏನ್ ಆಗುತ್ತೆ ಅನ್ನೊದನ್ನ ತಿಳಿದುಕೊಳ್ಳಲಿ. ಮೊದಲು ಶಿವಸೇನೆ ನಾಯಕರು ಕಾಶ್ಮೀರಿ ಫೈಲ್ಸ್ ಬಗ್ಗೆ ಸ್ಪಷ್ಟವಾದ ನಿಲುವನ್ನು ತಿಳಿಸಲಿ ಎಂದಿದ್ದಾರೆ. 

Bhima River Bank Murder Case ನ್ಯಾಯಾಲಯಕ್ಕೆ ಹಾಜರಾದ ಪ್ರಮುಖ ಆರೋಪಿಗೆ ಬಿಗಿ ಭದ್ರತೆ! 

Latest Videos
Follow Us:
Download App:
  • android
  • ios