ಜನರ ಸಮಸ್ಯೆಗೆ ಸ್ಪಂದಿಸಿ ಉತ್ತಮ ಆಡಳಿತ ನೀಡಿರುವೆ: ಕೇಂದ್ರ ಸಚಿವ ಭಗವಂತ ಖೂಬಾ

ಕಳೆದ 10 ವರ್ಷಗಳಲ್ಲಿ ಸಂಸದರಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸ್ವಚ್ಛ, ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡಿದ್ದೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. 

Responding to peoples problems and giving good governance Says Union Minister Bhagwanth Khuba gvd

ಕಮಲನಗರ (ಮಾ.04): ಕಳೆದ 10 ವರ್ಷಗಳಲ್ಲಿ ಸಂಸದರಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸ್ವಚ್ಛ, ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡಿದ್ದೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ಪಟ್ಟಣದ ರೇಲ್ವೆ ನಿಲ್ದಾಣದಲ್ಲಿ ಸಂಜೆ ಲಾತೂರ-ಯಶವಂತಪೂರ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಕಮಲನಗರ ಗಡಿಭಾಗದ ತಾಲೂಕು ಕೇಂದ್ರವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಾರೆ. ಈ ಹಿನ್ನೆಲೆ 3 ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಇಲಾಖೆ ಒಪ್ಪಿಗೆ ನೀಡಿದೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಜನರಲ್ಲಿ ವಿಶ್ವಾಸದ ಜೊತೆಗೆ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ ಎಂದರು.

ಬೀದರ್‌ನಿಂದ 13 ಹೊಸ ರೈಲು ಸಂಚಾರ ಮತ್ತು 12 ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನುಳಿದಂತೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿವೆ ಎಂದು ತಿಳಿಸಿದರು. ಕಮಲನಗರ ತಾಲೂಕಿನ ಹಂದಿಕೇರಾ ಗ್ರಾಮದಲ್ಲಿ 30 ಕೋಟಿ ವೆಚ್ಚದಲ್ಲಿ ಗ್ರಿಡ್ ಪವರ್ ಸ್ಟೇಷನ್ ಸ್ಥಾಪಿಸಲಾಗುತ್ತಿದೆ. ಇದಲ್ಲದೇ ಹಂದಿಕೇರಾ ಕ್ರಾಸ್‌ ಬಳಿ 2000 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ಅನುಮೋದನೆ ದೊರಕಿದೆ. 10 ಸಾವಿರ ಕೋಟಿ ರು. ಬಂಡವಾಳ ಹೂಡಿಕೆ ಮಾಡಲು ಕಂಪನಿಗಳು ಮುಂದಾಗಿವೆ. ಇದರಿಂದ 1500ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ದೊರಕಲಿದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ ಮಹೇಶ, ಮುಖಂಡರಾದ ಪ್ರಕಾಶ ಟೋಣ್ಣೆ, ಬಾಲಾಜಿ ತೇಲಂಗ, ಶ್ರೀರಂಗ ಪರಿಹಾರ, ಸಿಕಿಂದ್ರಾಬಾದ ವಿಬಾಗದ ಎಡಿಆರ್ ಗೋಪಾಲ ಸೇರಿ ಇಲಾಖೆ ಹಿರಿಯ ಅಧಿಕಾರಿ ಮತ್ತು ಸಿಬ್ಬಂಧಿ ಇದ್ದರು.

ಕಾಂಗ್ರೆಸ್‌ ಎಫ್ಎಸ್‌ಎಲ್ ವರದಿ ಒಪ್ಪುವ ಸ್ಥಿತಿಯಲ್ಲಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಫಲಾನುಭವಿಗಳ ಮನೆ ಸಂಪರ್ಕ ಮಾಡಿದ ಸಚಿವ ಖೂಬಾ: ಫಲಾನುಭವಿಗಳ ಸಂಪರ್ಕ ಅಭಿಯಾನದಡಿ, ಕೇಂದ್ರ ಸಚಿವರು ಹಾಗೂ ಸಂಸದ ಭಗವಂತ ಖೂಬಾ, ಪಕ್ಷದ ಪ್ರಮುಖರು ಸೇರಿ, ಬೀದರ್‌ ಶಿವನಗರ ದಕ್ಷೀಣದಲ್ಲಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಸಹಾಯ ಪಡೆದ ಫಲಾನುಭವಿಗಳ ಮನೆ ಮನೆಗೆ ತೆರಳಿ, ಫಲಾನುಭವಿಗಳಿಗೆ ಕರಪತ್ರಗಳು ನೀಡಿ, ಮೋದಿ ಗ್ಯಾರಂಟಿಯ ಸ್ಟೀಕರ್ ಅಂಟಿಸಿದರು. ಮೋದಿ ಸರ್ಕಾರದಿಂದ ದೇಶದ 81 ಕೋಟಿ ಜನರು ವಿವಿಧ ಯೊಜನೆಗಳಡಿ ಫಲಾನುಭವಿಗಳಾಗಿದ್ದಾರೆ, ಅದರಂತೆ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15 ಲಕ್ಷ ಫಲಾನುಭವಿಗಳಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಫಲಾನುಭವಿಗಳಿಗೆ ಭೇಟಿ ಮಾಡಿ, ಕೇಂದ್ರದ ಯೋಜನೆಯಡಿ ಲಾಭ ಪಡೆದಿರುವ ಬಗ್ಗೆ ಖಾತರಿ ಪಡಿಸಿಕೊಂಡು, ಪಕ್ಷದ ಸರಳ್ ಅಪ್ಲಿಕೇಶನ್‌ ಅಲ್ಲಿ ಅಪ್ಲೋಡ್ ಮಾಡಿದರು.

ದೇಶದ ಪ್ರತಿ ಮನೆಗೂ ನೀರು ನೀಡಲು ಜಲಜೀವನ್‌ ಯೋಜನೆ: ಸಂಸದ ಪ್ರಜ್ವಲ್‌ ರೇವಣ್ಣ

ಜನರೊಂದಿಗೆ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಡಿ, ದೇಶವು ಉನ್ನತ್ತಿಯತ್ತ ಸಾಗುತ್ತಿದೆ, ಅದರಂತೆ ಬೀದರ ಲೋಕಸಭಾ ಕ್ಷೇತ್ರದಲ್ಲಿಯೂ ಯಶಸ್ವಿಯಾಗಿ ಎಲ್ಲಾ ಯೋಜನೆಗಳು ಅನುಷ್ಠಾನಗೊಂಡಿವೆ ಎಂದರು. ಬರುವ ಲೋಕಸಭಾ ಚುನಾವಣೆಯಲ್ಲಿ ನನಗೆ ಮೂರನೆ ಬಾರಿಗೆ ಆಶೀರ್ವಾದಿಸಿ, ದೇಶಕ್ಕೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ನರೇಂದ್ರ ಮೋದಿ ಅವರಿಗೆ ಆಶಿರ್ವಾದ ಮಾಡಬೇಕೆಂದು ಜನರಲ್ಲಿ ವಿನಂತಿಸಿಕೊಂಡರು. ರಾಜ್ಯ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಪ್ರದೀಪ ಕಾಡಾದಿ, ಜಿಲ್ಲಾ ಸಂಚಾಲಕ ದಿನೇಶ ಮೂಲಗೆ ಹಾಗೂ ಪ್ರಮುಖರಾದ ನೀತಿನ ಕರ್ಪೂರ, ಗೋಪಾಲ, ಸೂರ್ಯಕಾಂತ ರಾಮಶೇಟ್ಟಿ, ಶರಣಪ್ಪ ಪಂಚಾಕ್ಷರಿ ಇದ್ದರು.

Latest Videos
Follow Us:
Download App:
  • android
  • ios