ಬಿ ಎಸ್ ಯಡಿಯೂರಪ್ಪರಿಗೆ ದೇವರು, ಭವಿಷ್ಯದಲ್ಲಿ ಅಪಾರ ಭಕ್ತಿ | ಮುಂಡರಗಿ ಅಜ್ಜಾರ ಬಳಿ ಭವಿಷ್ಯ ಕೇಳಿದ ಬಿಎಸ್‌ವೈ | ಮುಂದೇನಾಯ್ತು? ಇಲ್ಲಿದೆ ಓದಿ
ಬೆಂಗಳೂರು (ಫೆ. 12): 2014 ರಲ್ಲಿ ಲೋಕಸಭಾ ಚುನಾವಣೆಯಲ್ಲಿ 1500 ಮತಗಳಿಂದ ಶಿವನಗೌಡ ನಾಯಕ ಸೋತಾಗ ಸ್ಥಳೀಯ ಕುರುಬ ಸಮುದಾಯಕ್ಕೆ ಸೇರಿದ ಮುಂಡರಗಿಯ ಗುಡ್ಡದ ಮೇಲೆ ಕೂರುವ ಶಿವಯ್ಯ ತಾತ ಒಂದೇ ವರ್ಷದಲ್ಲಿ ಅಧಿಕಾರ ಬರುತ್ತದೆ ಎಂದು ಕೆಲ ಪೂಜೆ ಮಾಡಲು ಹೇಳಿದ್ದರಂತೆ.
ಸದನದಲ್ಲಿ ‘ಆಪರೇಷನ್’ ಗಲಾಟೆಗೆ ಬ್ರೇಕ್ ಹಾಕಲು ಸರ್ಕಾರದಿಂದ ಪ್ಲಾನ್!
ನಂತರ ಸಿನಿಮೀಯ ಮಾದರಿಯಲ್ಲಿ ದೇವದುರ್ಗದ ಶಾಸಕರಾಗಿದ್ದ ಶಿವನಗೌಡರ ಅಜ್ಜ ರೈಲ್ವೆ ಅಪಘಾತದಲ್ಲಿ ತೀರಿಕೊಂಡಾಗ ಶಿವನಗೌಡರು ಮತ್ತೆ ಗೆದ್ದು ಶಾಸಕರಾದರು. ಕಳೆದ ವಾರ ಎಲ್ಲ ಶಾಸಕರು ಕುಳಿತು ಹರಟೆ ಹೊಡೆಯುವಾಗ ಶಿವನಗೌಡರು ತನ್ನ ಕಥೆ ಹೇಳಿ, ‘ಯಡಿಯೂರಪ್ಪ ಸಾಹೇಬರೆ.. ನಿಮಗೆ ಯಾಕೋ ಅದೃಷ್ಟಕೈಕೊಡುತ್ತಿದೆ. ಬನ್ನಿ, ಮುಂಡರಗಿ ಅಜ್ಜಾರಿಗೆ ಕೇಳೋಣ. ಏನಾದ್ರು ಪರಿಹಾರ ಹೇಳಬಹುದು’ ಎಂದಾಗ ಬಿಎಸ್‌ವೈ ಹೆಲಿಕಾಪ್ಟರ್ ಮಾಡಿಕೊಂಡು ಹೋಗಿದ್ದಾರೆ. ಮುಂದೆ ಏನೆಲ್ಲ ಆಯಿತು ಈಗ ಇತಿಹಾಸ ಬಿಡಿ.
- ಇಂಡಿಯಾ ಗೇಟ್, ಪ್ರಶಾಂತ್ ನಾತು
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 12, 2019, 6:21 PM IST