ಬೆಂಗಳೂರು, (ಆ.03): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಂಪುಟ ವಿಸ್ತರಣೆ ಮುಂದಾಗಿದ್ದು,. ಆಗಸ್ಟ್‌ ತಿಂಗಳಲ್ಲಿ ಮಾಡಿ ಮುಗಿಸುವ ಪ್ಲಾನ್ ಮಾಡಿದ್ದಾರೆ.

ಹೈಕಮಾಂಡ್‌ ನಾಯಕರು ಒಪ್ಪಿಗೆ ಸೂಚಿಸುತ್ತಿದ್ದಂತೆ ಸಂಪುಟ ವಿಸ್ತರಣೆ ಕಸರತ್ತು ಆರಂಭವಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕೇವಲ 6 ಜನರಿಗೆ ಸಚಿವ ಸ್ಥಾನ ನೀಡುವ ಅವಕಾಶ ಇದ್ದು, ಯಾರಿಗೆ ಮಂತ್ರಿ ಭಾಗ್ಯ ಒಳಿಯಲಿದೆ. ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಇದರ ಮಧ್ಯೆ ಕೆಲ ಸಂಪುಟದಿಂದ ಕೊಕ್ ನೀಡುವುದು ಗ್ಯಾರಂಟಿ ಎನ್ನಲಾಗಿದೆ. ಇದರಿಂದ ಒಬ್ಬರಾದಂತೆ ಒಬ್ಬರು ದೆಹಲಿಗೆ ಹಾರುತ್ತಿದ್ದಾರೆ.

ದಿಢೀರ್ ದೆಹಲಿಗೆ ಹೋದ ಶಶಿಕಲಾ ಸಂಪುಟ ಪುನಾರಚನೆ ಬಗ್ಗೆ ಕೊಟ್ಟ ಬ್ರೇಕಿಂಗ್!

ಹೌದು... ಕಳೆದ ವಾರ ಲಕ್ಷ್ಮಣ್ ಸವದಿ ದೆಹಲಿಗೆ ಪ್ರಯಾಣ ಬೆಳೆಸಿದ್ರು. ಅವರಿಗೆ ಉಪ-ಮುಖ್ಯಮಂತ್ರಿ ಹುದ್ದೆ ಕೈತಪ್ಪುವ ಭೀತಿ ಇರುವ ಕಾರಣ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ರು ಎನ್ನಲಾಗಿತ್ತು. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಭದ್ರತೆ ಕಾಡುತ್ತಿರುವುದರಿಂದ ಅವರು ದೆಹಲಿಗೆ ಹೋಗಿದ್ದರು. 

ಕುತೂಹಲ ಮೂಡಿಸಿದ ಸಾಹುಕಾರನ ದಿಲ್ಲಿ ಟೂರ್
ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಎರಡು ದಿನಗಳ ಕಾಲ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಹಲವು ನಾಯಕರನ್ನ ಭೇಟಿಯಾಗಿದ್ದರು. ಈಗ ರಮೇಶ್ ಜಾರಕಿಹೊಳಿಯ ಸರದಿ. ರಮೇಶ್ ಜಾರಕಿಹೊಳಿ ರಾಜ್ಯ ಸಚಿವ ಸಂಪುಟ ವಿಸ್ತರಣೆಗೂ ಮುನ್ನ ದೆಹಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ. 

ಸವದಿ ದಿಢೀರ್ ದಿಲ್ಲಿ ಟೂರ್: ಸಂತೋಷ್ ಜೀ, ಜೋಷಿ ಭೇಟಿ, ಬಿಜೆಪಿಯಲ್ಲಿ ಸಮ್‌ಥಿಂಗ್..ಸಮ್‌ಥಿಂಗ್.

ಆಪ್ತರ ಪರ ರಮೇಶ್ ಬ್ಯಾಟಿಂಗ್
ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್‌ಗೆ ಸಚಿವ ಸ್ಥಾನ ಕೊಡಿಸಲು ರಮೇಶ್ ಜಾರಕಿಹೊಳಿ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ರಮೇಶ್ ಜಾರಕಿಹೊಳಿ, ಹೈಮಾಂಡ್ ಬಳಿ ಲಾಬಿ ಮಾಡಲು ದೆಹಲಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.