ಸವದಿ ದಿಢೀರ್ ದಿಲ್ಲಿ ಟೂರ್: ಸಂತೋಷ್ ಜೀ, ಜೋಷಿ ಭೇಟಿ, ಬಿಜೆಪಿಯಲ್ಲಿ ಸಮ್‌ಥಿಂಗ್..ಸಮ್‌ಥಿಂಗ್...

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಮತ್ತೊಂದೆಡೆ ರಾಜ್ಯ ಬಿಜೆಪಿ ಸದ್ದಿಲ್ಲದೇ ರಾಜಕೀಯ ಆಟ ಶುರುವಾಗಿದೆ. 

Dycm Laxman Savadi Reacts On Delhi Trip During Karnataka Govt 1 Year Celebration

ಬೆಂಗಳೂರು, (ಜುಲೈ, 27) : ಬಿಎಸ್‌ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದು ಒಂದು ವರ್ಷದ ಸಂಭ್ರಮದಲ್ಲಿದ್ದಾರೆ. ಆದ್ರೆ, ಮತ್ತೊಂದೆಡೆ ರಾಜ್ಯ ಬಿಜೆಪಿಯಲ್ಲಿ ಏನೋ ಏನೋ ಆಗ್ತಿದೆ. ಯಾರಿಗೂ ಗೊತ್ತೇ ಆಗದೆ  ಏನೋ ಏನೋ ನಡೀತಿದೆ.

ಹೌದು... ಕಳೆದ ಒಂದು ವಾರದಿಂದ ರಾಜ್ಯ ಬಿಜೆಪಿಯಲ್ಲಿ ಸದ್ದಿಲ್ಲದೇ ಏನೋ ನಡೆಯುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲವನ್ನುಂಟು ಮಾಡಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಸಚಿವರಿಂದ ನಾಯಕರೊಂದಿಗಿನ ಭೇಟಿ ರಾಜ್ಯ ಬಿಜೆಪಿಯಲ್ಲಿ ಮಾತ್ರವಲ್ಲ, ಇತರ ಪಕ್ಷಗಳ ಮುಖಂಡರಲ್ಲಿಯೂ ಕುತೂಹಲ ಮೂಡಿಸಿದೆ.

ರಮೇಶ ಜಾರಕಿಹೊಳಿ ನಿವಾಸದಲ್ಲಿ ಮಹತ್ವದ ಸಭೆ: ವಿಶ್ವನಾಥ್‌, ಯೋಗೇಶ್ವರ್‌ ಸಚಿವ ಸ್ಥಾನದ ಬಗ್ಗೆ ಚರ್ಚೆ

ಏಕಾಏಕಿ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜ್ಯ ಬಿಜೆಪಿ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಅದೂ ಹೊಸದಾಗಿ ಬಿಜೆಪಿ ಸೇರಿರುವ ರಮೇಶ್ ಜಾರಕಿಹೊಳಿ ಟೀಂ ಭೇಟಿ ಮಾಡಿರುವುದು ಚರ್ಚೆ ಹುಟ್ಟುಹಾಕಿದೆ.

ದೆಹಲಿಯಲ್ಲಿ ಲಕ್ಷ್ಮಣ ಸವದಿ

Dycm Laxman Savadi Reacts On Delhi Trip During Karnataka Govt 1 Year Celebration
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಏಕಾಏಕಿ ರಾಜ್ಯಪಾಲರನ್ನ ಭೇಟಿ ಮಾಡಿ ಬಳಿಕ ದೆಹಲಿ ವಿಮಾನ ಏರಿದ್ದಾರೆ. ಈ ಹಿನ್ನೆಲೆಯಲ್ಲಿ ಸವದಿ ದೆಹಲಿ ಭೇಟಿ ಕುತೂಹಲ ಮೂಡಿಸಿದೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರನ್ನ ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ದೆಹಲಿಯಲ್ಲಿ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಲಕ್ಷ್ಮಣ ಸವದಿ, ಮೊನ್ನೆ ನಾನು ರಾಜ್ಯಪಾಲರನ್ನು ಭೇಟಿ ಮಾಡಿದ್ದು ನಿಜ. ಅವರ ಆರೋಗ್ಯ ವಿಚಾರಿಸಲು ಹೋಗಿದ್ದೆ ಎಂದು ಹೇಳಿದರು.

1 ವರ್ಷ ಪೂರೈಸಿದ ಬೆನ್ನಲ್ಲೇ ಸಂಪುಟಕ್ಕೆ ಸಣ್ಣ ಸರ್ಜರಿ: ಮೂರ್ನಾಲ್ಕು ಸಚಿವರಿಗೆ ಕೊಕ್..?

ನಾನು ದೆಹಲಿಗೆ ಬರುವುದಕ್ಕೆ ಮುಂಚೆ ಸಿಎಂ ಒಪ್ಪಿಗೆ ಪಡೆದುಕೊಂಡು ಬಂದಿದ್ದೇನೆ. ನಾನು ದೆಹಲಿಗೆ ಬಂದಾಗ ಸಂತೋಷ್ ಜೀ, ಪ್ರಹ್ಲಾದ ಜೋಷಿ, ಸದಾನಂದಗೌಡರನ್ನು ಭೇಟಿ ಮಾಡಿದ್ದೇನೆ ಮತ್ತು ಯಾವಾಗ ಬಂದ್ರೂ ಬೇಟಿ ಮಾಡ್ತಿನಿ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಬಿಜೆಪಿಯಲ್ಲಿ ಸಮ್‌ಥಿಂಗ್... ಸಮ್‌ಥಿಂಗ್...
ಯೆಸ್....ಕರ್ನಾಟಕ ಬಿಜೆಪಿ ಸದ್ಯದ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸಿದಂತೆ  ಏನೋ ಸಮ್‌ಥಿಂಗ್... ಸಮ್‌ಥಿಂಗ್...ನಡೆದಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೊಸದಾಗಿ ಬಿಜೆಪಿ ಸೇರಿರುವ ರಮೇಶ್ ಜಾರಕಿಹೊಳಿ ಟೀಂ ಭೇಟಿ ಮಾಡಿರುವುದು ನೋಡಿದ್ರೆ, ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಭಾರೀ ಬದಲವಾಣೆಯ ಗಾಳಿ ಬೀಸುವ ಮುನ್ಸೂಚನೆಯಾಗಿದೆ. 

ಒಟ್ಟಿನಲ್ಲಿ ಕರ್ನಾಟಕ ಬಿಜೆಪಿ ಕಳೆದ ವಾರದಿಂದ ಸಮ್‌ಥಿಂಗ್... ಸಮ್‌ಥಿಂಗ್...ನಡೆದಂತೂ ನಿಜ. 

Latest Videos
Follow Us:
Download App:
  • android
  • ios