ಮತ್ತೆ ಮುನ್ನಲೆಗೆ ಬಂದ ಜಾರಕಿಹೊಳಿ ಸಿಡಿ ಪ್ರಕರಣ: ಡಿಕೆಶಿ ಬ್ಲಾಕ್‌ಮೇಲ್ ಮಾಡಿದ್ರೆ ಸಿಬಿಐಗೆ ವಹಿಸಲಿ - ಚನ್ನರಾಜ್ ಸವಾಲು!

ಸಿಡಿ ಬಿಡುಗಡೆ ಮಾಡ್ತೀನಿ ಅಂತಾ ಡಿಕೆ ಶಿವಕುಮಾರ(DK Shivakumar) ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂಬ ರಮೇಶ್ ಜಾರಕಿಹೊಳಿ(Ramesh jarkiholi) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ಧ ವಿಧಾನಪರಿಷತ್ ಸದಸ್ಯ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕ(Lakshmi hebbalkar MLA)ರ ಸಹೋದರ ಚನ್ನರಾಜ್ ಹಟ್ಟಿಹೊಳಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

Ramesh jarkiholi sex CD case channaraj hattiholi outraged against ramesh jarkiholi statement at belgum rav

ಬೆಳಗಾವಿ (ಮೇ.10) : ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿದರೂ ಬೆಳಗಾವಿಯಲ್ಲಿ ರಾಜಕೀಯ ನಾಯಕರ ವಾಗ್ಯುದ್ಧ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ.

ಸಿಡಿ ಬಿಡುಗಡೆ ಮಾಡ್ತೀನಿ ಅಂತಾ ಡಿಕೆ ಶಿವಕುಮಾರ(DK Shivakumar) ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂಬ ರಮೇಶ್ ಜಾರಕಿಹೊಳಿ(Ramesh jarkiholi) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ಧ ವಿಧಾನಪರಿಷತ್ ಸದಸ್ಯ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕ(Lakshmi hebbalkar MLA)ರ ಸಹೋದರ ಚನ್ನರಾಜ್ ಹಟ್ಟಿಹೊಳಿ(Channaraj hattiholi) ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇಂದು ಮತದಾನ ಅವಧಿ ಮುಕ್ತಾಯ ಆಗುತ್ತಿದ್ದಂತೆ ಸುದ್ದಿಗೋಷ್ಠಿ ಕರೆದ ಚನ್ನರಾಜ ಹಟ್ಟಿಹೊಳಿ ಅವರು, ಇಂದು ಶಾಂತಿಯುತವಾಗಿ ಎಲ್ಲರೂ ಮತದಾನ ಮಾಡಿದ್ದಾರೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಎಲ್ಲಾ ರಾಜಕಾರಣಿಗಳು ಈಗ ರಿಲ್ಯಾಕ್ಸ್ ಮೂಡ್ ನಲ್ಲಿ ಇರ್ತಾರೆ. ಆದರೆ ರಮೇಶ್ ಜಾರಕಿಹೊಳಿ ಉದ್ಧಟತನದ ಮಾತುಗಳನ್ನಾಡಿದ್ದಾರೆ. ಕೆಲವು ಬಾರಿ ನಮ್ಮ ತಾಳ್ಮೆ ಮುಗಿದು ಹೋದಾಗ ಕೆಲವು ಉತ್ತರ ಕೊಡಬೇಕಾಗುತ್ತದೆ. ಅದಕ್ಕೆ  ಕೆಲವು ಪ್ರಶ್ನೆ ಕೇಳಬೇಕು ಅಂತ ಈಗ ಬಂದಿದ್ದೇನೆ ಎಂದು ವಾಗ್ದಾಳಿ ನಡೆಸಿದರು.

 

Karnataka Election 2023: ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಲಖನ್‌ ಜಾರಕಿಹೊಳಿ

ರಮೇಶ್ ಜಾರಕಿಹೊಳಿಗೆ ತಲೆ ಕೆಟ್ಟಿದೆ :

ಈ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪರವಾಗಿದ್ದು, ಅಥಣಿ,ಕಾಗವಾಡ, ಗ್ರಾಮೀಣ ಗೋಕಾಕನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ. ಇದೇ ಕಾರಣಕ್ಕೆ ಹುಚ್ಚು ಹಿಡಿದವರ ರೀತಿ ‌ಇಂದು ಪ್ರೆಸ್‌ಮೀಟ್ ಮಾಡಿದ್ದಾರೆ ಎಂದು ಕಿಡಿಕಾರಿದರು. ಮುಂದುವರಿದು, 'ರಾತ್ರಿ ಡಿಕೆಶಿ ಕಾಲ್ ಮಾಡಿದ್ದಾರೆ ಅಂತ ನೀವು ಹೇಳಿದ್ದೀರಿ. ಯಾವಾಗ ಕಾಲ್ ಬಂತು ಅದರ ಸಾಕ್ಷ್ಯಗಳನ್ನು ಒದಗಿಸಿ. ಕಾಲ್ ರೆಕಾರ್ಡ್, ಸ್ಕ್ರೀನ್ ಶಾಟ್ ಮಾಧ್ಯಮಗಳಿಗೆ ಬಿಡುಗಡೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.

ಡಿಕೆಶಿ ಕಾಲ್‌ ಮಾಡಿದ್ದರೆ, ಪಿಎಗಳಿಂದ ಫೋನ್ ಮಾಡಿಸಿದ್ದರೆ ಅದನ್ನೂ ಸಹ ಬಿಡುಗಡೆ ಮಾಡಲಿ. ಇಲ್ಲವಾದರೆ ಡಿಕೆ ಶಿವಕುಮಾರ ಹಾಗೂ ರಾಜ್ಯದ ಜನರ ಬಳಿ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಕ್ಷಮೆ ಕೇಳಲಿ. ಚಾಮುಂಡೇಶ್ವರಿ ದೇವಿ ಆಣೆ ಮಾಡಿ ಸಿಡಿಯಲ್ಲಿ ನಾನಿಲ್ಲ ಅಂದಿದ್ದ. ಕೆಲ ದಿನಗಳ ಬಳಿಕ ಅ ಸಿಡಿಯಲ್ಲಿ ಇರೋದು ನಾನೇ ಅಂತ ಒಪ್ಪಿಕೊಂಡ ಮಹಾನುಭಾವ ಈತ ಎಂದು ವಾಗ್ದಾಳಿ ನಡೆಸಿದರು.

ಡಿಕೆಶಿ ಬ್ಲಾಕ್‌ಮೇಲ್ ಮಾಡಿದರೆ ಸಿಬಿಐಗೆ ವಹಿಸಿ:

ಬೇರೆಯವರ ಸಿಡಿ ಇಟ್ಟುಕೊಂಡು ಡಿಕೆಶಿ ಬ್ಲಾಕ್ ಮೇಲ್ ಮಾಡ್ತಿದ್ದಾರೆ ಎಂದು ಆರೋಪಿಸುವ ಬದಲು ಈ ಪ್ರಕರಣ ಸಿಬಿಐಗೆ ವಹಿಸಬೇಕು  ಸಿಬಿಐ, ಐಟಿ, ಇಡಿ ಇವೆಲ್ಲವೂ ಸಹ ಅವರ ಕೈಗೊಂಬೆಯಾಗಿವೆ. ಹೀಗಿರುವಾಗ ವೃಥಾ ಆರೋಪ ಮಾಡುವ ಬದಲು ಪ್ರಕರಣ ಸಿಬಿಐಗೆ ವಹಿಸಲಿ ಆದರೆ ಉದ್ಧಟತನದ ಹೇಳಿಕೆ ನೀಡಿದರೆ ನಾವು ಸಹಿಸಲ್ಲ ಎಂದು ಜಾರಕಿಹೊಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿವರೆಗೆ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಗಳಿಗೆ ನಾವು ಉತ್ತರ ಕೊಟ್ಟಿರಲಿಲ್ಲ. ಆದರೆ ಉದ್ಧಟತನ ಇನ್ನೂ ಸಹಿಸಿಕೊಳ್ಳುವುದಿಲ್ಲ. ಸ್ಪಷ್ಟವಾಗಿ ಹೇಳಿಬಿಡಿ ಯಾರು ಕಾಲ್ ಮಾಡಿದ್ರು? ಏರುದನಿಯಲ್ಲಿ ಪ್ರಶ್ನಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಗೆಲುವು ನಿಶ್ಚಿತ:

ಈ ಚುನಾವಣೆಯಲ್ಲಿ ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಬೆಳಗಾವಿ ಗ್ರಾಮೀಣ ಕ್ಷೇತ್ರ(Belgum assembly constituency)ದಲ್ಲಿ ಲಕ್ಷ್ಮೀ ಹೆಬ್ಬಾಳಕರ್(Lakshmi hebbalkar) ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರಮೇಶ್ ಜಾರಕಿಹೊಳಿ ಮಾಡಿರುವಆರೋಪ ಕುತಂತ್ರಗಳಿಗೆ ಜನ ಉತ್ತರ ಕೊಡ್ತಾರೆ ಎಂದರು. 

ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ: ಬಾಲಚಂದ್ರ ಜಾರಕಿಹೊಳಿ

ಜಾರಕಿಹೊಳಿ ಹೇಳುವ ವಿಷಕನ್ಯೆ ಯಾರು?

ರಮೇಶ್ ಜಾರಕಿಹೊಳಿ ಹೇಳುತ್ತಿರುವ ವಿಷಕನ್ಯೆ ಯಾರು ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚನ್ನರಾಜ್, ಅವನ ತಲೆ ಕೆಟ್ಟಿದೆ. ಸಾರ್ವಜನಿಕ ವಲಯದಲ್ಲಿ ನಾವು ಇದ್ದೇವೆ. ನಮ್ಮ ಡಿಕ್ಷನರಿಯಲ್ಲೂ ಸಹ ಪದಗಳಿವೆ. ಇಂತಹ ನಾಲಾಯಕರಿಗೆ ಅವರ ಭಾಷೆಯಲ್ಲಿಯೇ ಉತ್ತರ ಕೊಡಬೇಕಾಗುತ್ತೆ. ಇವನ ಮಂಚದಾಟದಲ್ಲಿ ಕರ್ನಾಟಕ ರಾಜ್ಯ, ಬೆಳಗಾವಿ ಜಿಲ್ಲೆಯ ಮಾನ ಕಳೆದಿದ್ದಾನೆ. ರಾಜ್ಯದ ಜನರ ಮುಂದೆ ಕಾಮಪುರಾಣ ಬಂದಾಗ ಮಾಧ್ಯಮದ ಮುಂದೆ ಯಾವ ಮುಖ ಇಟ್ಕೊಂಡ ಬರ್ತಿರಿ? ಜಾರಕಿಹೊಳಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios