Asianet Suvarna News Asianet Suvarna News

Karnataka Election 2023: ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಲಖನ್‌ ಜಾರಕಿಹೊಳಿ

ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಸಿಬಿಐ ತನಿಖೆಯಾಗಬೇಕು ಎಂದು ಹೇಳಿದ್ದೆ. ರಮೇಶ ಜಾರಕಿಹೊಳಿ ಹೆದರುವ ವ್ಯಕ್ತಿಯಲ್ಲ. ಅವರು ಗಟ್ಟಿತನದ ವ್ಯಕ್ತಿ. ಮುಗ್ದ ಜನರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಹೀಗಾಗಿ ಸಿಬಿಐಗೆ ವಹಿಸಬೇಕಿದೆ ಎಂದು ವಿಪ ಸದಸ್ಯ ಲಖನ್‌ ಜಾರಕಿಹೊಳಿ ಆಗ್ರಹಿಸಿದರು.

Karnataka Election 2023 CD case handed over to CBI for investigation Says Lakhan Jarkiholi gvd
Author
First Published May 10, 2023, 8:51 PM IST

ಗೋಕಾಕ (ಮೇ.10): ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಸಿಬಿಐ ತನಿಖೆಯಾಗಬೇಕು ಎಂದು ಹೇಳಿದ್ದೆ. ರಮೇಶ ಜಾರಕಿಹೊಳಿ ಹೆದರುವ ವ್ಯಕ್ತಿಯಲ್ಲ. ಅವರು ಗಟ್ಟಿತನದ ವ್ಯಕ್ತಿ. ಮುಗ್ದ ಜನರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಹೀಗಾಗಿ ಸಿಬಿಐಗೆ ವಹಿಸಬೇಕಿದೆ ಎಂದು ವಿಪ ಸದಸ್ಯ ಲಖನ್‌ ಜಾರಕಿಹೊಳಿ ಆಗ್ರಹಿಸಿದರು.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ನಂ.3 ಮತಗಟ್ಟೆಸಂಖ್ಯೆ 131ರಲ್ಲಿ ಬುಧವಾರ ತಮ್ಮ ಮತ ಚಲಾಯಿಸಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರನ್ನು ಕಾಂಪ್ರೂಮೈಸ್‌ ಮಾಡಿಸಲು ಈ ರೀತಿ ಮಾಡಲಾಗುತ್ತಿದೆ. ವಿಷಕನ್ಯೆ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ತಿಳಿಯಲಿದೆ. ಸಿಡಿಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಲಾಗುತ್ತಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ: ಬಾಲಚಂದ್ರ ಜಾರಕಿಹೊಳಿ

ಗೋಕಾಕ ಮತಕ್ಷೇತ್ರದ ಜನತೆಯ ಆಶೀರ್ವಾದದಿಂದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಚುನಾವಣೆಯಲ್ಲಿ ವಿರೋಧ ಪಕ್ಷದ ಅನೇಕ ನಾಯಕರು ಭಾಷಣ ಮಾಡಿ ಹೋದರು. ಅವರೆಲ್ಲ ನಮಗೆ ದೂರ ಕಾ ರೀಷ್ತೆದಾರ (ದೂರದ ಸಂಬಂಧಿ) ಅಂತ ಹಾಸ್ಯ ಚಟಾಕಿ ಹಾರಿಸಿದರು.

ರಮೇಶ ಜಾರಕಿಹೊಳಿ ಪಕ್ಷ ನಿಷ್ಠರು, ಅವರು ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಶ್ರಮಿಸಿದ್ದಾರೆ. ನಾನು ಪಕ್ಷೇತರನಾಗಿ ಆಯ್ಕೆಯಾಗಿದ್ದು, ನಾನು ಪಕ್ಷೇತರನಾಗಿಯೇ ಇರುತ್ತೇನೆ. ರಮೇಶ ಜಾರಕಿಹೊಳಿ ಬಿಜೆಪಿಯಲ್ಲೇ ಇರುತ್ತಾರೆ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ್ದೇನೆ. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ 120 ಸ್ಥಾನಗಳಲ್ಲಿ ಗೆಲ್ಲಲಿದೆ. ಅಲ್ಲದೇ ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾದ 20 ಜನ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಆಗಮಿಸಲಿದ್ದಾರೆ ಎಂದು ಬಾಂಬ್‌ ಸಿಡಿಸಿದರು.

Karnataka Election 2023: ಮತದಾರರನ್ನು ಸೆಳೆಯಲು ಮತಗಟ್ಟೆಯಲ್ಲಿ ಧಾರವಾಡ ಪೇಡೆ ವಿಶೇಷ!

ಹೆಬ್ಬಾಳಕರ ಬಂದಾಗ ಸರ್ಕಾರ ಹೊಯ್ತು, ಕೊರೋನಾ ಬಂತು. ಇನ್ನೇನು ಸಚಿವೆಯಾಗುತ್ತಾರೆ. ಬೆಳಗಾವಿ ಗ್ರಾಮೀಣ ಮತ್ತು ಕನಕಪುರ ಗೆದ್ದರೆ ಡಿಕೆಶಿಗೆ ರಾಜ್ಯ ಗೆದ್ದಂತೆ. ಹೀಗಾಗಿ ಇನ್ನುಳಿದ ಕ್ಷೇತ್ರಗಳ ಬಗ್ಗೆ ಅವರು ತೆಲೆಕೆಡಿಸಿಕೊಳ್ಳಲ್ಲ.
-ಲಖನ್‌ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯರು.

Follow Us:
Download App:
  • android
  • ios