ಜಾರಕಿಹೊಳಿ ಸಾಹುಕಾರರು ಏನೇ ಮಾಡಿದರೂ ಅದು ಸುದ್ದಿ ಆಗುತ್ತದೆ. ಇತ್ತ ದಿಲ್ಲಿಯಲ್ಲಿ ಯಡಿಯೂರಪ್ಪ ಸಂಪುಟ ವಿಸ್ತರಣೆಗಾಗಿ ಬಂದಿರುವಾಗ ಅತ್ತ ಮುಂಬೈನಲ್ಲಿ ಜಾರಕಿಹೊಳಿ ಅವರು ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿ ಮಾಡಿದ್ದಾರೆ. 

ನವದೆಹಲಿ (ಸೆ. 18): ಜಾರಕಿಹೊಳಿ ಸಾಹುಕಾರರು ಏನೇ ಮಾಡಿದರೂ ಅದು ಸುದ್ದಿ ಆಗುತ್ತದೆ. ಇತ್ತ ದಿಲ್ಲಿಯಲ್ಲಿ ಯಡಿಯೂರಪ್ಪ ಸಂಪುಟ ವಿಸ್ತರಣೆಗಾಗಿ ಬಂದಿರುವಾಗ ಅತ್ತ ಮುಂಬೈನಲ್ಲಿ ಜಾರಕಿಹೊಳಿ ಅವರು ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿ ಮಾಡಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆಗಾಗಿ ಹೋಗಿದ್ರಾ ಎಂದು ಕೇಳಿದರೆ ರಮೇಶ್‌, ‘ಇಲ್ರಿ.. ನಾನು ಡೆಪ್ಯೂಟಿ ಸಿಎಂ ಎಂದೂ ಕೇಳಿಯೇ ಇಲ್ಲ. ದೇವೇಂದ್ರಜೀ ನಮಗೆ ಬಹಳ ಆತ್ಮೀಯರು, ಹಾಗಾಗಿ ಭೇಟಿ ಆಗಿದ್ದೆ’ ಎನ್ನುತ್ತಾರೆ. ಕಳೆದ ತಿಂಗಳು ಪ್ರಹ್ಲಾದ್‌ ಜೋಶಿ ಅವರನ್ನು ಬೆಂಗಳೂರಿನ ಮನೆಗೆ ಕರೆದುಕೊಂಡು ಹೋಗಿದ್ದ ಜಾರಕಿಹೊಳಿ ಏನೋ ಆಗುತ್ತಿದೆ ಎಂಬ ಸುದ್ದಿಗೆ ಕಾರಣರಾಗಿದ್ದರು. ಕುಮಾರಸ್ವಾಮಿ, ರೆಡ್ಡಿ, ಜಾರಕಿಹೊಳಿ ಕುಟುಂಬಗಳು ಏನೇ ಮಾಡಿದರೂ ಸಂಚಲನ ಮಾತ್ರ ಪಕ್ಕಾ ನೋಡಿ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ