ಪ್ರಶಾಂತ್ ನಾತು, ಇಂಡಿಯಾ ಗೇಟ್

ನವದೆಹಲಿ(ಅ.10): ಕೇಂದ್ರ ಕ್ಯಾಬಿನೆಟ್ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಪ್ರಧಾನಿ ಮೋದಿ ಕ್ಯಾಬಿನೆಟ್ ನಲ್ಲಿ ರಿಪಬ್ಲಿಕನ್ ಪಾರ್ಟಿಯ ರಾಮದಾಸ್ ಅಠಾವಳೆ ಒಬ್ಬರೇ ಬಿಜೆಪಿಯೇತರ ಮಂತ್ರಿ. ಹೆಸರಿಗೆ ಎನ್ ಡಿ ಎ ಸರ್ಕಾರ ಆದರೂ ಕೂಡ ಮೋದಿ ಅವರದು ಪೂರ್ತಿ ಬಿಜೆಪಿ ಮಯ ಕ್ಯಾಬಿನೆಟ್ ರೀತಿ ಆಗಿದೆ.

ಕೇಂದ್ರ ಸಂಪುಟದಲ್ಲೀಗ ಏಕೈಕ ಎನ್‌ಡಿಎ ಮಂತ್ರಿ!

2014 ರಲ್ಲಿ ಮೋದಿ ಮೊದಲ ಬಾರಿಗೆ ಸಂಪುಟ ರಚನೆ ಮಾಡಿದಾಗ ಸಂಪುಟದಲ್ಲಿ ತೆಲಗು ದೇಶ0 ಶಿವಸೇನೆ ಅಕಾಲಿ ದಳ ಅಪ್ಣಾ ದಳ ಲೋಕಜನ ಶಕ್ತಿ ಪಕ್ಷ ಮತ್ತು ಉಪೇಂದ್ರ ಕುಶ್ವಾಹ್ ಅವರ ಪಕ್ಷಗಳ ಪ್ರಾತಿನಿಧ್ಯ ಇತ್ತು.ಆದರೆ 2018 ರ ಹೊತ್ತಿಗೆ ಆಂಧ್ರ ಚುನಾವಣೆ ಹೊತ್ತಿಗೆ ಚಂದ್ರ ಬಾಬು ನಾಯಿಡು ಎನ್ ಡಿ ಎ ದಿಂದ ಹೊರಬಿದ್ದಾಗ ಕ್ಯಾಬಿನೆಟ್ ಸಚಿವರಾಗಿದ್ದ ಅಶೋಕ ಗಜಪತಿ ರಾಜು ಕ್ಯಾಬಿನೆಟ್ ನಿಂದ ಹೊರಬಿದ್ದರು.2019 ರ ಅಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿ ಮೈತ್ರಿ ಮುರಿದು ಬಿದ್ದ ನಂತರ ಶಿವಸೇನೆಯ ಅರವಿಂದ್ ಸಾವಂತ್ ಕ್ಯಾಬಿನೆಟ್ ನಿಂದ ಹೊರಗೆ ಹೋದರು.ಅಪ್ಣಾ ದಳದ ಅನುಪ್ರಿಯಾ ಪಟೇಲ್ ರನ್ನು ಮೋದಿ ಅವರೇ ಸಂಪುಟಕ್ಕೆ ತೆಗೆದುಕೊಳ್ಳಲಿಲ್ಲ ಜೊತೆಗೆ ಬಿಹಾರದಲ್ಲಿ ಬಿಜೆಪಿ ಜೊತೆಗೆ ನಿತೀಶ್ ಬಂದಿದ್ದರಿಂದ ಉಪೇಂದ್ರ ಕುಶ್ವಾಹ್ ಮಂತ್ರಿ ಮಂಡಲ ದಿಂದ ಹೊರಗಡೆ ಹೋಗಿ ಲಾಲು ಜೊತೆ ಸೇರಿಕೊಂಡರು.ಜೆ ಡಿ ಯು ದಿಂದ ಯಾರು ಕೂಡ ಮಂತ್ರಿ ಮಂಡಲದಲ್ಲಿ ಸೇರ್ಪಡೆ ಆಗಲು ನಿತೀಶ್ ಕುಮಾರ ಒಪ್ಪಿಲ್ಲ.

ಬಿಹಾರ ಚುನಾವಣಾ ಕಣದಲ್ಲಿ ಬಿಗ್ ಟ್ವಿಸ್ಟ್, ಬಂಡೆದ್ದ ಚಿರಾಗ್‌ಗೆ ಮುಖಭಂಗ!

ಇನ್ನು ಕಳೆದ ತಿಂಗಳು ಅಕಾಲಿ ದಳದ ಹರ್ ಸಿಮ್ರಾಟ್ ಕೌರ್ ಬಾದಲ್ ಕೃಷಿ ವಿಧೇಯಕ ವಿರೋಧಿಸಿ ಕ್ಯಾಬಿನೆಟ್ ನಿಂದ ಹೊರಗೆ ಹೋಗಿದ್ದು ಬಿಹಾರ ಚುನಾವಣೆಗೆ ಮೊದಲೇ ರಾಮ್ ವಿಲಾಸ್ ಪಾಸ್ವಾನ್ ನಿಧನರಾಗಿದ್ದಾರೆ.

ಇನ್ನು ಬಿಹಾರ ಚುನಾವಣೆ ಮುಗಿಯುವವರೆಗೆ ಮೋದಿ ಸಾಹೇಬರು ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳು ಕಡಿಮೆ.ಮೂಲಗಳು ಹೇಳುತ್ತಿರುವ ಪ್ರಕಾರ ನವೆಂಬರ್ ನಲ್ಲಿ ಜಗನ್ ರೆಡ್ಡಿ ಅವರ ವೈ ಎಸ್ ಆರ್ ಪಕ್ಷದಿಂದ ಒಬ್ಬರು ಮತ್ತು ಬಿಹಾರದ ಫಲಿತಾಂಶ ವ್ಯತಿರಿಕ್ತವಾಗಿ ಬಂದರೆ ಚಿರಾಗ್ ಪಾಸ್ವಾನ್ ಮೋದಿ ಸಂಪುಟದಲ್ಲಿ ಶಾಮೀಲಾಗ ಲಿದ್ದಾರೆ.