ನವದೆಹಲಿ(ಅ.10): ಎಲ್‌ಜೆಪಿ ಸಂಸ್ಥಾಪಕ, ಕೇಂದ್ರ ಸಚಿವ ರಾಮವಿಲಾಸ್‌ ಪಾಸ್ವಾಸ್‌ ಅವರ ನಿಧನದ ನಂತರ ಕೇಂದ್ರ ಸಂಪುಟದಲ್ಲಿ ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾ(ಆರ್‌ಪಿಐ)ದ ರಾಮದಾಸ್‌ ಅಠಾವಳೆ ಮಾತ್ರ ಎನ್‌ಡಿಎ ಮಿತ್ರಪಕ್ಷದ ಪ್ರತಿನಿಧಿಯಾಗಿ ಉಳಿದುಕೊಂಡಿದ್ದಾರೆ.

ಶಿವಸೇನೆ, ಅಕಾಲಿ ದಳ ಪ್ರತಿನಿಧಿಗಳು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪಾಸ್ವಾನ್‌, ಅಠಾವಳೆ ಮಾತ್ರ ಇದ್ದರು. ಇದೀಗ ಪಾಸ್ವಾನ್‌ ಕಾಲವಾಗಿದ್ದರಿಂದ ಅಠಾವಳೆ ಮಾತ್ರ ಏಕೈಕ ಎನ್‌ಡಿಎ ಮಂತ್ರಿಯಾಗಿ ಉಳಿದಂತಾಗಿದೆ.

ಬಿಹಾರ ಚುನಾವಣೆ ಹೊತ್ತಲ್ಲಿ ಪಾಸ್ವಾನ್ ನಿಧನ, ಏನಾಗುತ್ತದೆ ರಾಜಕಾರಣ!

2019ರಲ್ಲಿ ಅಧಿಕಾರಕ್ಕೆ ಬಂದ ಮೋದಿ 2.0 ಸರ್ಕಾರದಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಕೋಟಾದಿಂದ ಅರವಿಂದ ಸಾವಂತ್‌ (ಶಿವಸೇನೆ), ಹರ್‌ಸಿಮ್ರತ್‌ ಕೌರ್‌ ಬಾದಲ್‌(ಶಿರೋಮಣಿ ಅಕಾಲಿದಳ) ಮತ್ತು ರಾಮವಿಲಾಸ್‌ ಪಾಸ್ವಾನ್‌ (ಎಲ್‌ಜೆಪಿ) ಅವರು ಮಾತ್ರ ಎನ್‌ಡಿಎ ಸಂಪುಟದ ಪ್ರತಿನಿಧಿಗಳಾಗಿದ್ದರು.

2019ರಲ್ಲಿ ಶಿವಸೇನೆ ಮೈತ್ರಿಕೂಟದಿಂದ ಹೊರಬಂದರೆ, ಕೃಷಿ ಮಸೂದೆ ವಿರೋಧಿಸಿ ಇತ್ತೀಚೆಗೆ ಅಕಾಲಿದಳ ಎನ್‌ಡಿಎದಿಂದ ಹೊರಬಂದಿತ್ತು. ಹಾಗಾಗಿ ಪಾಸ್ವಾನ್‌ ಅವರ ನಿಧನದ ಬಳಿಕ ಸಾಮಾಜಿಕ ನ್ಯಾಯ ಮತ್ತು ಸಬ