Asianet Suvarna News Asianet Suvarna News

ಶಿರಹಟ್ಟಿ ಕಾಂಗ್ರೆಸ್ ಟಿಕೆಟ್ ಕೈತಪ್ಪುವ ಆತಂಕ, ಬೆಂಬಲಿಗರನ್ನ ಕಂಡು ದೊಡ್ಡಮನಿ ಕಣ್ಣೀರು

ಶಿರಹಟ್ಟಿ ಕಾಂಗ್ರೆಸ್ ಟಿಕೆಟ್ ಕೈತಪ್ಪುವ ಆತಂಕದ ಹಿನ್ನೆಲೆ ನಡೆಯುತ್ತಿರುವ ಬೆಂಬಲಿಗರ ಸಭೆಯಲ್ಲಿ ಬೆಂಬಲಿಗರನ್ನ ಕಂಡು ಮಾಜಿ‌ ಶಾಸಕ ರಾಮಕೃಷ್ಣ ದೊಡ್ಡಮನಿ ಕಣ್ಣೀರು ಹಾಕಿದ್ದಾರೆ.

Ramakrishna Doddamani  Worried about losing the Shirahatti Congress ticket gow
Author
First Published Apr 9, 2023, 12:54 PM IST

ಗದಗ (ಏ.9): ಶಿರಹಟ್ಟಿ ಕಾಂಗ್ರೆಸ್ ಟಿಕೆಟ್ ಕೈತಪ್ಪುವ ಆತಂಕದ ಹಿನ್ನೆಲೆ ನಡೆಯುತ್ತಿರುವ ಬೆಂಬಲಿಗರ ಸಭೆಯಲ್ಲಿ ಬೆಂಬಲಿಗರನ್ನ ಕಂಡು ಮಾಜಿ‌ ಶಾಸಕ ರಾಮಕೃಷ್ಣ ದೊಡ್ಡಮನಿ ಕಣ್ಣೀರು ಹಾಕಿದ್ದಾರೆ. ಶಿರಹಟ್ಟಿ ಪಟ್ಣದ ಹೊರವಲಯದಲ್ಲಿ ಬೆಂಬಲಿಗರ ಸಮಾವೇಶ ಹಮ್ಮಿಕೊಂಡಿದ್ದು, ಸಮಾವೇಶಕ್ಕೆ ಕಣ್ಣೀರು ಹಾಕುತ್ತ ದೊಡ್ಡಮನಿ ಆಗಮಿಸಿದ್ದಾರೆ. ಈ ಸಭೆಯಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಶಿರಹಟ್ಟಿಯಲ್ಲಿ ಸುಜಾತಾ ದೊಡ್ಡಮನಿ ಅವರಿಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರಾಮಕೃಷ್ಣ ದೊಡ್ಡಮನಿ ಬೆಂಬಲಿಗರಿಂದ ಸಮಾವೇಶ ನಡೆಯುತ್ತಿದೆ.

ಬೇಲೂರು ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಪೋಟ: 
ಹಾಸನ: ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಬೇಲೂರು ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.  ಟಿಕೆಟ್ ಆಕಾಂಕ್ಷಿಯಾಗಿದ್ದ ಗ್ರಾನೈಟ್ ರಾಜಶೇಖರ್ ಹಾಗೂ ವೈ.ಎನ್.ಕೃಷ್ಣೇಗೌಡ ಮಾಜಿ ಸಚಿವ ಬಿ. ಶಿವರಾಂಗೆ ಟಿಕೆಟ್ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಸಿಗದ ಕಾರಣ ಬೆಂಬಲಿಗರು, ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೂಡಲೇ ಬೇಲೂರು ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆ ಕರೆದು ಗ್ರಾನೈಟ್ ರಾಜಶೇಖರ್ ಅಥವಾ ನನಗೆ ಟಿಕೆಟ್ ನೀಡಬೇಕು. ಇಲ್ಲವಾದರೆ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಎಂದು  ವೈ.ಎನ್.ಕೃಷ್ಣೇಗೌಡ  ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.  ವೈ.ಎನ್.ಕೃಷ್ಣೇಗೌಡ, ದಿ.ಮಾಜಿ ಶಾಸಕ ವೈ.ಎನ್.ರುದ್ರೇಶ್‌ಗೌಡರ ಸಹೋದರನಾಗಿದ್ದಾರೆ. ಬಿ.ಶಿವರಾಂ ನಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಅವರ ಬೆಂಬಲಿಗರು ನಮ್ಮನ್ನು ಅವಮಾನಿಸಿದ್ದಾರೆ ಎಂದಿದ್ದಾರೆ. ಸಭೆಯಲ್ಲಿ ಬಹುತೇಕರು ಗ್ರಾನೈಟ್ ರಾಜಶೇಖರ್ ಅವರನ್ನು ಬಂಡಾಯವಾಗಿ ಸ್ಪರ್ಧಿಸುವಂತೆ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಅವರು ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ. ಇಲ್ಲವಾದಲ್ಲಿ ನಿಮ್ಮಲ್ಲೆರ ತೀರ್ಮಾನಕ್ಕೆ ನಾನು ಬದ್ದ ಎಂದ ಗ್ರಾನೈಟ್ ರಾಜಶೇಖರ್ ಹೇಳಿದ್ದಾರೆ.

ಮೊಳಕಾಲ್ಮೂರು ಟಿಕೆಟ್ ಸಿಕ್ಕದ್ದಕ್ಕೆ ಯೋಗೀಶ್ ಬಾಬು ರೆಬೆಲ್, ಇದು ಶೋಭೆ ತರಲ್ಲ ಎಂದ ಕೈ ಅಭ್ಯರ್ಥಿ

ಏಪ್ರಿಲ್‌ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್‌ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ.  ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಎಲೆಕ್ಷನ್‌ ಮೂಡ್‌ನಲ್ಲಿದ್ದ ರೌಡಿ ಶೀಟರ್‌ ಸೈಲೆಂಟ್‌ ಸುನೀಲ್‌ಗೆ ಕೇಸ್‌ ಜಡಿದು ಸ್ವಾಗತಿಸಿದ

Follow Us:
Download App:
  • android
  • ios