ಮೊಳಕಾಲ್ಮೂರು ಟಿಕೆಟ್ ಸಿಕ್ಕದ್ದಕ್ಕೆ ಯೋಗೀಶ್ ಬಾಬು ರೆಬೆಲ್, ಇದು ಶೋಭೆ ತರಲ್ಲ ಎಂದ ಕೈ ಅಭ್ಯರ್ಥಿ ಗೋಪಾಲಕೃಷ್ಣ!
ಕೂಡ್ಲಿಗಿ ಮಾಜಿ ಶಾಸಕ ಎನ್ ವೈ ಗೋಪಾಲಕೃಷ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಯೋಗೀಶ್ ಬಾಬು ರೆಬೆಲ್ ಆಗಿದ್ದಕ್ಕೆ ಈ ರೀತಿ ಮಾಡುವುದು ಶೋಭೆಯಲ್ಲ. ಬಾಬು ನನ್ನ ಕೈ ಕೆಳಗೆ ಬೆಳದ ಹುಡುಗ ರಾಜಕೀಯ ಗುರು ನಾನು ಎಂದಿದ್ದಾರೆ ಎನ್ ವೈ ಜಿ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಏ.8): ಕಾಂಗ್ರೆಸ್ ಎರಡನೇ ಪಟ್ಟಿ ರಿಲೀಸ್ ಆಗಿದ್ದೇ ತಡ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಕೂಡ್ಲಿಗಿ ಮಾಜಿ ಶಾಸಕ ಎನ್ ವೈ ಗೋಪಾಲಕೃಷ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಕ್ಕೆ ಸ್ಥಳೀಯ ಅಭ್ಯರ್ಥಿ ಆಗಿದ್ದ ಯೋಗೀಶ್ ಬಾಬು ಬೆಂಬಲಿಗರ ಸಭೆ ಕರೆದು ಮುಂದಿನ ತೀರ್ಮಾನ ಶೀಘ್ರದಲ್ಲಿಯೇ ಘೋಷಣೆ ಮಾಡ್ತೀನಿ ಎಂದು ತಿಳಿಸುವ ಮೂಲಕ ಎನ್ ವೈ ಜಿ ಗೆ ಟಾಂಗ್ ಕೊಟ್ಟಿದ್ದಾರೆ.
ಇನ್ನೂ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಎನ್ ವೈ ಜಿ ಗೆ ಘೋಷಣೆ ಆದ ಬೆನ್ನಲ್ಲೇ ಇಂದು ನಾಯಕನಹಟ್ಟಿ ಪುಣ್ಯ ಕ್ಷೇತ್ರ ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆಯುವ ಮೂಲಕ ತನ್ನ ನೂರಾರು ಅಭಿಮಾನಿಗಳೊಂದಿಗೆ ಅಧಿಕೃತ ಪ್ರಚಾರಕ್ಕೆ ಧುಮುಕಿದರು. ಈ ವೇಳೆ ಮಾದ್ಯಮಗಳಿಗೆ ಮಾತನಾಡಿದ ಅವರು, ಯೋಗೀಶ್ ಬಾಬು ಬಂಡಾಯದ ಬಿಸಿಗೆ, ಈಗ ಉರಿಯುತ್ತಿರುವ ಬೆಂಕಿ ಸ್ವಲ್ಪ ತಣ್ಣಗಾಗಲಿ. ಸುಡುವ ಕೊಬ್ಬರಿಯ ಬೆಂಕಿಯಲ್ಲಿ ಕೈ ಹಾಕಲು ಸಾಧ್ಯವಿಲ್ಲ. ತಣ್ಣಗಾದ ಮೇಲೆ ಪ್ರಸಾದಕ್ಕಾಗಿ ಕೊಬ್ಬರಿ ತಗೊತಿವಿ. ಟಿಕೆಟ್ ಕೈ ತಪ್ಪಿದಾಗ ಕಾರ್ಯಕರ್ತರಲ್ಲಿ ಅಸಮಾಧಾನ ಇದ್ದೇ ಇರುತ್ತೆ. ಟೈಂ ನೋಡಿಕೊಂಡು ಇವತ್ತೊ ನಾಳೆ ಬಾಬು ಮನೆಗೆ ಭೇಟಿ ಮಾಡ್ತಿನಿ. ಆ ಹುಡುಗ ನಮ್ಮೊಂದಿಗೆ ಬರ್ತಾನೆ, ಕಾರ್ಯಕರ್ತರೆಲ್ಲರು ನಮ್ಮವರು. ಏನು ತೊಂದರೆಯಾಗಲ್ಲ ಅನ್ನೋದು ನನ್ನ ಭಾವನೆ ಎಂದರು
ಬಾಬು ರೆಬಲ್ ಆಗಲ್ಲ, ನನ್ನೊಂದಿಗೆ ಬರುವ ಆಶಾಭಾವವಿದೆ. ಮುಂದಿನ ದಿನಗಳಲ್ಲಿ ಆ ಹುಡುಗನಿಗೂ ಅವಕಾಶ ಇರುತ್ತದೆ. ಇನ್ನು ಯುವಕನಿದ್ದಾನೆ, ನಮಗಾಗಿರುವ ವಯಸ್ಸಾಗಿಲ್ಲ ಸ್ವಲ್ಪ ತಾಳ್ಮೆ ಇರಬೇಕು. ನಾನು 35 ವರ್ಷಗಳ ಕಾಲ ಶಾಸಕ ಆಗಿದ್ದವನು. 2018 ರಲ್ಲಿ ಕಾಣದ ಕೈಗಳು ನನಗೆ ಟಿಕೆಟ್ ತಪ್ಪಿಸಿದ್ದವು.ಆಗ ನಾನು ನೇರವಾಗಿ ಮನೆಯಲ್ಲಿ ಕುಳಿತು ತೀರ್ಮಾನಿಸಿದೆ, ಈ ರೀತಿ ಮಾಡಲು ಹೋಗಲಿಲ್ಲ. ಭವಿಷ್ಯ ಇರುವ ರಾಜಕಾರಣಿಗಳು ಆತುರ ಮಾಡೋದು ಶೋಭೆಯಲ್ಲ ಎಂದು ಕಿಡಿಕಾರಿದರು. ಬಂಡಾಯಗಳು ಇಡೀ ಕರ್ನಾಟಕದಲ್ಲಿ ಎಲ್ಲಾ ಕಡೆ ಇದೆ. ಟಿಕೆಟ್ ತಪ್ಪಿದಾಗ ಮಾನಸಿಕ ತೊಳಲಾಟ ಸಹಜ. ಯೋಗೀಶ್ ಬಾಬು ನನ್ನ ಕೈನಲ್ಲಿ ಬೆಳೆದ ಹುಡುಗ ಬಾಬುಗೆ ರಾಜಕೀಯ ಗುರು ಎನಿಸಿದವನು ನಾನು. ಆಕಸ್ಮಿಕವಾಗಿ ನೋವು ತಂದಿದೆ, ಭಗವಂತ ಅವರಿಗೆ ಒಳ್ಳೆಯ ಬುದ್ದಿ ಕೊಡಲಿ.
ಎಲೆಕ್ಷನ್ ಮೂಡ್‌ನಲ್ಲಿದ್ದ ರೌಡಿ ಶೀಟರ್ ಸೈಲೆಂಟ್ ಸುನೀಲ್‌ಗೆ ಕೇಸ್ ಜಡಿದು ಸ್ವಾಗತಿಸಿದ
ಪಾರ್ಟಿಯಲ್ಲಿ ಮುಂದುವರೆದರೆ ಮುಂದಿನ ಭವಿಷ್ಯ ಚೆನ್ನಾಗಿರುತ್ತೆ. ಪಕ್ಷಾಂತರದಿಂದ ಪ್ರಪಂಚವೇ ಅಲ್ಲೋಲ ಕಲ್ಲೋಲ, ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಹೋಗ್ತಾರೆ, ಬಿಜೆಪಿಯಿಂದ ಕಾಂಗ್ರೆಸ್ ಗ ಬರ್ತಾರೆ. ಪಕ್ಷಾಂತರ ಪರ್ವ ಅನ್ನೋದು ಇಂದು ನಿನ್ನೆಯದಲ್ಲ ರಾಜಕಾರಣದ ಕೊನೆಯುಸಿರು ಇರೊವರೆಗೂ ಪಕ್ಷಾಂತರ ಪರ್ವ ಇರುತ್ತೆ ಎಂದು ತಿಳಿಸಿದರು.
ಪೊಲೀಸರಿಂದಲೇ ಆರೋಪಿ ಕಿಡ್ನಾಪ್, 40 ಲಕ್ಷಕ್ಕೆ ಡಿಮ್ಯಾಂಡ್: 17 ದಿನ ಕಳೆದ್ರೂ ಪತ್ತೆಯಾಗದ ಪಿಎಸ್ಐ ಮತ್ತು ಗ್ಯಾಂಗ್!
ಇನ್ನು ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.