Asianet Suvarna News Asianet Suvarna News

ಎಲೆಕ್ಷನ್‌ ಮೂಡ್‌ನಲ್ಲಿದ್ದ ರೌಡಿ ಶೀಟರ್‌ ಸೈಲೆಂಟ್‌ ಸುನೀಲ್‌ಗೆ ಕೇಸ್‌ ಜಡಿದು ಸ್ವಾಗತಿಸಿದ ಕರ್ನಾಟಕ ಪೊಲೀಸ್‌!

ಚುನಾವಣೆಗೆ ನಿಲ್ಲಲು ತಯಾರಿ ನಡೆಸಿದ್ದ ರೌಡಿ ಶೀಟರ್ , ಕುಖ್ಯಾತ ಪಾತಕಿ ಸೈಲೆಂಟ್‌ ಸುನೀಲ್‌ ಗೆ  ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸಿಆರ್ ಪಿ ಸಿ 110 ಅಡಿ ಕೇಸ್ ಜಡಿದಿದ್ದಾರೆ. 15 ಲಕ್ಷ ಬಾಂಡ್ ಬರೆಸಿಕೊಂಡಿದ್ದಾರೆ.

case against rowdy sheeter silent sunila who planning to contest election gow
Author
First Published Apr 8, 2023, 6:39 PM IST

ಬೆಂಗಳೂರು (ಏ.8): ಚುನಾವಣೆಗೆ ನಿಲ್ಲಲು ತಯಾರಿ ನಡೆಸಿದ್ದ ರೌಡಿ ಶೀಟರ್ , ಕುಖ್ಯಾತ ಪಾತಕಿ ಸೈಲೆಂಟ್‌ ಸುನೀಲ್‌ ಗೆ  ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸಿಆರ್ ಪಿ ಸಿ 110 ಅಡಿ ಕೇಸ್ ಜಡಿದಿದ್ದಾರೆ. ಅಮೃತಹಳ್ಳಿ ಪೊಲೀಸರು ಸೆಕ್ಷನ್ 110 ಅಡಿ  ಬೌಂಡ್ ಒವರ್ ಮಾಡಿ 15 ಲಕ್ಷ ಬಾಂಡ್ ಬರೆಸಿದ್ದಾರೆ. ಸೈಲೆಂಟ್ ಸುನೀಲ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದಾನೆ. ಈತ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ಗೆ ನಿಲ್ಲಲು ತಯಾರಿ ನಡೆಸಿದ್ದ. ಹೀಗಾಗಿ ಠಾಣೆಗೆ ಕರೆಸಿ ಸುನಿಲ್ ಗೆ ಎಚ್ಚರಿಕೆ ಕೊಟ್ಟ ಪೊಲೀಸರು,  ಚುನಾವಣೆ ಸಮಯದಲ್ಲಿ ಯಾವ ರೀತಿಯಲ್ಲಿ ಕಾನೂನು ಮೀರಿ ಕೆಲಸ ಮಾಡಬಾರದು ಎಂದು ಸಿಆರ್ ಪಿಸಿ110  ಅಡಿಯಲ್ಲಿ ಬೌಂಡ್ ಒವರ್ ಮಾಡಿ ಡಿಸಿಪಿ ಮುಂದೆ ಹಾಜರುಪಡಿಸಿದ್ದಾರೆ.  ಮಾತ್ರವಲ್ಲ  ಈಶಾನ್ಯ ವಿಭಾಗ ಡಿಸಿಪಿ  ಲಕ್ಷ್ಮೀ ಪ್ರಸಾದ್   ಈತನಿಗೆ ವಾರ್ನ್ ಮಾಡಿದ್ದಾರೆ. ಹದಿನೈದು ಲಕ್ಷ ಬಾಂಡ್ ಬರೆಸಿ ಅಪರಾಧ ಕೃತ್ಯ ಹಾಗು ರಾಜಕೀಯ ವಿಚಾರಕ್ಕೆ ಅಕ್ರಮವಾಗಿ ಎಂಟ್ರಿ ಆಗದಂತೆ ವಾರ್ನ್ ಮಾಡಿದ್ದಾರೆ.

ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿ ಭಾರೀ ಸುದ್ದಿಯಲ್ಲಿದ್ದ ಸುನೀಲ:
ಕಳೆದ ಮಾರ್ಚ್‌ ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸೈಲೆಂಟ್ ಸುನೀಲ ಭಾರೀ ಸುದ್ದಿಯಲ್ಲಿದ್ದ. ಬೆಂಗಳೂರಿನಲ್ಲಿ ಬಿಜೆಪಿ ಹಿರಿಯ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಹಾಗೂ ಬಿಜೆಪಿ ಸದಸ್ಯತ್ವ ಪಡೆದ ಬಗ್ಗೆ ಫೋಟೋ ವೈರಲ್‌ ಮಾಡಿಕೊಂಡಿದ್ದರಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸೈಲೆಂಟ್‌ ಸುನೀಲನಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಸದಸ್ಯತ್ವ ಹೊಂದಿದ್ದರೂ ಅದನ್ನು ರದ್ದುಗೊಳಿಸಲಾಗುವುದು ಎಂದು ಬಿಜೆಪಿ ಹೇಳಿತ್ತು.

ಬಿಜೆಪಿ ಸೇರಲು ಮುಂದಾಗಿದ್ದ ಹೆಚ್ ಎಂ ರೇವಣ್ಣ- ಡಿಕೆಶಿ ಭೇಟಿ, ಕಾಂಗ್ರೆಸ್ ಟಿಕೆಟ್ ನೀಡುವ

ಹಿಂದೊಮ್ಮೆ ಸೈಲೆಂಟ್‌ ಸುನೀಲ್‌ ಚಾಮರಾಜಪೇಟೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಶಾಸಕ ಉದಯ್‌ ಗರುಡಾಚಾರ್‌ ಸೇರಿದಂತೆ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. ಆ ವೇಳೆ ವಿವಾದ ತೀವ್ರವಾಗಿ ಕೊನೆಗೆ ಸೈಲೆಂಟ್‌ ಸುನೀಲ್‌ಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ವತಃ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ರಿಮಾರ್‌ ಕಟೀಲ್‌ ಅವರು ಕೂಡ ಸ್ಪಷ್ಟನೆ ನೀಡಿದ್ದರು.

ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಪತ್ನಿ ವಿರುದ್ದ FIR ದಾಖಲು!

ಇನ್ನು  ಏಪ್ರಿಲ್‌ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್‌ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios