Rajya Sabha Election: ಜೆಡಿಎಸ್‌ ಜತೆ ಖರ್ಗೆ ರಾಜ್ಯಸಭೆ ಸಂಧಾನ ಚರ್ಚೆ ನಡೆಸಿಲ್ಲ: ಡಿಕೆಶಿ

ರಾಜ್ಯಸಭೆ ಎರಡನೇ ಅಭ್ಯರ್ಥಿ ವಿಚಾರವಾಗಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯಾರೊಂದಿಗೂ ಸಂಧಾನ ಮಾತುಕತೆ ಮಾಡಿಲ್ಲ. ಅನಗತ್ಯವಾಗಿ ಅವರನ್ನು ಈ ವಿಚಾರದಲ್ಲಿ ಎಳೆದು ತರಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

rajya sabha election no discussion with mallikarjun kharge says dk shivakumar gvd

ಬೆಂಗಳೂರು (ಜೂ.06): ರಾಜ್ಯಸಭೆ ಎರಡನೇ ಅಭ್ಯರ್ಥಿ ವಿಚಾರವಾಗಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯಾರೊಂದಿಗೂ ಸಂಧಾನ ಮಾತುಕತೆ ಮಾಡಿಲ್ಲ. ಅನಗತ್ಯವಾಗಿ ಅವರನ್ನು ಈ ವಿಚಾರದಲ್ಲಿ ಎಳೆದು ತರಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಅಭ್ಯರ್ಥಿ ಸ್ಪರ್ಧೆ ಸಾಮೂಹಿಕ ನಿರ್ಧಾರವಾಗಿದೆ. ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಗುರಿ ಎಂದರು. ನಾವು ಆತ್ಮಸಾಕ್ಷಿ ಮತ ಹಾಗೂ ಜಾತ್ಯತೀತ ಭಾವನೆ ಹೊಂದಿರುವವರು ನಮಗೆ ಮತ ನೀಡಬೇಕು ಎಂದು ಕೇಳಿದ್ದೇವೆ. 

ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ ಹರಿಪ್ರಸಾದ್‌ ಹಾಗೂ ರಾಷ್ಟ್ರ ನಾಯಕರು ಸೇರಿ ಪಕ್ಷದಿಂದ 2ನೇ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದೆವು. ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್‌ ಜತೆ ಸಂಧಾನ ಸಭೆ ನಡೆಸಿದ್ದಾರೆ ಎಂಬುದು ಸುಳ್ಳು. ಅವರು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಪಕ್ಷ ಏನು ಹೇಳಿದೆಯೋ ಅದನ್ನು ನಾವೆಲ್ಲರೂ ಒಟ್ಟಾಗಿ ಪಾಲಿಸುತ್ತಿದ್ದೇವೆ. ಅವರನ್ನು ಅನಗತ್ಯವಾಗಿ ಈ ವಿಚಾರದಲ್ಲಿ ಎಳೆದು ತರಬಾರದು ಎಂದು ಸ್ಪಷ್ಟಪಡಿಸಿದರು. ನಮ್ಮ ಗೌರವ ನಾವು ಉಳಿಸಿಕೊಳ್ಳಬೇಕು. ಯಾರು ಏನೇನು ಹೇಳಿದ್ದಾರೆ ಎಂಬುದನ್ನು ಮಾಧ್ಯಮಗಳು ಬಿತ್ತರಿಸಿವೆ. ಯಾರು ಯಾವ ಭಾಷೆ ಬಳಸಿದ್ದಾರೆ ಎಂಬುದನ್ನೂ ಜನ ನೋಡಿದ್ದಾರೆ. ನಾವು ಯಾರ ಹೆಸರನ್ನೂ ಹೇಳುವುದಿಲ್ಲ ಎಂದರು.

ಅಂಬೆಡ್ಕರ್‌ರನ್ನು ಕಡೆಗಣಿಸಿ BJP ಸರಕಾರ ವಿಕೃತಿ ಮೆರೆದಿದೆ; DK Shivakumar

ಸಿದ್ದರಾಮಯ್ಯ, ಡಿಕೆಶಿಗೆ ಮುಜುಗರ ತಪ್ಪಿಸಲು ರಾಜೀನಾಮೆ: ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ವಿಧಾನಪರಿಷತ್ತಿನ ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿರುವ ಎನ್‌.ವಿ.ಬನ್ನೂರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರಿಗೆ ಮುಜುಗರ ತರಬಾರದು ಎನ್ನುವ ಉದ್ದೇಶದಿಂದ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಜೂ. 13 ರಂದು ನಡೆಯುವ ವಾಯವ್ಯ ಶಿಕ್ಷಕರ ಮತಕ್ಷೆತ್ರದ ಚುನಾವಣೆಗೆ ನಾನು ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವೆ. ಈ ಬಾರಿ ಅನುಕಂಪ ಹಾಗೂ ಹೋರಾಟಗಾರ ಎಂಬ ಕಾರಣಕ್ಕೆ ನನ್ನ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Karnataka Politics: ದೇವೇಗೌಡ ಬಿಟ್ಟ ದಾಳದಿಂದ ಸಿದ್ದು, ಡಿಕೆಶಿ ದಿಢೀರ್‌ ಒಗ್ಗಟ್ಟು!

ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಕೆ ಮಾಡಿರುವುದನ್ನು ಹಿಂಪಡೆಯಬೇಕೆಂದು ನನಗೆ ಒತ್ತಾಯಿಸಿದರು. ಆದರೆ ಅವರಿಗೆ ನನ್ನ ಹೆಸರು ದೆಹಲಿಗೆ ಹೋದ ಮೇಲೆ ಹೆಸರು ಬದಲಾವಣೆಯಾಗಿದ್ದು ಹೇಗೆ ಎಂದು ಅವರಿಗೆ ಕೇಳಿದೆ. ಆದರೆ ಈಗ ಅವರ ಬಳಿ ಉತ್ತರ ಇರಲಿಲ್ಲ. ಚುನಾವಣೆಗೆ ಸಾಕಷ್ಟು ಮುಂಚಿತವಾಗಿ ಮೌಖಿಕವಾಗಿ ನನಗೆ ಚುನಾವಣಾ ಪ್ರಚಾರ ನಡೆಸುವುಂತೆ ಸೂಚನೆ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಟಿಕೆಚ್‌ ತಪ್ಪಿಸಿದರು. ಕಾಂಗ್ರೆಸ್‌ ನವರು ಯಾವ ಆಧಾರದ ಮೇಲೆ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಅಭ್ಯರ್ಥಿ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಪಟ್ಟವರೇ ಅಲ್ಲ. ಈ ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇಲ್ಲ. ಶಿಕ್ಷಕರ ಸಮಸ್ಯೆಯ ಬಗ್ಗೆ ತಿಳಿಯದ ವ್ಯಕ್ತಿಗೆ ಟಿಕೆಚ್‌ ಘೋಷಣೆ ಮಾಡಿದ್ದು ಎಷ್ಟುಸರಿ ಎಂದರು.

Latest Videos
Follow Us:
Download App:
  • android
  • ios