ರಾಹುಲ್‌ ಗಾಂಧಿ ಸಭೆಗೆ ಗೈರಾಗಿದ್ದಕ್ಕೆ ವಿಶೇಷ ಅರ್ಥ ಬೇಡ: ಡಾ.ಜಿ.ಪರಮೇಶ್ವರ್‌

ಕಾಂಗ್ರೆಸ್‌ನ ಭಾರತ್‌ ಜೋಡೋ ಭವನ ಉದ್ಘಾಟನೆಗೆ ಗೈರಾದ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ನಾನು ಅರ್ಧ ದಾರಿಗೆ ಬಂದು ನಮ್ಮ ಕ್ಷೇತ್ರದಲ್ಲಿ ಅಪಘಾತವಾದ್ದರಿಂದ ವಾಪಸು ತೆರಳಿದೆ.

Rahul Gandhis absence from the meeting does not mean anything special Says Dr G Parameshwar gvd

ಬೆಂಗಳೂರು (ಏ.19): ‘ಕಾಂಗ್ರೆಸ್‌ನ ಭಾರತ್‌ ಜೋಡೋ ಭವನ ಉದ್ಘಾಟನೆಗೆ ಗೈರಾದ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ನಾನು ಅರ್ಧ ದಾರಿಗೆ ಬಂದು ನಮ್ಮ ಕ್ಷೇತ್ರದಲ್ಲಿ ಅಪಘಾತವಾದ್ದರಿಂದ ವಾಪಸು ತೆರಳಿದೆ. ಕೋಲಾರದ ರಾಹುಲ್‌ ಗಾಂಧಿ ಸಮಾವೇಶಕ್ಕೆ ಬರುವುದಿಲ್ಲ ಮೊದಲೇ ಹೇಳಿದ್ದೆ’ ಎಂದು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ರಾಹುಲ್‌ ಗಾಂಧಿ ಅವರ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ ಎಂಬ ಕಾರಣಕ್ಕೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ. ಕಾಂಗ್ರೆಸ್‌ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಲು ನಾನು ಅರ್ಧ ದಾರಿಗೆ ಬಂದಿದ್ದೆ. 

ಆದರೆ ನಮ್ಮ ಕ್ಷೇತ್ರದಲ್ಲಿ ಅಪಘಾತ ಉಂಟಾಗಿ ನಾನು ಅಲ್ಲಿಗೆ ತೆರಳಲೇಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ವಾಪಸು ಹೋದೆ’ ಎಂದು ಸ್ಪಷ್ಟನೆ ನೀಡಿದರು. ಭವನದ ಕೆಲಸ ನಾನೇ ಶೇ.80 ರಷ್ಟುಮುಗಿಸಿದ್ದೆ. ಹೀಗಾಗಿ ನಾನು ಭವನ ಉದ್ಘಾಟನೆಗೆ ಉದ್ದೇಶಪೂರ್ವಕವಾಗಿ ಗೈರಾಗಲು ಸಾಧ್ಯವೇ ಇಲ್ಲ. ನನ್ನ ಗೈರು ಹಾಜರಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ‘ಇನ್ನು ಕೋಲಾರ ಸಮಾವೇಶಕ್ಕೆ ಬರುವುದಿಲ್ಲ ಎಂದು ಮೊದಲೇ ಹೇಳಿದ್ದೆ. ನಮ್ಮ ಕ್ಷೇತ್ರದಲ್ಲಿ ಚುನಾವಣಾ ಕೆಲಸ ನೋಡಿಕೊಳ್ಳಬೇಕು. ಪ್ರಚಾರ ಕಾರ್ಯ ನಡೆಸಬೇಕು. ಹೀಗಾಗಿ ಬರುವುದಿಲ್ಲ ಎಂದು ಮೊದಲೇ ತಿಳಿಸಿದ್ದೆ’ ಎಂದು ಸ್ಪಷ್ಟಪಡಿಸಿದರು.

ಸಚಿವ ಅಶೋಕ್‌ ವಿರುದ್ಧ ಕಾಂಗ್ರೆಸ್‌ನಿಂದ ಪ್ರತಿಸ್ಪರ್ಧಿ ಯಾರು?: ಕುತೂಹಲ

ನಾಲ್ಕು ಮಂದಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆ: ತುಮಕೂರು ಜಿಲ್ಲೆಯಲ್ಲಿ ಈವರೆಗೆ ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ನಾಲ್ವರು ಜನಪ್ರತಿನಿಧಿಗೆ ಸಲ್ಲುತ್ತದೆ. ಅವರ ಪೈಕಿ ಜಯಚಂದ್ರ, ಡಾ.ಜಿ.ಪರಮೇಶ್ವರ್‌, ಸೊಗಡು ಶಿವಣ್ಣ ಹಾಗೂ ಎಸ್‌.ಆರ್‌. ಶ್ರೀನಿವಾಸ್‌ ಅವರೇ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದವರು. 1989ರಲ್ಲಿ ಮೊದಲ ಬಾರಿಗೆ ಡಾ. ಜಿ. ಪರಮೇಶ್ವರ್‌ ಅವರು ಮಧುಗಿರಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. ಅಂದು ನಡೆದ ಚುನಾವಣೆಯಲ್ಲಿ ಅವರು ಜನತಾದಳದ ರಾಜವರ್ಧನ್‌ ಅವರನ್ನು ಪರಾಭವಗೊಳಿಸಿದ್ದರು. ಆ ಚುನಾವಣೆಯಲ್ಲಿ ಪರಮೇಶ್ವರ್‌ ಅವರು 47 ಸಾವಿರದ 477 ಮತಗಳನ್ನು ಪಡೆದಿದ್ದರು.

1994ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಜನತಾದಳದ ಗಂಗಹನುಮಯ್ಯ ಅವರ ವಿರುದ್ಧ ಪರಾಭವಗೊಂಡರು. ಅಂದಿನ ಚುನಾವಣೆಯಲ್ಲಿ ಪರಮೇಶ್ವರ್‌ ಅವರು ಶೇ. 40.52 ಅಂದರೆ 42 ಸಾವಿರದ 131 ಮತಗಳನ್ನು ಪಡೆದಿದ್ದರು. 1999ರ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್‌ ಪುನಃ ಮಧುಗಿರಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಜಯಗಳಿಸಿ ಎರಡನೇ ಬಾರಿಗೆ ಶಾಸನಸಭೆಗೆ ಆಯ್ಕೆಯಾಗುತ್ತಾರೆ. ಆ ಚುನಾವಣೆಯಲ್ಲಿ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗಂಗಹನುಮಯ್ಯ ಅವರು ಪರಾಭವಗೊಳಿಸಿದ್ದರು. ಪರಮೇಶ್ವರ್‌ ಆ ಚುನಾವಣೆಯಲ್ಲಿ 71 ಸಾವಿರದ 895 ಮತಗಳನ್ನು ಪಡೆದಿದ್ದರು.

2004ರಲ್ಲಿ ನಡೆದ ಚುನಾವಣೆಯಲ್ಲಿ ಪರಮೇಶ್ವರ್‌ ಅವರು ಪುನರ್‌ ಆಯ್ಕೆಯಾಗುತ್ತಾರೆ. ಆಗ ನಡೆದ ಚುನಾವಣೆಯಲ್ಲಿ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್‌. ಕೆಂಚಮಾರಯ್ಯ ಅವರು ಪರಾಭವಗೊಳಿಸಿದ್ದರು. ಪರಮೇಶ್ವರ್‌ ಆ ಚುನಾವಣೆಯಲ್ಲಿ 47 ಸಾವಿರದ 39 ಮತಗಳನ್ನು ಪಡೆದು ಮೂರನೇ ಬಾರಿಗೆ ಆಯ್ಕೆಯಾದರು. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾಗಿ ಮಧುಗಿರಿ ಮೀಸಲು ಕ್ಷೇತ್ರ ರದ್ದಾಗಿ ಕೊರಟಗೆರೆ ಮೀಸಲು ಕ್ಷೇತ್ರವಾಯಿತು. ಆ ಚುನಾವಣೆಯಲ್ಲಿ ಪರಮೇಶ್ವರ್‌ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವಾಲೆ ಚಂದ್ರಯ್ಯ ಅವರನ್ನು ಪರಾಭವಗೊಳಿಸಿ ನಾಲ್ಕನೇ ಬಾರಿಗೆ ಆಯ್ಕೆಯಾದರು. ಆ ಚುನಾವಣೆಯಲ್ಲಿ ಪರಮೇಶ್ವರ್‌ 49 ಸಾವಿರದ 276 ಮತಗಳನ್ನು ಪಡೆದಿದ್ದರು.

ಶೆಟ್ಟರ್‌ ಸೇರಿ ಏಳು ಮಂದಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ: 3 ಹೊಸಬರಿಗೆ ಮಣೆ

2013ರ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಪರಮೇಶ್ವರ್‌ ಜೆಡಿಎಸ್‌ನ ಸುಧಾಕರಲಾಲ್‌ ವಿರುದ್ಧ ಪರಾಭವಗೊಂಡರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಆದರೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರಿಂದ ಮುಖ್ಯಮಂತ್ರಿ ರೇಸ್‌ನಂದ ಹೊರಬಿದ್ದರು. 2018 ರ ಚುನಾವಣೆಯಲ್ಲಿ ಮತ್ತೆ ಜೆಡಿಎಸ್‌ನ ಸುಧಾಕರಲಾಲ್‌ ವಿರುದ್ಧ ಜಯಭೇರಿ ಬಾರಿಸಿ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios