ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಜಿಲ್ಲಾ ಘಟಕದ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಬಾಗಲಕೋಟೆ (ಜು.9) : ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಜಿಲ್ಲಾ ಘಟಕದ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

Add Asianetnews Kannada as a Preferred SourcegooglePreferred

ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಕಾಂಗ್ರೆಸ್‌ ಕಾರ್ಯಕರ್ತರು(Congress workers), ಕೇಂದ್ರ ಸರ್ಕಾರ(Central government) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಕಿಡಿಕಾರಿಕಾರಿದರು.

ರಾಹುಲ್‌ ಸಂಸತ್‌ ಸದಸ್ಯತ್ವ ರದ್ದು: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ(Nagaraj hadli) ಮಾತನಾಡಿ, ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂ​ಧಿದೇಶದ ಒಳಿತಿಗಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ರಾಜಕೀಯ ಟೀಕೆ, ಟಿಪ್ಪಣಿಗಳು ಸಹಜವಾಗಿ ಮಾಡಿದ್ದಾರೆ. ಆದರೆ, ಪ್ರಶ್ನೆಗಳಿಗೆ ಉತ್ತರಿಸಲಾಗದ ಕೇಂದ್ರ ಬಿಜೆಪಿ ಸರ್ಕಾರ(BJP Govt) ರಾಜಕೀಯ ದ್ವೇಷ ಸಾ​ಧಿಸುತ್ತಿದೆ. ಇಂತಹ ರಣಹೇಡಿ ಕೆಲಸ ಮಾಡುವುದು ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್‌ ಗಾಂಧಿ ​ಮಾತನಾಡಿದ್ದು ಕರ್ನಾಟಕದಲ್ಲಿ ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತನಲ್ಲಿ ಪ್ರಕರಣ ದಾಖಲಿಸುವಂತೆ ನೋಡಿಕೊಂಡಿದ್ದಾರೆ. ಅಲ್ಲದೇ ನ್ಯಾಯಾಲಯದ ಮೇಲೆ ಒತ್ತಡ ಹಾಕಿ ನ್ಯಾಯಾಂಗ ವ್ಯವಸ್ಥೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಹೈಕೋರ್ಚ್‌ ಮೇಲೆ ಒತ್ತಡ ಹಾಕಿ ರಾಹುಲ್‌ ಗಾಂಧಿ ​ವಿರುದ್ಧ ತೀರ್ಪು ಬರುವಂತೆ ನೋಡಿಕೊಂಡಿದ್ದಾರೆ. ಇಂತಹ ರಾಜಕೀಯ ನಾಟಕ ಬಹಳ ದಿನ ನಡೆಯುವುದಿಲ್ಲ. ಅ​ಧಿಕಾರದಲ್ಲಿ ಯಾರು ಶಾಶ್ವತವಾಗಿ ಇರುವುದಿಲ್ಲ. ಇದನ್ನು ನೆನಪಿಟ್ಟುಕೊಳ್ಳಿ ಎಂದರು.

ಹೋರಾಟಗಾರ ಕುತುಬುದ್ಧೀನ್‌ ಖಾಜಿ ಮಾತನಾಡಿ, ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶಾಸಕಾಂಗ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ದೇಶಕ್ಕೆ ಸಂಬಂಧಪಟ್ಟಂತೆ ಪ್ರಶ್ನೆ ಮಾಡುವುದು ಕೂಡಾ ದೇಶ ವಿರೋಧಿ ​ಅಂತ ಬಿಂಬಿಸಲು ಹೊರಟಿದ್ದಾರೆ ಬಿಜೆಪಿ ನಾಯಕರು. ಇಂತಹ ಗೊಡ್ಡು ಬೆದರಿಕೆಗೆ ಯಾರು ಹೆದರುವುದಿಲ್ಲ. ಇದೇ ರೀತಿ ಮುಂದುವರೆದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಹುಲ್‌ ಗಾಂಧಿಗೆ ಶಿಕ್ಷೆ ತಗ್ಗಿಸದ ಹೈಕೋರ್ಟ್‌: ಅನರ್ಹತೆ ತಡೆಯಾಜ್ಞೆ ಅರ್ಜಿ ತಿರಸ್ಕಾರ

ಈ ವೇಳೆ ಮುಖಂಡರಾದ ಭರತ ಈಟಿ, ಮುತ್ತು ಜೋಳದ, ಸಂಜೀವ ವಾಡ್ಕರ, ಶ್ರೀನಿವಾಸ ಬಳ್ಳಾರಿ, ಹನುಮಂತ ರಾಕುಂಪಿ, ಎಚ್‌.ಬಿ.ಗೊರವರ, ಶೈಲಜಾ ನಾಯಕ, ಮಂಜುಳಾ ಭೂಸಾರೆ, ಎಸ್‌. ಎನ್‌.ರಾಂಪೂರ, ಮನೊ ೕಹರ ಏಳ್ಳಮ್ಮಿ, ದ್ಯಾಮಣ್ಣ ಗಾಳಿ ಇತರರು ಇದ್ದರು.