Asianet Suvarna News Asianet Suvarna News

ವಿಪಕ್ಷ ನಾಯಕ ಸ್ಥಾನಕ್ಕೇ ರಾಹುಲ್‌ ಗಾಂಧಿ ಅಪಮಾನ: ಕೇಂದ್ರ ಸರ್ಕಾರ

ಅಗ್ನಿಪಥ್ (ಅಗ್ನಿವೀರ) ಯೋಜನೆ ಕುರಿತ ಹೇಳಿಕೆ ಹಾಗೂ ಅಯೋಧ್ಯೆಯ ಜನರಿಗೆ ಪರಿಹಾರ ನೀಡಿಲ್ಲ ಎಂಬ ಹೇಳಿಕೆಗಳಿಗೆ ರಾಹುಲ್ ಕ್ಷಮೆ ಯಾಚಿಸಬೇಕು. ಅಯೋಧ್ಯೆಯ ಸ್ಥಳೀಯ ವ್ಯಾಪಾರಿಗಳಿಗೆ 1,253 ಕೋಟಿ ರು. ಪರಿಹಾರ ನೀಡಿ ಸ್ಥಳಾಂತರಕ್ಕೆ ಸಹಾಯ ಮಾಡಲಾಗಿದೆ ಎಂದ ವೈಷ್ಣವ್‌ 
 

Rahul Gandhi is an Insult to the Position of Opposition Leader Says Central Government grg
Author
First Published Jul 2, 2024, 5:00 AM IST

ನವದೆಹಲಿ(ಜು.02):  ‘ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಿಂದೂಗಳ ವಿರುದ್ಧ ಹೇಳಿಕೆ ನೀಡಿದ್ದಾರೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸದನದಲ್ಲೇ ಸುಳ್ಳು ಹೇಳಿದ್ದಾರೆ. ಈ ಬೇಜವಾಬ್ದಾರಿ ಭಾಷಣದ ಮೂಲಕ ತಮ್ಮ ಜವಾಬ್ದಾರಿಯುತ ಸ್ಥಾನವನ್ನು ಅವಮಾನಿಸಿದ್ದಾರೆ’ ಎಂದು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಕಿರಣ್ ರಿಜಿಜು ಆರೋಪಿಸಿದ್ದಾರೆ.

ರಾಹುಲ್‌ ಅವರ ಕೆಲ ಹೇಳಿಕೆಗಳನ್ನು ಪ್ರಶ್ನಿಸಿ ಕ್ರಮ ಕೈಗೊಳ್ಳುವಂತೆ ಬಿಜೆಪಿಯು ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

News Hour: ಹಿಂದೂ, ಹಿಂಸೆ.. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಫಸ್ಟ್​ಡೇ ಪವರ್ ಷೋ!

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈಷ್ಣವ್‌, ‘ಅಗ್ನಿಪಥ್ (ಅಗ್ನಿವೀರ) ಯೋಜನೆ ಕುರಿತ ಹೇಳಿಕೆ ಹಾಗೂ ಅಯೋಧ್ಯೆಯ ಜನರಿಗೆ ಪರಿಹಾರ ನೀಡಿಲ್ಲ ಎಂಬ ಹೇಳಿಕೆಗಳಿಗೆ ರಾಹುಲ್ ಕ್ಷಮೆ ಯಾಚಿಸಬೇಕು. ಅಯೋಧ್ಯೆಯ ಸ್ಥಳೀಯ ವ್ಯಾಪಾರಿಗಳಿಗೆ 1,253 ಕೋಟಿ ರು. ಪರಿಹಾರ ನೀಡಿ ಸ್ಥಳಾಂತರಕ್ಕೆ ಸಹಾಯ ಮಾಡಲಾಗಿದೆ’ ಎಂದರು.

‘ಅಲ್ಲದೆ, ಅಗ್ನಿವೀರ ಹಾಗೂ ರೈತರ ಕುರಿತ ಸರ್ಕಾರದ ನೀತಿಯ ಬಗ್ಗೆಯೂ ರಾಹುಲ್‌ ಸುಳ್ಳು ಆರೋಪ ಮಾಡಿದ್ದಾರೆ. ಅಗ್ನಿವೀರರಿಗೆ ನಿವೃತ್ತಿ ವೇಳೆ ನಿಧಿ ನೀಡಲಾಗುತ್ತದೆ ಹಾಗೂ ರೈತರ ಬೆಳೆಗೆ ಬೆಂಬಲ ಬೆಲೆಯನ್ನು ಸರ್ಕಾರ ನೀಡುತ್ತಿದೆ’ ಎಂದು ಅವರು ಕಿಡಿಕಾರಿದರು.‘

ಈ ರೀತಿ ಸುಳ್ಳು ಆರೋಪಗಳನ್ನು ಮಾಡಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಸುಷ್ಮಾ ಸ್ವರಾಜ್‌ರಂಥ ಮೇರು ವ್ಯಕ್ತಿಗಳು ಅಲಂಕರಿಸಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಹುಲ್‌ ಅವಮಾನ ಮಾಡುತ್ತಿದ್ದಾರೆ’ ಎಂದು ವೈಷ್ಣವ್‌ ದೂರಿದರು.

Latest Videos
Follow Us:
Download App:
  • android
  • ios