Asianet Suvarna News Asianet Suvarna News

ಬಿಜೆಪಿ ಕಚೇರಿಯತ್ತ ರಾಹುಲ್‌ ಗಾಂಧಿ ಫ್ಲೈಯಿಂಗ್‌ ಕಿಸ್‌... ವಿಡಿಯೋ ವೈರಲ್

ರಾಜಸ್ಥಾನದಲ್ಲಿ ಸಾಗುತ್ತಿರುವ ಭಾರತ್‌ ಜೋಡೊ ಯಾತ್ರೆ ವೇಳೆ, ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬಿಜೆಪಿ ಕಚೇರಿ ಮೇಲೆ ನಿಂತಿದ್ದ ಜನರತ್ತ ಫ್ಲೈಯಿಂಗ್‌ ಕಿಸ್‌ ಮಾಡಿದ ಪ್ರಸಂಗ ಮಂಗಳ​ವಾರ ನಡೆಯಿತು.

Rahul gandhi gave flying kiss to bjp office in Rajasthan watch viral video
Author
First Published Dec 7, 2022, 6:52 AM IST

ಜೈಪುರ: ರಾಜಸ್ಥಾನದಲ್ಲಿ ಸಾಗುತ್ತಿರುವ ಭಾರತ್‌ ಜೋಡೊ ಯಾತ್ರೆ ವೇಳೆ, ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬಿಜೆಪಿ ಕಚೇರಿ ಮೇಲೆ ನಿಂತಿದ್ದ ಜನರತ್ತ ಫ್ಲೈಯಿಂಗ್‌ ಕಿಸ್‌ ಮಾಡಿದ ಪ್ರಸಂಗ ಮಂಗಳ​ವಾರ ನಡೆಯಿತು. ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರ ಝಾಲಾವರ್‌ ನಗರದಲ್ಲಿರುವ ಬಿಜೆಪಿ ಕಚೇ​ರಿಯ ಮೇಲೆ ಯಾತ್ರೆ ನೋಡಲು ಬೆಳಗ್ಗೆ 6ರಿಂದಲೇ ಜನ ನಿಂತಿದ್ದರು. ಬೆಳಗ್ಗೆ 7 ಗಂಟೆಗೆ ಆ ಮಾರ್ಗವಾಗಿ ಸಾಗುತ್ತಿದ್ದ ರಾಹುಲ್‌ ಅಲ್ಲಿದ್ದ ಜನರಿಗೆ ಕೈ ಬೀಸಿ ನಂತರ ಫ್ಲೈಯಿಂಗ್‌ ಕಿಸ್‌ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಸಚಿನ್‌ ಪೈಲಟ್‌ ಸೇರಿ ಅನೇಕರಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ರಾಜಸ್ಥಾನ ಘಟಕ, ‘ರಾಹುಲ್‌ ಗಾಂಧಿ ಅವರಿಗೆ ಯಾರ ಮೇಲೂ ದ್ವೇಷವಿಲ್ಲ ಎಂಬುದರ ನಿರ್ದಶನವಿದು’ ಎಂದು ಬಣ್ಣಿಸಿದೆ. ದ್ವೇಷಕ್ಕೆ ಒಂದೇ ಉತ್ತರ ಪ್ರೀತಿ ಎಂದು ಬರೆದು ಈ ವಿಡಿಯೋವನ್ನು ರಾಜಸ್ತಾನ ಕಾಂಗ್ರೆಸ್ ಟ್ವಿಟ್ಟರ್ ಪೇಜ್ ಪೋಸ್ಟ್ ಮಾಡಿದೆ.

ಭಾರತ್ ಜೋಡೋ ಯಾತ್ರೆ ನಂತರ ಮುಂದೇನು? ಕಾಂಗ್ರೆಸ್‌ನ ಮೆಘಾ ಪ್ಲಾನ್ ಬಹಿರಂಗ!

ಬಿಜೆಪಿಗರು ಜೈ ಶ್ರೀರಾಂ ಎನ್ನುತ್ತಾರೆ 'ಜೈ ಸಿಯಾ ರಾಂ' ಏಕೆ ಹೇಳಲ್ಲ?

Follow Us:
Download App:
  • android
  • ios