Asianet Suvarna News Asianet Suvarna News

ಬಿಜೆಪಿಗರು ಜೈ ಶ್ರೀರಾಂ ಎನ್ನುತ್ತಾರೆ 'ಜೈ ಸಿಯಾ ರಾಂ' ಏಕೆ ಹೇಳಲ್ಲ?

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗುತ್ತಾರೆ. ಅದರೆ ಅವರು ‘ಜೈ ಸಿಯಾ ರಾಮ್‌’ (ಜೈ ಸೀತಾ ರಾಮ್‌) ಎಂದು ಹೇಳುವುದಿಲ್ಲ ಏಕೆಂದರೆ ಅವರು ಸೀತೆಯನ್ನು ಪೂಜಿಸುವುದಿಲ್ಲ ಎಂದು ಹೇಳಿಕೆ ನೀಡಿ ರಾಹುಲ್‌ ಗಾಂಧಿ ಹೊಸ ವಿವಾದ ಸೃಷ್ಟಿಸಿದ್ದಾರೆ.

BJP does not worship Sita Rahul gandhi new controversy statement akb
Author
First Published Dec 4, 2022, 11:02 AM IST

ನವದೆಹಲಿ: ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗುತ್ತಾರೆ. ಅದರೆ ಅವರು ‘ಜೈ ಸಿಯಾ ರಾಮ್‌’ (ಜೈ ಸೀತಾ ರಾಮ್‌) ಎಂದು ಹೇಳುವುದಿಲ್ಲ ಏಕೆಂದರೆ ಅವರು ಸೀತೆಯನ್ನು ಪೂಜಿಸುವುದಿಲ್ಲ ಎಂದು ಹೇಳಿಕೆ ನೀಡಿ ರಾಹುಲ್‌ ಗಾಂಧಿ ಹೊಸ ವಿವಾದ ಸೃಷ್ಟಿಸಿದ್ದಾರೆ.

ಭಾರತ ಜೋಡೋ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ (Rahul Gandhi) ಮಧ್ಯಪ್ರದೇಶದ (Madhya Pradesh) ಅಗರ್‌ ಮಾಲ್ವಾದಲ್ಲಿ(Agar Malwa), ‘ಜೈ ಸೀತಾ ರಾಮ್‌ ಎಂದರೆ ಸೀತೆ ಹಾಗೂ ರಾಮ ಇಬ್ಬರೂ ಒಂದೇ ಎಂದಾಗಿದೆ. ಆದರೆ ಅವರು (ಆರ್‌ಎಸ್‌ಎಸ್‌) ಜೈ ಸೀತಾ ರಾಮ್‌ ಎನ್ನುವುದಿಲ್ಲ ಏಕೆಂದರೆ ಅಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಅವರು ಸೀತಾಳನ್ನು ಹೊರಗಿಟ್ಟಿದ್ದಾರೆ’ ಎಂದು ಹೇಳಿದರು. ‘ನಾನು ಆರ್‌ಎಸ್‌ಎಸ್‌ ಮಿತ್ರರಿಗೆ ಹೀಗೆ ಸೀತಾ ಜೀ ಅವರನ್ನು ಅವಮಾನಿಸಬೇಡಿ, ಜೈ ಸೀತಾ ರಾಮ್‌ ಎಂದು ಜಪಿಸಿ ಎಂದು ಕೋರಿಕೊಳ್ಳುತ್ತೇನೆ’ ಎಂದು ಕೋರಿದರು. ರಾಹುಲ್‌ ಹೇಳಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಬಿಜೆಪಿ ನಾಯಕರು ಆಕ್ಷೇಪಿಸಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು (Mallikarjuna Kharge) 10 ತಲೆ ರಾವಣ ಎಂದಿದ್ದರು. ಇದರ ಬೆನ್ನಲ್ಲೇ ಬಿಜೆಪಿಗರು ರಾಮನ ಅಸ್ತಿತ್ವ ನಂಬದ ಕಾಂಗ್ರೆಸ್ಸಿಗರು ಮೋದಿಯವರನ್ನು ರಾವಣನಿಗೆ ಹೋಲಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.

ಭಾರತ್‌ ಜೋಡೋ ಯಾತ್ರೆಯಲ್ಲಿ ಕಂಪ್ಯೂಟರ್‌ ಬಾಬಾ

ಮಧ್ಯಪ್ರದೇಶದಲ್ಲಿ (Madhya Pradesh) ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ (Bharat Jodo Yatra) ಸ್ವಘೋಷಿತ ದೇವಮಾನವ (Godman) ಕಂಪ್ಯೂಟರ್‌ ಬಾಬಾ (computer baba)ಎಂದೇ ಖ್ಯಾತರಾದ ನಾಮದೇವ ದಾಸ್‌ ತ್ಯಾಗಿ ರಾಹುಲ್‌ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ತ್ಯಾಗಿ ಅವರನ್ನು 2020ರಲ್ಲಿ ಸರ್ಕಾರಿ ಭೂಮಿ ಅಕ್ರಮ ಒತ್ತುವರಿಯಲ್ಲಿ ಪಂಚಾಯತ್‌ ಸಿಬ್ಬಂದಿಯಮೇಲೆ ಹಲ್ಲೆ ಮಾಡಿರುವುದರ ಜೊತೆಗೆ ಆ ಸ್ಥಳದಲ್ಲಿ ಅಕ್ರಮ ಆಶ್ರಮವನ್ನು ಕಟ್ಟಿರುವುದರಿಂದ ಅವರನ್ನು ಬಂಧಿಸಲಾಗಿತ್ತು. ಇವರು ಶನಿವಾರ ಯಾತ್ರೆಯನ್ನು ಸೇರಿಕೊಂಡು ದಿಗ್ವಿಜಯ್‌ ಸಿಂಗ್‌ ಹಾಗೂ ಹಲವು ಕಾಂಗ್ರೆಸ್‌ ನಾಯಕರೊಂದಿಗೆ ಹೆಜ್ಜೆ ಹಾಕಿದರು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಮಾಜಿ ಕಾಂಗ್ರೆಸಿಗ ನರೇಂದ್ರ ಸಲುಜಾ(Narendra Saluja), ಕಾಂಗ್ರೆಸ್‌ನಲ್ಲಿ ಕನ್ಹಯ್ಯ ಕುಮಾರ್‌(Kanhaiya Kumar), ಸ್ವರಾ ಭಾಸ್ಕರ್‌ ನಂತರ ಈಗಾ ಕಂಪ್ಯೂಟರ್‌ ಬಾಬಾ, ಇದು ಯಾವ ರೀತಿಯ ಭಾರತ್‌ ಜೋಡೋ ಯಾತ್ರೆ ಮತ್ತು ಯಾವ ರೀತಿಯ ವ್ಯಕ್ತಿಗಳು ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಕಾಂಗ್ರೆಸ್‌ ಸಚಿವ ರಾಜ್‌ಕುಮಾರ್‌ ಪಟೇಲ್‌ , ಭಾರತ್‌ ಜೋಡೋ ಯತ್ರೆಯಲ್ಲಿ ಯಾರು ಬೇಕಾದರು ಭಾಗವಹಿಸಬಹುದು. ಈಗಾಗಲೇ ಹಲವಾರು ಧರ್ಮಗುರುಗಳು ಭಾಗವಹಿಸಿದ್ದಾರೆ ಎಂದಿದ್ದಾರೆ.
 

Follow Us:
Download App:
  • android
  • ios