ಜೇವರ್ಗಿ: ಮಳೆಯಲ್ಲೇ ರಾಹುಲ್ ಗಾಂಧಿ ಅಬ್ಬರದ ಪ್ರಚಾರ
ಕಾಂಗ್ರೆಸ್ ಸಮಾವೇಶ ಶುರು ವಾಗುತ್ತಿದ್ದಂತೆಯೇ ಜೇವರ್ಗಿಯಲ್ಲಿ ಗುಡುಗಿನ ಅಬ್ಬರ, ಕೋಲ್ಮಿಂಚಿನ ಆರ್ಭಟದೊಂದಿಗೆ ಭಾರೀ ಮಳೆ ಶುರುವಾಗಿತ್ತು. ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ರಾಹುಲ್ ಗಾಂಧಿ ಜೇವರ್ಗಿ ಭೇಟಿ, ಹವಾಮಾನದ ವೈಪರೀತ್ಯ, ಮಳೆ ಕಾರಣದಿಂದ ಕೊಂಚ ವಿಳಂಬವಾಯ್ತು.
ಕಲಬುರಗಿ(ಏ.29): ರಾಜ್ಯದ ಬಿಜೆಪಿ ಸರ್ಕಾರವು ಭ್ರಷ್ಟರ ಕೂಟ, ಚೋರಿ ಸರ್ಕಾರ. ಬಿಜೆಪಿಗೆ 40 ನಂಬರ್ ಜೊತೆ ಪ್ಯಾರ್ ಆಗಿದೆ. ಅದಕ್ಕೇ ಆ ಪಕ್ಷಕ್ಕೆ 40 ಸೀಟ್‌ನಲ್ಲಿ ಮಾತ್ರ ನೀಡಿ ಗೆಲ್ಲಿಸಿ, ಆದರೆ ಕಾಂಗ್ರೆಸ್‌ಗೆ 150 ಸ್ಥಾನದಲ್ಲಿ ಆಶೀರ್ವಾದ ಮಾಡಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಮನವಿ ಮಾಡಿದರು.
ಜೇವರ್ಗಿ ಪಟ್ಟಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇತ್ತ ಕಾಂಗ್ರೆಸ್ ಸಮಾವೇಶ ಶುರು ವಾಗುತ್ತಿದ್ದಂತೆಯೇ ಜೇವರ್ಗಿಯಲ್ಲಿ ಗುಡುಗಿನ ಅಬ್ಬರ, ಕೋಲ್ಮಿಂಚಿನ ಆರ್ಭಟದೊಂದಿಗೆ ಭಾರೀ ಮಳೆ ಶುರುವಾಗಿತ್ತು. ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ರಾಹುಲ್ ಗಾಂಧಿ ಜೇವರ್ಗಿ ಭೇಟಿ, ಹವಾಮಾನದ ವೈಪರೀತ್ಯ, ಮಳೆ ಕಾರಣದಿಂದ ಕೊಂಚ ವಿಳಂಬವಾಯ್ತು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಳ್ಳಾರಿಯನ್ನು ಜೀನ್ಸ್ ಕ್ಯಾಪಿಟಲ್ ಮಾಡುವೆ: ರಾಹುಲ್ ಗಾಂಧಿ
ಮಳೆಯಲ್ಲೂ ಮಾತು:
ಮಂಗಳೂರಿನಿಂದ ವಿಶೇಷ ವಿಮಾನದಲ್ಲಿ ಕಲಬುರಗಿಗೆ ಬಂದಿಳಿದಿದ್ದ ರಾಹುಲ್ ಗಾಂಧಿ ವಿಮಾನ ನಿಲ್ದಾಣದಿಂದಲೇ ಹೆಲಿಕಾಪ್ಟರ್ ಮೂಲಕ ಜೇವರ್ಗಿಗೆ ಬರುವ ಹೊತ್ತಿಗೆ ಶುರುವಾದ ಮಳೆ ಸತತ 3 ಗಂಟೆ ಬಿರುಸಿನಿಂದ ಸುರಿಯಿತು. ತಾಲೂಕು ಕ್ರೀಡಾಂಗಣ ವೇದಿಕೆಗೆ ಮಳೆಯನ್ನೂ ಲೆಕ್ಕಿಸದೆ ಆಗಮಿಸಿದ ರಾಹುಲ್, ಧಾರಾಕಾರ ಮಳೆ ನಡುವೆಯೇ ಜನರತ್ತ ಕೈ ಬೀಸುತ್ತ ಮಾತಿಗೆ ಮುಂದಾದರು. ಮುಖ್ಯ ವೇದಿಕೆಯಲ್ಲೂ ಮಳೆ ನೀರು ಒಳಗೆ ನುಗ್ಗಿ ಭಾರಿ ತೊಂದರೆ ಉಂಟು ಮಾಡಿತ್ತಾದರೂ ಅದನ್ನೆಲ್ಲ ಬದಿಗೊತ್ತಿ ರಾಹುಲ್ ಮಾತಿಗಿಳಿದರು.
40% ವಿರುದ್ಧ ವಾಗ್ದಾಳಿ:
ಕರ್ನಾಟಕದಲ್ಲಿ ಇದುವರೆಗೂ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರ ನಿಮ್ಮಿಂದ ಚುನಾಯಿತವಾದ ಸರ್ಕಾರವಾಗಿರಲಿಲ್ಲ. ಬಿಜೆಪಿಯವರು ಕೆಲವು ಶಾಸಕ ರನ್ನು ಬೆಲೆ ಕೊಟ್ಟು ಖರೀದಿಸಿದ್ದರ ಪರಿಣಾಮ ಈ ಸರ್ಕಾರ ಹುಟ್ಟಿತು ಎಂದು ಹರಿಹಾಯ್ದರು.
ಮೋದಿ ಹೇಳಿದ ‘ಆತ್ಮಹತ್ಯೆ ಜೋಕಿಗೆ’ ರಾಹುಲ್, ಪ್ರಿಯಾಂಕಾ ಕಿಡಿ
ಖಾಲಿ ಹುದ್ದೆ ಭರ್ತಿ:
ಕಲಂ 371 (ಜೆ) ಬಂದರೂ ಬಿಜೆಪಿ ಅದರ ಸರಿಯಾದ ಅನುಷ್ಠಾನಕ್ಕೆ ಮುಂದಾಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಕ್ಷಣ ಖಾಲಿ ಹುದ್ದೆ ತುಂಬುತ್ತೇವೆ. ಕೆಕೆಆರ್‌ಡಿಬಿಗೆ ವಾರ್ಷಿಕ 5 ಸಾವಿರ ಕೋಟಿ ರು ಅನುದಾನ ನೀಡುತ್ತೇವೆಂದು ಭರವಸೆ ನೀಡಿದರು.
ಕುಷ್ಟಗಿ ಕಾರ‍್ಯಕ್ರಮ ರದ್ದು:
ಜೇವರ್ಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಅಲ್ಲಿ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಜೇವರ್ಗಿಯಿಂದ ಕುಷ್ಟಗಿ ಬರುವ ಬದಲಿಗೆ ಬಳ್ಳಾರಿ ಯ ಕಾರ್ಯಕ್ರಮಕ್ಕೆ ಪ್ರಯಾಣ ಬೆಳೆಸಿದ್ದರಿಂದ ಕುಷ್ಟಗಿ ಪಟ್ಟಣದ ಕಾರ್ಯಕ್ರಮದಲ್ಲಿ ರಾಹುಲ್ ಭಾಗವಹಿಸಲಿಲ್ಲ. ಆದ್ದರಿಂದ ಕಾಂಗ್ರೆಸ್ ಆಯೋಜಿಸಿದ್ದ ಮಹಿಳಾ ಸಂವಾದ ಹಾಗೂ ಬಯ್ಯಾಪುರ ಚುನಾವಣೆಯ ಪ್ರಚಾರ ಕಾರ್ಯಕ್ರಮ ರದ್ದುಗೊಳಿಸಲಾಯಿತು.